-->
ಆದರ್ಶ ಶಿಕ್ಷಕರು : ಸಂಚಿಕೆ - 1

ಆದರ್ಶ ಶಿಕ್ಷಕರು : ಸಂಚಿಕೆ - 1

ಆದರ್ಶ ಶಿಕ್ಷಕರು : ಸಂಚಿಕೆ - 1

ಸೆಪ್ಟೆಂಬರ್ - 5 - 2022
ಶಿಕ್ಷಕರ ದಿನಾಚರಣೆ
ತಮಗೆ ಆದರ್ಶವಾದ ಶಿಕ್ಷಕರ ಬಗೆಗೆ ಜಗಲಿಯ ಮಕ್ಕಳು ಬರೆದಿರುವ ಅನಿಸಿಕೆ ಇಲ್ಲಿದೆ           ನನ್ನ ಹೆಸರು ಪೂರ್ಣಿಮ ಕೋಟ್ಯಾನ್ ಮಾರ್ನಾಡ್. ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. "ಕಲ್ಲನ್ನು ಶಿಲೆಯಾಗಿಸುವ ಶಿಲ್ಪಿಯೇ ಶಿಕ್ಷಕ".
             ನನ್ನ ಜೀವನದಲ್ಲೂ ಗುರುಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಾನು ಹೈಸ್ಕೂಲಿಗೆ ಬರುವವರೆಗೂ ಬಾವಿಯೊಳಗಿನ ಕಪ್ಪೆಯ ಹಾಗೆ ಇದ್ದೆ. ಹೈಸ್ಕೂಲಿನಲ್ಲಿ ಒಳ್ಳೆಯ ಮನಸ್ಸಿನ ಶಿಕ್ಷಕರಿದ್ದರು. ಆ ಪೈಕಿ ಒಬ್ಬರು ಜೀವನ ಪೂರ್ತಿ ನೆನಪಿನಲ್ಲಿ ಉಳಿದಿದ್ದಾರೆ ಅವರೇ ನನ್ನ ಗುರುವರ್ಯರು ಡಾ. ರಾಮಕೃಷ್ಣ ಶಿರೂರು ಸರ್....
        ಯಾವುದೇ ಸಾಧನೆ ಮಾಡಬೇಕಾದರೂ ಧೈರ್ಯ ಮತ್ತು ಶ್ರಮ ಮುಖ್ಯ. ಶಿಕ್ಷಕರು ನಮ್ಮ ಜೀವನಕ್ಕೆ ಸನ್ಮಾರ್ಗ ತೋರಿಸುತ್ತಾರೆ. ನಾವು ತಪ್ಪು ಮಾಡಿದರೆ ಅದು ಸರಿ ಅಲ್ಲ ತಪ್ಪು ಎಂದು ತಿದ್ದುತ್ತಾರೆ. ನನ್ನಲ್ಲೂ ಗುರಿ ಸಾಧಿಸುವ ಛಲ ತಂದವರು ನನ್ನ ಗುರುಗಳು. ತಂದೆಯ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿದ ಅವರು ನನ್ನಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು, ನನ್ನಲ್ಲಿದ್ದ ಭಾಷಣ ಕಲೆ, ನಿರೂಪಣಾ ಕಲೆಗಳನ್ನು ಉತ್ತಮವಾದ ಮಾರ್ಗದರ್ಶನ ಹಾಗೂ ಸಾಹಿತ್ಯವೆಂಬ ಪದದ ಅರ್ಥ ತಿಳಿಯದ ನನಗೆ ಸಾಹಿತ್ಯದ ಅಭಿರುಚಿ ತೋರಿಸಿ ಸಾಹಿತ್ಯ ಲೋಕದಲ್ಲಿ ಹಾಗೂ ಬರಹ ಲೋಕದಲ್ಲಿ ಸಣ್ಣದೊಂದು ಹೆಸರು ಮಾಡಲು ಮತ್ತು ಸಮಾಜದಲ್ಲಿ ನನ್ನನೋರ್ವಳನ್ನು ಗುರುತಿಸಿಕೊಳ್ಳುವಂತೆ ಮಾಡಿ ವೇದಿಕೆಗೆ ಕಲ್ಪಿಸಿದ ಕೀರ್ತಿ ನನ್ನ ಗುರುಗಳದ್ದು. ವಿದ್ಯಾರ್ಥಿಯೆಂಬ ಕಲ್ಲನ್ನು ಶಿಲೆಯಾಗಿಸಿದವರು. ಇವರ ಸ್ಪೂರ್ತಿದಾಯಕ ಮಾತುಗಳನ್ನ ಕೇಳುತ್ತ ಕೂತರೆ ಕನ್ನಡ ಸರಸ್ವತಿಯೇ ಇವರ ಪದಗಳಲ್ಲಿ ಇರುವಂತಹ ಅನುಭೂತಿ. ಸಾಮಾನ್ಯರಂತೆ ಇದ್ದ ನನ್ನಲ್ಲಿ ಗುರಿ ಸಾಧಿಸುವ ಛಲ ಹುಟ್ಟಿಸಿದ ಇವರೇ ಆದರ್ಶ.
