
ಭಾರತ - ಕವನ
Monday, August 15, 2022
Edit
ಆಜಾದಿಕಾ ಅಮೃತ ಮಹೋತ್ಸವ - 2022
ದೇಶವನ್ನು ಕುರಿತು
ಧೃತಿ
ಬರೆದಿರುವ ಕವನ
ನಮ್ಮ ದೇಶವು ಹೊನ್ನನು ಬೆಳೆಯುವ ದೇಶ
ಹಲವು ಮತ-ಧರ್ಮಗಳ ಏಕತೆಯ ದೇಶ
ಸತ್ಯ ಶಾಂತಿಯಿಂದ ಬೆಳಗುವ ಭಾರತ
ಅಸಂಖ್ಯ ರಾಷ್ಟ್ರ ಭಕ್ತರ ಫಲ ನಮ್ಮ ಭಾರತ
ದಕ್ಷಿಣದಿಂದ ಕಾಶ್ಮೀರ ಭಾವೈಕ್ಯತೆಯ ನಾಡು
ಸರ್ವ ಜಾತಿ ಮತ ಸಾಮರಸ್ಯವ ನೋಡು
ಋಷಿ ಮುನಿಗಳ ತಪಸ್ಸಿನ ಬೀಡು
ಅಜರಾಮರ ವಂದೇ ಮಾತರಂ ಹಾಡು
ಜಾತಿ ಮತ ಮೇಲು ಕೀಳು ಇಲ್ಲ ತಾರತಮ್ಯ
ಈ ದೇಶದಿ ಹುಟ್ಟಿದ ನಮ್ಮೆಲ್ಲರ ಪುಣ್ಯ
ಇಲ್ಲಿ ಹಲವು ವೇಷ-ಭಾಷೆಗಳು ಮಾನ್ಯ
ಭಾರತಾಂಬೆಯ ಪಡೆದ ನಾವೇ ಧನ್ಯ
ಅಮೃತ ಮಹೋತ್ಸವ ಸ್ವಾತಂತ್ರ್ಯ ಈದಿನ
ಹೊಸ ಚಿಂತನೆ ಬರಲಿ ಅನುದಿನ
ಸಂತೋಷಗೊಂಡಿದೆ ಎಲ್ಲರ ತನು ಮನ
ವೀರ-ಯೋಧರೇ ನಿಮಗಿದೋ ನನ್ನ ನಮನ
ರೈತ ಯೋಧರಿಗೆ ಉಸಿರುಣಿಸಿದ ಭೂಮಿ
ಪೂಜ್ಯ ನದಿಗಳು ಹರಿಯುವ ಸೊಗಸು
ಸರ್ವ ಧರ್ಮದ ಸಾಗರ ಈ ದೇಶ
ದೇಶಾಭಿಮಾನ ಉಳಿಸಿ ಗೌರವಿಸಿ ಅನ್ಯದೇಶ
ಸಂಸ್ಕೃತಿ ಸಂಸ್ಕಾರ ಸಂಪ್ರದಾಯದ ತವರು
ಹಾರಾಡುತ್ತಿದೆ ತ್ರಿವರ್ಣ ಧ್ವಜ ತೇರು
ಸತ್ಯಮೇವ ಜಯತೆ ನಮ್ಮ ಉಸಿರು
ಜಪಿಸುವೆನು ಮಡಿದ ದೇಶಭಕ್ತರ ಹೆಸರು
ಅಂದು ನಮ್ಮ ದೇಶದಿ ಬ್ರಿಟಿಷರು
ಇಂದು ಬ್ರಿಟನ್ ನಲ್ಲಿ ನಮ್ಮ ದೇಶದವರು
ಹೇಗೆ ಕಾಲ ಬದಲಾಗುತ್ತಿದೆ ನೋಡಿ
ಇದೊಂದು ಚರಿತ್ರೆಯ ಮುನ್ನುಡಿ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ....
********************************************