-->
ಕವನಗಳು : ಸಿಂಚನಾ ಎಸ್ ಶೆಟ್ಟಿ

ಕವನಗಳು : ಸಿಂಚನಾ ಎಸ್ ಶೆಟ್ಟಿ

ಮಕ್ಕಳ ಜಗಲಿಯಲ್ಲಿ 
ಕವನಗಳು
ರಚನೆ : ಸಿಂಚನಾ ಎಸ್ ಶೆಟ್ಟಿ


              ಬಾಂಧವ್ಯ
            ---------------
ಪೋಷಕರಾಗಿ ಸಲಹಿದರು ಶಿಕ್ಷಕರು
ಅವರೆಂದಿಗೂ ನಮ್ಮ ಆರಕ್ಷಕರು
ಬೇಕಾಗಿತ್ತು ನಮಗೆ ಶಿಕ್ಷಣ
ಜೀವನ ಪಾಠ ಹೇಳಿ ಸಲಹಿದರು ಪ್ರತಿಕ್ಷಣ
    ಅನುದಿನ ತಿದ್ದಿ ನಮ್ಮನ್ನು
    ಅನುಭವಿಸಿದರು ಶಿಕ್ಷಕ ವೃತ್ತಿಯನ್ನು
    ತೀರಿಸಲಾಗದು ಈ ನಿಮ್ಮ ಪ್ರೀತಿಯ
    ಕೊನೆವರೆಗೂ ಇರಲಿ ನಮ್ಮ ಭಾಂದವ್ಯ
ಕಂಡ ಕನಸುಗಳೆಲ್ಲವ
ಮೀರಿ ಸಲಹಿದ ನಿಮಗೆ
ಅರ್ಪಿಸುವೆನು ನಾ
ಕೋಟಿ ನಮನಗಳು ನಿಮ್ಮ ಕಡೆಗೆ



         
               ಗೆಳೆತನ
             -------------
ರಕ್ತಸಂಬಂಧವನ್ನು ಮೀರಿದ
ಬಂಧವು ನಮ್ಮ ಗೆಳೆತನ
ಪ್ರೀತಿ, ಮಮತೆ, ಅಪ್ಪುಗೆಗೆ
ಎಂದಿಗೂ ಚಿರಋಣಿ ನಾ
     ಯಾರೇ ಇರಲಿ, ಇಲ್ಲದಿರಲಿ
     ಇರುವುದು ನಮ್ಮ ಬಂಧವು ಹೀಗೆ
     ಕಷ್ಟ ಸುಖವನ್ನು ಲೆಕ್ಕಿಸದೆ
     ಇರುವೆ ನಿನ್ನ ಜೊತೆಗೆ
ಜಾತಿ, ಮತ, ಪಂಗಡಗಳನ್ನೆಲ್ಲ
ಮೀರಿದ ಈ ನಮ್ಮ ಸಂಬಂಧ
ಯಾರ ದೃಷ್ಟಿಯು ತಾಗದೆ
ಹೀಗೆ ಇರಲಿ ಈ ಅನುಬಂಧ 
..................................... ಸಿಂಚನಾ ಎಸ್ ಶೆಟ್ಟಿ
ದ್ವಿತೀಯ ಪಿ. ಯು. ಸಿ
ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು 
ಕಾರ್ಕಳ , ಉಡುಪಿ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article