.............. ಪೂರ್ಣಿಮ ಕೋಟ್ಯಾನ್ ಮಾರ್ನಾಡ್ 
ಪ್ರಥಮ ಪಿ.ಯು.ಸಿ
ಹೋಲಿ ರೋಸರಿ ಪದವಿ ಪೂರ್ವ ಕಾಲೇಜು 
ಮೂಡುಬಿದಿರೆ , ದಕ್ಷಿಣಕನ್ನಡ ಜಿಲ್ಲೆ
******************************************
       ಅಕ್ಷರ ಕಲಿಸಿ ಕೊಟ್ಟ ಎಲ್ಲಾ ಗುರು ವೃಂದದವರಿಗಿ ಶಿಕ್ಷಕರ ದಿನಾಚರಣಿಯ ಶುಭಾಶಯಗಳು. ನನ್ನ ಹೆಸರು ಅನುಷಾ ವಾಲ್ಡರ್. ನನಗೆ ಜೀವನ ಪಾಠವನ್ನು ಹೇಳಿಕೊಟ್ಟ ನನ್ನ ಪ್ರೀತಿಯ ಮನಮುಟ್ಟುವ ಟೀಚರ್ ಎಂದರೆ ವಿದ್ಯಾ ಮೇಡಂ. 
ಸರಿ - ತಪ್ಪುಗಳಾಚೆ ಬದುಕಿನ ದಾರಿ ತೋರಿದ ಪ್ರೀತಿಯ ಶಿಕ್ಷಕರು ಇವರಾಗಿದ್ದಾರೆ. ಇವರು ಒಂದು ಟೀಚರ್ ಅಲ್ಲ ನನಗೆ ತಾಯಿಕೂಡಾ. ಅಮ್ಮನಂತೆ ಇವರು ನನಗೆ ಬುದ್ದಿ ಮಾತನ್ನು ಹೇಳಿಕೊಟ್ಟ ದೇವತೆ. ಇವರು ನನಗೆ 4ನೇ ತರಗತಿಯಿಂದ 6ನೇ ತರಗತಿ ತನಕ ವಿದ್ಯೆ ಕಲಿಸಿದ್ದಾರೆ. 5 ನೇ ತರಗತಿಯಲ್ಲಿ ಅವರು ನನ್ನ ಕ್ಲಾಸ್ ಟೇಚರ್ ಆಗಿದ್ದರು. ಇವರು ಕಠಿಣವಾದ ಶಿಸ್ತನ್ನು ಪಾಲಿಸುತ್ತಾರೆ. ಶಿಕ್ಷಿಸಿ, ಕ್ಷಮಿಸಿ, ಕಲಿಸಿ ನನ್ನ ಬಾಳನ್ನು ಬೆಳಗಿಸಿದ ನಿಮಗೆ ನನ್ನ ಹೃದಯ ಪೂರ್ವಕ ದನ್ಯವಾದಗಳು. ಇವರು ನನಗೆ ಒಳ್ಳೆಯ ನಡವಳಿಕೆಗಳನ್ನು ಕಲಿಸಿಕೊಟ್ಟಿದ್ದಾರೆ. ಇವರು ತೊಂದರೆಯಲ್ಲಿ ಇರುವ ವಿಧ್ಯಾರ್ಥಿಗಳಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಅದರಲ್ಲೂ ಇವರು ನನಗೆ ಕಷ್ಟದಲ್ಲಿರುವಾಗ ತುಂಬಾ ತುಂಬಾ ಸಹಾಯ ಮಾಡಿದ್ದಾರೆ. ನಾನು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಅವರು ಸದಾ ಪ್ರೋತ್ಸಾಹ ನೀಡುತ್ತಿದ್ದರು. ನಾನು ಅವರನ್ನು ಬಹಳ ಗೌರವದಿಂದ ನೋಡುತ್ತೇನೆ. ಇವರು ಎಲ್ಲಾ ಮಕ್ಕಳನ್ನು ಒಂದೇ ಸಮನಾಗಿ ನೋಡಿ ಕೊಳ್ಳುತ್ತಾರೆ. ಈಗ ಇವರು ಬೇರೆ ಶಾಲೆಯಲ್ಲಿ ಇದ್ದರೂ ನನಗೆ ಇವರ ನೆನಪುಗಳು ಬರುತ್ತಿರುತ್ತವೆ. ನನ್ನ ಜೀವನಕ್ಕೆ ದಾರಿ ದೀಪ ಹಾಗೂ ನನ್ನ ಪ್ರತಿಯೊಂದು ಕಷ್ಟಗಳಿಗೆ ಮಾರ್ಗದರ್ಶಕರಾಗಿ ನನಗೆ ಸ್ಫೂರ್ತಿಯನ್ನು ನೀಡಿದ ನನ್ನ ನೆಚ್ಚಿನ ಶಿಕ್ಷಕಿ. ಇವರು ಕರುಣೆಯ ಸಾಗರ. ನನ್ನ ನೆಚ್ಚಿನ ವಿದ್ಯಾ ಮೇಮ್ ನಿಮಗೆ ಶಿಕ್ಷಕರ ದಿನಾಚರಣಿಯ ಶುಭಾಶಯಗಳು.
