ದೀಕ್ಷಾ ಕುಲಾಲ್ ಬರೆದಿರುವ ಕವನಗಳು
Friday, August 5, 2022
Edit
ಮಕ್ಕಳ ಜಗಲಿಯಲ್ಲಿ
ದೀಕ್ಷಾ ಕುಲಾಲ್
ಬರೆದಿರುವ ಕವನಗಳು
ಬೆಕ್ಕು
----------
ನನ್ನ ಮನೆಯ ಬೆಕ್ಕು
ಅದರ ಹೆಸರು ಚಿಕ್ಕು
ಅದರ ಕಣ್ಣು ನೀಲಿ
ಹಿಡಿಯಿತು ಒಂದು ಇಲಿ
ಕದ್ದು ಕುಡಿಯಿತು ಹಾಲು
ಅಮ್ಮ ತಂದರು ಕೋಲು
ದಾಹ
----------
ಸೆಕೆ ಗಾಲ ಬಂತು
ದಾಹ ಶುರು ಆಯಿತು
ನೀರು ಪಾನೀಯ ಕುಡಿಯೋಣ
ಹಣ್ಣು ಹಂಪಲು ತಿನ್ನೋಣ
ಮಜ್ಜಿಗೆ ಮೊಸರು ಕುಡಿಯೋಣ
ದೇಹದ ದಾಹ ನೀಗಿಸೋಣ
ಮಾವಿನ ಕಾಯಿ
--------------------
ಮರದಲ್ಲಿ ಮಾವಿನ ಕಾಯಿ
ಎಲ್ಲರ ಮನೆಯಲ್ಲಿ ಉಪ್ಪಿನಕಾಯಿ
ಅಜ್ಜಿ ಮಾಡಿ ಇಡುವರು ಮಳೆಗಾಲಕ್ಕೆ ಉಪ್ಪಿನಕಾಯಿ
ನನಗೂ ಇಷ್ಟ ಉಪ್ಪಿನಕಾಯಿ
ಕಾಯಿ, ಕಾಯಿ, ಮಾವಿನ ಕಾಯಿ
ತರ, ತರ ಜಾತಿಯ ಮಾವಿನ ಕಾಯಿ
ಮರ ತುಂಬಾ ಮಾವಿನ ಕಾಯಿ
5ನೇ ತರಗತಿ
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************