ಹೊಸ ಭಾರತದ ಚಿಂತನೆ - ಕವನ
Monday, August 15, 2022
Edit
ಆಜಾದಿಕಾ ಅಮೃತ ಮಹೋತ್ಸವ - 2022
ದೇಶವನ್ನು ಕುರಿತು
ಸಪ್ತಮಿ ಅಶೋಕ್ ದೇವಾಡಿಗ
ಬರೆದಿರುವ ಕವನ
ನನ್ನ ದೇಶ ನನ್ನ ಜನ
ರೋಮಾಂಚನವಾಗಿದೆ ನನ್ನ ಮನ
ನಮ್ಮ ದೇಶದೊಳಗಿನ ಚಿಂತನೆ
ಬಯಸುವೆಯಾ ಓ ಮಾನವನೇ....
ಗಟ್ಟಿ ದೇಹ ದೊಡ್ಡ ಮನಸ್ಸು ಬಲ್ಲವನು
ಹೊಲವ ದುಡಿಯುವ ಅನ್ನದಾತನು
ನಿಜವಾದ ಸಂಪತ್ತು ಇವನು
ಇಟ್ಟಿಗೆ ಇಟ್ಟು, ಗಾರೆ ಕೊಟ್ಟು, ಬಣ್ಣ ಬಿಟ್ಟು
ಚಿಂತನೆಯಲ್ಲಿದೆ ಕಾರ್ಮಿಕರ ಬದುಕಿನ ಗುಟ್ಟು ನಿವಾರಿಸೋಣ ಅವನ ಹೊಟ್ಟೆ ಹಿಟ್ಟು
ಹೆಣ್ಣಿನ ಕೂಗು ಎಲ್ಲರೂ ಕೇಳಿಸಬೇಕು
ಹೃದಯದಲ್ಲಿ ಮನುಷ್ಯತ್ವ ಅರಳಬೇಕು
ಈ ನಾರಿಯರ ದೌರ್ಜನ್ಯ ನಿಲ್ಲಬೇಕು
ಕನಸು ನನಸಾಗಬೇಕು ಬಡವನದು
ಭ್ರಷ್ಟ ರಾಜಕಾರಣ ಇನ್ನಿರಬಾರದು
ಸಜ್ಜನ ನಾಯಕನ ಆರಿಸಿ ಒಳ್ಳೆಯದು
ಇಂದಿನ ಮಕ್ಕಳೆ ನಾಳೆನ ಪ್ರಜೆಗಳು
ಮೌಲ್ಯ ಶಿಕ್ಷಣ ಬಾಂಧವ್ಯದ ಭಾವನೆಗಳು
ಸಲ್ಲಬೇಕು ಗುರು-ಹಿರಿಯರಿಗೆ ನಮನಗಳು
ಸಹಸ್ರಾರು ಸಮಸ್ಯೆಗಳಿವೆ ನಿವಾರಿಸೋಣ
ಭಾರತಾಂಬೆ ಮಕ್ಕಳಾಗಿ ಬೆಳೆಯೋಣ
ದೇಶದ ಪ್ರಗತಿ ಚಿಂತನೆ ಮಾಡೋಣ
ಭವ್ಯ - ಹೊಸ ಭಾರತವನ್ನು ನಿರ್ಮಿಸೋಣ
8ನೇ ತರಗತಿ
ಶುಭದ ಆಂಗ್ಲ ಮಧ್ಯಮ ಶಾಲೆ ಕಿರಿಮಂಜೇಶ್ವರ ಬೈಂದೂರು ತಾಲೂಕು, ಉಡುಪಿ ಜಿಲ್ಲೆ
********************************************