...................................... ಅನುಷಾ ವಾಲ್ಡರ್ 
8ನೇ ತರಗತಿ 
ಸರಕಾರಿ ಪದವಿಪೂರ್ವ ಕಾಲೇಜು 
ಹೈಸ್ಕೂಲು ವಿಭಾಗ ವಾಮದಪದವು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


 

      ನಾನು ರೇಣುಕಾ ಹೆಗಡೆ. ನಾನು ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮಹಿಮಾ ಭಟ್ ಅವರ ಬಗ್ಗೆ ನನ್ನ ಮನದ ಮಾತುಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ.
ಗುರುವೇ ಸರ್ವ ಲೋಕಾನಾಂ
ಭಿಶಜೆ ಭವರೋಗಿನಾಂ
ನಿಧಯೇ ಸರ್ವ ವಿದ್ಯನಾಂ
ದಕ್ಷಿಣಾಮೂರ್ತಿಯೇ ನಮಃ
           ನನ್ನ ನೆಚ್ಚಿನ , ನನ್ನ ಆತ್ಮೀಯ ಶಿಕ್ಷಕರು, ಪೂಜ್ಯ ಗುರುಗಳು ಶ್ರೀಮತಿ ಮಹಿಮಾ ಭಟ್. ಇವರು ಕಲಿಸಿದ್ದು ಕೇವಲ ಪುಸ್ತಕದ ಲೆಕ್ಕಗಳಲ್ಲ, ಜೀವನದ ಶಿಕ್ಷಣ. ಇವರು ಕೇವಲ ಮಾಹಿತಿಗಳನ್ನು ಬಡಿಸುತ್ತಿರಲಿಲ್ಲ. ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಅವರ ಮಾನವ ಸಹಜ ಸಾಮರ್ಥ್ಯವನ್ನು ವರ್ಧಿಸುತ್ತಿದ್ದರು. ಗುರಿಯು ಮುಂದೆ ಗುರುವು ಹಿಂದೆ ಎಂಬಂತೆ ಬದುಕಿನ ತಪ್ಪುಗಳನ್ನು ತಿದ್ದಿ ದಾರಿ ತೋರಿದವರು. ಇವರ ಬಗ್ಗೆ ಹೇಳಲು ನನಗೆ ಪದಗಳೇ ಸಿಗದಾಗಿವೆ. ಇವರು ಕೇವಲ ನಮ್ಮ ಶಿಕ್ಷಕರಾಗದೆ ನಮ್ಮ ತಾಯಿಯಂತೆ , ಸ್ನೇಹಿತೆಯಂತೆ ವರ್ತಿಸುತ್ತಾರೆ. ಇವರು ಮಾಡಿಸುವ ಯೋಗ, ಚರ್ಚಾ ಕೂಟ, spoken english, ಕ್ವಿಜ್ , ಮೌಲ್ಯಯುಕ್ತ ಮಾತುಗಳು ನಮಗೆ ಪ್ರೇರಣಾದಾಯಕವಾಗಿದೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬಂತೆ ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ ಒಂದು ದಿನ ಇಂತಹ ಒಳ್ಳೆಯ ಗುರುವಿನ ಜೊತೆ ಇರುವುದು ಉತ್ತಮ.
