-->
ಪ್ರೀತಿಯ ಪುಸ್ತಕ : ಸಂಚಿಕೆ - 18

ಪ್ರೀತಿಯ ಪುಸ್ತಕ : ಸಂಚಿಕೆ - 18

ಪ್ರೀತಿಯ ಪುಸ್ತಕ
ಸಂಚಿಕೆ - 18

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 



                                             ಗಾಳಿಪಟದ ಮರ
          ಪ್ರೀತಿಯ ಮಕ್ಕಳೇ..... ಒಂದು ಮರ ವರುಷವಿಡೀ ಒಂದೇ ರೀತಿ ಇರುತ್ತದೆಯೇ...? ಇಲ್ಲವಲ್ಲಾ, ಎಲೆ ಉದುರುತ್ತದೆ, ಬೆಳೆಯುತ್ತದೆ, ಹೂಗಳು ಅರಳಿದಾಗ ಮರ ಕುಶಿ ಕುಶಿಯಿಂದ ಇರುವ ಹಾಗೆ ಕಾಣುತ್ತದೆ. ನಮ್ಮ ಸುತ್ತು ಮುತ್ತಲಿನ ಪರಿಸರದಲ್ಲಿ ಇಂತಹ ಅದೆಷ್ಟೋ ಬದಲಾವಣೆಗಳು ಅಚ್ಚರಿ ಹುಟ್ಟಿಸುವ ಹಾಗೆ ಇರುತ್ತದೆ. ಈ ಪುಸ್ತಕ ಅಂತಹ ಸೌಂದರ್ಯದ, ಅಚ್ಚರಿಯ ಅನುಭವ ಕೊಡುತ್ತದೆ. ದೊಡ್ಡ ಪುಸ್ತಕ, ಪುಟ ತುಂಬಿ ನಿಂತ ಬಣ್ಣದ ಚಿತ್ರಗಳು - ಬೀಜಗಳು ಮುಚ್ಚಿರುವುದು, ಒಡೆದಿರುವುದು, ಹೂಗಳು ಅರಳಿರುವುದು, ಜೊತೆಗೆ ಇರುವೆ, ಹಕ್ಕಿ, ಜೇಡ, ಚಿಟ್ಟೆಗಳು – ಮುಂತಾದ ಸಹಜೀವಿಗಳ ಚಿತ್ರಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಅಕ್ಷರಗಳನ್ನೂ ಓದಬಹುದು, ಚಿತ್ರಗಳನ್ನೇ ಒಂದಷ್ಟು ಹೊತ್ತು ನೋಡುತ್ತಾ ಇರಬಹುದು. ಹೀಗೆ ನೋಡುವಾಗ ನಮ್ಮ ಸುತ್ತಮುತ್ತಲು ಇರುವ ನಾನಾ ರೀತಿಯ ಮರ ನಮ್ಮ ಗಮನ ಸೆಳೆಯಬಹುದು. ಮರಗಳ ಸೊಬಗನ್ನು ಪುಸ್ತಕದಲ್ಲೂ ನೋಡಿ, ಹೊರಗೂ ನೋಡಿ, ಮತ್ತೆ ನಿಮ್ಮದೇ ಕಲ್ಪನೆಯಲ್ಲಿ ಇನ್ನೊಂದಷ್ಟು ಮರಗಳ ಚಿತ್ರಗಳನ್ನು ಬಿಡಿಸಿ, ಆನಂದಿಸಿ. 
ಲೇಖಕರು: ಆವಂತಿ ಮೆಹೆತಾ 
ಅನುವಾದ: ಅಶ್ವಿನಿ ಭಟ್ 
ಚಿತ್ರಗಳು: ನಿರುಪಮ ಶೇಖರ್ 
ಪ್ರಕಾಶಕರು: ತುಲಿಕಾ   
ಬೆಲೆ: ರೂ.130
ಒಂದು ಎರಡನೇ ತರಗತಿಯ ಮಕ್ಕಳು ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಸಹಕರಿಸಬಹುದು.
............................... ವಾಣಿ ಪೆರಿಯೋಡಿ, 
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article