-->
ದೀಪ್ತಿ ಬರೆದಿರುವ ಕವನಗಳು

ದೀಪ್ತಿ ಬರೆದಿರುವ ಕವನಗಳು

ಮಕ್ಕಳ ಜಗಲಿಯಲ್ಲಿ 
ದೀಪ್ತಿ ಬರೆದಿರುವ 
ಕವನಗಳು

            ಇಷ್ಟ
          ----------
ವಿರಾಟ್ ಗೆ ಇಷ್ಟ ಕ್ರಿಕೆಟ್ 
ಕಂಡಕ್ಟರಿಗೆ ಇಷ್ಟ ಟಿಕೆಟ್
ಅಗಸನಿಗೆ ಇಷ್ಟ ಬಕೆಟ್
ನನಗೆ ಇಷ್ಟ ಚಾಕ್ಲೇಟ್


            ಚಿಟ್ಟೆ
         ----------
ಬಣ್ಣ ಬಣ್ಣದ ಚಿಟ್ಟೆ
ಯಾವ ಊರಿನ ಚಿಟ್ಟೆ
ಯಾಕೆ ಮೈಯಲ್ಲ ಪಟ್ಟೆ
ಬಣ್ಣ ಬಣ್ಣದ ಚಿಟ್ಟೆ


         ತೆಂಗಿನ ಮರ
        ----------------
ತೆಂಗಿನ ಮರವೇ 
ತೆಂಗಿನ ಮರವೇ
ನೀನು ಎಷ್ಟು ಉದ್ದ....?
ನಿನ್ನ ತಲೆಯಲ್ಲಿರುವ ಸಿಹಿಯಾಳ  
ಕಾಯಿ ಬಲು ಸಿಹಿ
ನಿನ್ನ ಗರಿಗಳು ಎಷ್ಟು ಚಂದ 
ಗರಿಗಳ ಕಡ್ಡಿಗಳು ಇದ್ದರೆ ಮನೆ ಅಂದ 


         ಸುಂದರ
       --------------
ಹೂವು ಬಲು ಸುಂದರ 
ಅದರ ಬಣ್ಣ ಕೇಸರ
ಚಿಟ್ಟೆ ಬಂದಿತು
ಮಕರಂದವನ್ನು ಹೀರಿತು 


       ಕ್ಯಾಲೆಂಡರ್
      ----------------
ಕ್ಯಾಲೆಂಡರ್ ಅಣ್ಣ 
ಕ್ಯಾಲೆಂಡರ್ ಅಣ್ಣ 
ಯಾವತ್ತೂ ನಮಗೆ 
ತಾರೀಕು ತೋರಿಸುವೆ
ನಮಗೆ ವಾರವನ್ನು 
ತೋರಿಸುವೆ 
....................................................ದೀಪ್ತಿ 
4 ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕಾಡುಮಠ ಕೊಳ್ನಾಡು ಗ್ರಾಮ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************

Ads on article

Advertise in articles 1

advertising articles 2

Advertise under the article