........................... ರೇಣುಕಾ ರಂಗನಾಥ ಹೆಗಡೆ
ತರಗತಿ 7
ಸ ಹಿ ಪ್ರಾ ಶಾಲೆ ಹುತ್ಗಾರ್
ತಾ:ಸಿದ್ದಾಪುರ ಜಿ: ಉತ್ತರಕನ್ನಡ
*******************************************

ವಿದ್ಯೆಯ ಕಲಿಸಿ ಬುದ್ಧಿಯ ನೀಡಿ
ಶಾಂತಿ ಉಳಿಸಿ ಸ್ನೇಹ ಬೆಳೆಸಿ
ಜ್ಞಾನದ ಧಾರೆಯನು ಎರೆಯುವ
ನಿಮಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು...... ಎಲ್ಲರಿಗೂ ನಮಸ್ತೆ ನನ್ನ ಹೆಸರು ಧೃತಿ. ನನ್ನ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆ ಹಾರ್ದಿಕ ಶುಭಾಶಯಗಳು. ಬಿದ್ದಾಗ ಎಬ್ಬಿಸಿ , ಅತ್ತಾಗ ಸಮಾಧಾನಪಡಿಸಿದ , ಅಮ್ಮ ಎನ್ನುವ ಪದವನ್ನು ಕಲಿಸಿದ ಮೊದಲ ಗುರು ಎಂದರೆ ನನ್ನ ಅಮ್ಮ. ಅನಂತರ ಬರುವುದು ಅಂಗನವಾಡಿ ಟೀಚರ್. ನಾನು ಸಣ್ಣವಳಿದ್ದಾಗ ಅಂಗನವಾಡಿಗೆ ಅಷ್ಟೇನು ಮಕ್ಕಳು ಬರುತ್ತಿರಲಿಲ್ಲ. ನಾನು ಮತ್ತು ನನ್ನ ಗೆಳತಿ ಇಬ್ಬರೇ ಇದ್ದದ್ದು ಆಗ. ಅಂದರೆ ನಾನು ಹಾಗೂ ನನ್ನ ಟೀಚರ್. ಬಹಳ ಮುದ್ದು ಮುದ್ದಾಗಿ ಅಕ್ಷರವನ್ನು ಕಲಿಸಿದ ಗುರು ಅವರು. ಇನ್ನು ಹಿರಿಯ ಪ್ರಾಥಮಿಕ ಶಾಲೆ ಸೇರಿದೆ. ಮೊದಲೆರಡು ದಿನದಲ್ಲಿ ಸ್ವಲ್ಪ ಭಯವಾಯಿತು. ಹೇಗಿರುತ್ತಾರೋ ಏನೋ ಅಂತ. ಅನಂತರ ಟೀಚರ್ ಅವರ ಪರಿಚಯವಾಯಿತು. ಅವರು ಬಹಳ ಪ್ರೀತಿಯಿಂದ ತಪ್ಪು ಮಾಡಿದಾಗ ಬುದ್ದಿ ಹೇಳಿ ಅಕ್ಕರೆಯಿಂದ ಜ್ಞಾನವನ್ನು ಕಲಿಸಿದ್ದಾರೆ . ಅಷ್ಟೇ ಅಲ್ಲದೆ ನನ್ನ ಎಲ್ಲಾ ಚಟುವಟಿಕೆಗಳಿಗೆ ಅಂದರೆ ಹಾಡು, ನೃತ್ಯ , ಚಿತ್ರಕಲೆ, ಆಟ ಪಾಠ ಹೀಗೆ ಎಲ್ಲಾ ರೀತಿಯಲ್ಲೂ ಬಹಳ ಧೈರ್ಯವನ್ನು ತುಂಬುತ್ತಾ ಸಹಕರಿಸುತ್ತಾ ಬಂದರು. ಮಕ್ಕಳತನವು ಎಷ್ಟೇ ತೊಂದರೆ ಕೊಟ್ಟರು ಅದನ್ನು ಸಹಿಸುತ್ತಾ ಬುದ್ಧಿವಾದ ಹೇಳಿ ಶಿಸ್ತನ್ನು ಕಲಿಸಿಕೊಟ್ಟಿದ್ದಾರೆ. ಅಂಥವರಿಗೆ ನನ್ನದೊಂದು ನಮನ. ನಂತರ ಬಂದರೆ ಪ್ರೌಢಶಾಲೆ ನನಗೆ ಟೀಚರ್ ಅವರ ಬಗ್ಗೆ ಅಂದರೆ ಅವರು ಹೇಗೆ ವರ್ತಿಸಬಹುದು ಎಂಬ ಊಹೆ ಇತ್ತು. ಆದರೆ ಸರ್ ಅವರ ಬಗ್ಗೆ ಸ್ವಲ್ಪ ಭಯ ಇತ್ತು. ಅವರು ಹೇಗೆ ಪಾಠ ಮಾಡುತ್ತಾರೋ.... ಹೇಗೆ ಮಾತನಾಡುತ್ತಾರೋ ಎಂದು... ದಿನಗಳು ಉರುಳಿದಂತೆ ಅಭ್ಯಾಸವಾಗತೊಡಗಿದವು. ನಾವು ಈಗ ಪ್ರೌಢಶಾಲೆಗೆ ಬಂದರೂ ಸಹ ಕಲಿಸಿದ ಗುರುಗಳು ಯಾವಾಗಲೂ ನೆನಪಿಗೆ ಬರುತ್ತಾರೆ . ಅಂಗನವಾಡಿಯ ಟೀಚರ್ ಎದುರಿಗೆ ಸಿಕ್ಕಿದರೆ ಅಥವಾ ಪ್ರಾಥಮಿಕ ಶಾಲೆಯ ಟೀಚರ್ ಸಿಕ್ಕಿದರೆ ಅವರನ್ನು ಒಮ್ಮೆ ನೋಡಿದಾಕ್ಷಣ ನಾವು ಮರಳಿ ನಮ್ಮ ಬಾಲ್ಯದ ದಿನಗಳು ಒಮ್ಮೆ ಕಣ್ಣಂಚಿನಲ್ಲಿ ಹಾದು ಹೋಗುತ್ತದೆ. ನನಗೆ ಈಗಲೂ ಅಷ್ಟೇ ನಾನು ಆ ಶಾಲೆಯಲ್ಲಿ ಇಲ್ಲದಿದ್ದರೂ ಆ ಶಾಲೆಯ ವಿದ್ಯಾರ್ಥಿನಿ ಎಂಬ ಹೆಮ್ಮೆ ನನ್ನಲ್ಲಿದೆ. ನನಗೆ ಪ್ರತಿ ಸನ್ನಿವೇಶದಲ್ಲಿ ಬಹಳ ಧೈರ್ಯವನ್ನು ಹಾಗೂ ಸಹಕಾರವನ್ನು ನೀಡುತ್ತಾ ಮುಂದೆ ಬರುವಂತೆ ಮಾಡುತ್ತಿದ್ದೀರಿ. ನನ್ನ ಎಷ್ಟು ತಪ್ಪುಗಳನ್ನು ಕ್ಷಮಿಸಿದ್ದೀರಿ. ಇದು ನನಗೆ ತಿದ್ದಿ ಬುದ್ದಿ ಹೇಳಿ ತಪ್ಪುಗಳನ್ನು ಸರಿ ಮಾಡಿ ಒಳ್ಳೆಯ ಮಾತುಗಳನ್ನಾಡಿ ಆಟ ಆಡಿಸಿ ಹೀಗೆ ಎಲ್ಲವನ್ನು ಕಳಿಸಿ ಕಲಿಸಿದ ಗುರುಗಳಿಗೆ ನಾನು ಎಂದೆಂದಿಗೂ ಚಿರಋಣಿ. ಧನ್ಯವಾದ..
