-->
ಕವನ - ನಾಗರ ಪಂಚಮಿ

ಕವನ - ನಾಗರ ಪಂಚಮಿ

ತನ್ಮಯ್ ಕೃಷ್ಣ ನೇರಳಕಟ್ಟೆ
10 ನೇ ತರಗತಿ
ವಿ.ಕ. ಮಾ. ಶಾಲೆ ತೆಂಕಿಲ, ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ಇವರು ಬರೆದಿರುವ ನಾಗರಪಂಚಮಿಯ ವಿಶೇಷ ಕವನ - ನಾಗರ ಪಂಚಮಿ
    
ನಾಡಿಗೆ ಸಂಭ್ರಮ ತಂದಿದೆ ನೋಡಿ
ನಾಗರ ಪಂಚಮಿ ಹಬ್ಬದ ಮೋಡಿ
ಹರುಷ ಸಡಗರದಿ ಜನರೆಲ್ಲ ಕೂಡಿ
ಭಕ್ತಿಯಲ್ಲಿ ಭಜಿಸುವರು ನಾಮವ ಹಾಡಿ
     ಹಸುರಿನ ಪರಿಸರ ಬಂದಿದೆ ನೋಡಿ
     ಪಂಚಭೂತಗಳು ಮಾಡಿದೆ ಮೋಡಿ
     ಮನೆಯವರೆಲ್ಲರೂ ಬೆರೆತರು ಕೂಡಿ
     ಮಣ್ಣ ಸಂಸ್ಕೃತಿಯ ಜಪವನ್ನು ಹಾಡಿ
ಅರಿಶಿನ ಹಾಲಾಭಿಷೇಕವ ನೋಡಿ
ಹಿಂಗಾರ ಹೂವಿನ ಶೃಂಗಾರ ಮೋಡಿ
ಕರಗಳ ಜೋಡಿಸೆ ಭಕ್ತಿಯ ಕೂಡಿ
ಸಹಬಾಳ್ವೆಗೆ ಓಂಕಾರವ ಹಾಡಿ
     ಕಾಂಕ್ರೀಟ್ ಬನದಲಿ ಪೂಜೆಯ ನೋಡಿ
     ಬದುಕಿಗೆ ಬಂದಿದೆ ಕಲ್ಮಶ ಮೋಡಿ
     ಕಷ್ಟನಷ್ಟಗಳು ಜೀವನದಿ ಕೂಡಿ
     ಮೆರೆಯುವುದು ರೋಗ ರುಜಿನಗಳ ಹಾಡಿ
ಪ್ರಕೃತಿ ಪೂಜೆಯ ಮಾಡಲು ನೋಡಿ
ಬರುವುದು ನಾಗನ ಶಕ್ತಿಯ ಮೋಡಿ
ಭಕ್ತಿಭಾವದಿ ಜತೆಯಲಿ ಕೂಡಿ
ಶುಭವನ್ನು ಪಡೆಯುವ ಸೇವೆಯ ಹಾಡಿ
.......................... ತನ್ಮಯ್ ಕೃಷ್ಣ ನೇರಳಕಟ್ಟೆ
10 ನೇ ತರಗತಿ
ವಿ.ಕ. ಮಾ. ಶಾಲೆ ತೆಂಕಿಲ, ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article