...................................................... ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
    ಜೈ ಶ್ರೀ ರಾಮ್....... ನಾನು ಲತಿಕ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಇಂದು ನಾನು ನನ್ನ ಪ್ರೀತಿಯ ಶಿಕ್ಷಕಿಯಾದಂತಹ ಚೈತ್ರ ಮಾತಾಜಿ ಬಗ್ಗೆ ಹೇಳಲು ಇಷ್ಟ ಪಡುತ್ತೇನೆ. 
ಅವರು ನನಗೆ ಬಹಳ ಪಾಠ ಹಾಗೂ ನೈತಿಕ ಶಿಕ್ಷಣ ದ ಬಗ್ಗೆ ಹೇಳಿದ್ದಾರೆ ಹಾಗೆ ನಾನು ತಪ್ಪು ಮಾಡಿದಾಗ ತಿದ್ದಿ ಸರಿ ಪಡಿಸಿದ್ದಾರೆ. ಅಂತಹ ಶಿಕ್ಷಕರಿಗೆ ನನ್ನ ಪರವಾಗಿ ವಂದನೆ. ಇವರು ನನ್ನ 4ನೇ ತರಗತಿ ಮಾತಾಜಿ. ಇವರಿಗೆ ನನ್ನ ಮೇಲೆ ಬಹಳ ಪ್ರೀತಿ ಇತ್ತು. ಅದುದರಿಂದ ಅವರ ಬಗ್ಗೆ ನಾನು ಬರೆದೆ.
.................................................... ಲತಿಕ
5ನೇ ತರಗತಿ
ಶ್ರೀ ರಾಮ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
       ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ಹಿತಶ್ರೀ. ಪಿ..... ದೀಪ ತಾನು ಉರಿದು ಜಗತ್ತಿಗೆ ಬೆಳಕು ನೀಡುವ ಹಾಗೆ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯವ ಪ್ರತಿಯೊಬ್ಬ ಗುರುವಿಗೂ ನನ್ನ ಕೋಟಿ ಕೋಟಿ ನಮನಗಳು. ನಾನು ನನ್ನ ಸ್ಫೂರ್ತಿದಾಯಕ ಮುಖ್ಯ ಗುರುಗಳ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. 
ನಾನು ಚಿಕ್ಕ ವಯಸ್ಸಿನಿಂದಲೂ ಗುರುಗಳಿಂದ ಒಳ್ಳೆಯ ಹವ್ಯಾಸ, ಒಳ್ಳೆಯ ಗುಣ, ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂದು ಕಲಿತಿರುತ್ತೇನೆ. ನಮ್ಮ ತರಗತಿ ಕಂಡರೆ ಗುರುಗಳಿಗೆ ತುಂಬಾ ಸಂತೋಷ. ನಾವು ಮಾಡಿದ ಪುಟ್ಟ ಸಾಧನೆಗೆ ಪ್ರೋತ್ಸಾಹ ನೀಡುತ್ತಾರೆ. ನಾವು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಪೆನ್ನು , ಪೆನ್ಸಿಲು , ಪುಸ್ತಕ ಮುಂತಾದ ಬಹುಮಾನ ನೀಡುತ್ತಾರೆ. ಆದುದರಿಂದ ಪರೀಕ್ಷೆ ಇದೆ ಎಂಬ ಭಯವಿಲ , ಆಗ ಎಲ್ಲರಿಗೂ ನಾನು ಉತ್ತಮ ಅಂಕ ಪಡೆಯಬೇಕು ಎಂಬ ಆಸಕ್ತಿ ಮನಸ್ಸಿನಲ್ಲಿ ಮಾಡುತ್ತದೆ. ನಮಗೆ ಗುರುಗಳು ಯಾವತ್ತೂ ಹೇಳುವುದು ಒಂದೇ ಮಾತು ಮನಸ್ಸಿದ್ದರೆ ಮಾರ್ಗ ಮತ್ತು ನಾವು ಇನ್ನೊಬ್ಬರನ್ನು ಸೋಲಿಸುವುದು ಎಂಬ ಭಾವನೆ ನಮಗಿರಬಾರದು. ನಾವು ಉತ್ತಮ ಅಂಕ ಪಡೆಯಬೇಕು ಎಂದು ಪ್ರತಿದಿನವೂ ಹೇಳ್ತಾರೆ. ಅವರೇ ನನ್ನ ಮನದಾಳದ ಸ್ಪೂರ್ತಿದಾಯಕ ಶಿಕ್ಷಕರು ಮದನ ಮೋಹನ ಶೆಟ್ಟಿ , ಮುಖ್ಯೋಪಾದ್ಯಾಯರು , ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ ಪಕಳಕುಂಜ.
................................................ ಹಿತಶ್ರೀ. ಪಿ.
7 ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ 
ಪಕಳಕುಂಜ ಮಾಣಿಲ
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************      ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನ್ನ ಹೆಸರು ರಕ್ಷಿತಾ. ನನ್ನ ಕಲಿಕೆಗೆ ನೆರವಾದವರೆಲ್ಲರೂ ಶಿಕ್ಷಕರೇ. ಅದರಲ್ಲಿಯೂ ಅಂಗನವಾಡಿಯಿಂದ ಇಷ್ಟು ವರ್ಷ ಬೆನ್ನ ಹಿಂದೆ ನಿಂತು ಗುರಿ ತೋರಿಸಿದವರು ನನ್ನ ಶಿಕ್ಷಕರು. ಅವರಿಗೆಲ್ಲರಿಗೂ ಎಂದೆಂದಿಗೂ ನಾನು ಆಭಾರಿಯಾಗಿರುತ್ತೇನೆ. ಅದರಲ್ಲಿ ನನ್ನ ಜೀವನದಲ್ಲಿ ಪ್ರಭಾವ ಬೀರಿದವರು ನನ್ನ ಕಲಿಕೆಯ ದೃಷ್ಟಿಕೋನವನ್ನು ಬದಲಾಯಿಸಿದವರು ಲತಾ ಮೇಡಂ. ಇವರು ನನ್ನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ನಮಗೆ ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ. ಅದಲ್ಲದೆ ಎಲ್ಲ ವಿಷಯಗಳಲ್ಲಿಯೂ ನಮ್ಮ ಸಾಮರ್ಥ್ಯ ವನ್ನು ಪ್ರದರ್ಶಿಸಲು ಅವಕಾಶ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ.
................................................ ರಕ್ಷಿತಾ 
10 ನೇ ತರಗತಿ
ಸರಕಾರಿ ಫೌಢಶಾಲೆ ಮಾಣಿಲ ಮುರುವ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
       ನಾನು ನಿಮ್ಮ ಪ್ರೀತಿಯ ವಿದ್ಯಾರ್ಥಿ ಸಿಂಚನಾ ಶೆಟ್ಟಿ ನಾನು 5ನೇ ತರಗತಿಯಲ್ಲಿ ಓದುತ್ತಿದ್ದೇನೆ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ ಅವರ ಹುಟ್ಟು ಹಬ್ಬದ ಶುಭಾಶಯಗಳು. ವಿದ್ಯೆಗಿಂತ ದೊಡ್ಡ ಸಂಪತ್ತಿಲ್ಲ ತಾಯಿಗಿಂತ ದೊಡ್ಡ ಗುರುವಿಲ್ಲ ತಂದೆಗಿಂತ ದೊಡ್ಡ ಮಾರ್ಗದರ್ಶಕರಿಲ್ಲ ಗುರುವಿಗಿಂತ ದೊಡ್ಡ ಜ್ಞಾನಿ ಇಲ್ಲ ಇವರ ಆಶೀರ್ವಾದವಿಲ್ಲದೆ ಜೀವನ ವಿಲ್ಲ. ಜೀವನಕ್ಕೆ ದಾರಿದೀಪವಾಗಿರುವ ಎಲ್ಲಾ ಗುರುಗಳಿಗೆ ಶತಕೋಟಿ ವಂದನೆಗಳು
................................................ ಸಿಂಚನಾ 
5 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************     ನಮಸ್ತೆ ನನ್ನ ಹೆಸರು ದೀಪ್ತಿ. ನಾನು ಟೀಚರ್ ಇಂದ ತುಂಬಾ ಪಾಠ ಕಲಿತೆನು. ಎಲ್ಲಾ ಟೀಚರ್ ನನಗೆ ತುಂಬಾ ಇಷ್ಟ. ನನಗೆ ಅಮ್ಮನಂತೆ ಟೀಚರ್ ಬಹಳ ಇಷ್ಟ. ಆಗಾಗ ಕಥೆಗಳನ್ನು ಹೇಳುತ್ತೀರಿ, ಹಾಡನ್ನು ಹಾಡುತ್ತೀರಿ, ಡ್ಯಾನ್ಸ್ ಹೇಳಿಕೊಡುತ್ತೀರಿ ಇದೆಲ್ಲ ನನಗೆ ತುಂಬಾ ಇಷ್ಟ. ನೀವು ಮಕ್ಕಳ ಮನಸ್ಸಿಗೆ ಎಷ್ಟೊಂದು ಬುದ್ಧಿವಾದ ಹೇಳುತ್ತೀರಿ. ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೀರಿ. ಕೆಲವೊಂದು ಸಮಾರಂಭಕ್ಕೆ ಕರೆದುಕೊಂಡು ಹೋಗುತ್ತೀರಿ. ಶಾಲಾ ವಾರ್ಷಿಕೋತ್ಸವದಂದು ಡ್ಯಾನ್ಸ್ ಮಾಡಲು ನಮಗೆ ಪ್ರೋತ್ಸಾಹಿಸುತ್ತೀರಿ. ಕಲಿಸಿದ ಎಲ್ಲಾ ಟೀಚರ್ ನವರಿಗೆ ಧನ್ಯವಾದಗಳು. 
....................................................... ದೀಪ್ತಿ 
4 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕಾಡುಮಠ ಕೊಳ್ನಾಡು ಗ್ರಾಮ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************    ಎಲ್ಲರಿಗೂ ನಮಸ್ತೆ ನನ್ನ ಹೆಸರು ಆದ್ಯ. ಜೆ.... ನನ್ನ ನೆಚ್ಚಿನ ಸಿಸಿಲ್ಯ ಟೀಚರ್ ಬಗ್ಗೆ ನನ್ನ ಮನದಾಳದ ಮಾತು. ಇವರೆಂದರೆ ನನಗೆ ತುಂಬ ಇಷ್ಟ. ಇವರು ತುಂಬಾ ಚೆನ್ನಾಗಿ ಅರ್ಥ ಆಗುವ ಹಾಗೆ ಪಾಠ ಹೇಳಿ ಕೊಡುತ್ತಾರೆ. ಮತ್ತು ವಿವಿಧ ಚಟುವಟಿಕೆಗಳನ್ನು ಮಾಡಲು ಅವಕಾಶ ಮಾಡಿ ಕೊಡುತ್ತಾರೆ. ನಾವು ಮಾಡಿದ ಡ್ರಾಯಿಂಗ್, ಡಾನ್ಸ್, ಸಂಗೀತ ಯಾವುದೇ ಆಗಲಿ ಮೆಚ್ಚಿ ಪ್ರೋತ್ಸಾಹಿಸುತ್ತಾರೆ. ಇವರನ್ನು ನಾನು ನಮ್ಮ ಶಾಲೆಯ ಉತ್ತಮ ಶಿಕ್ಷಕಿ ಎಂದು ಗೌರವಿಸುತ್ತೇನೆ. ಇವರಿಗೆ ನಾನು ಶಿಕ್ಷಕ ದಿನಾಚಣೆಯ ಶುಭಾಶಯಗಳು ಹೇಳಲು ಇಷ್ಟ ಪಡತ್ತೇನೆ.
................................................. ಆದ್ಯ. ಜೆ.
5 ನೇ ತರಗತಿ
ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ 
ಮಡಂತ್ಯಾರು. ಬೆಳ್ತಂಗಡಿ. 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article