
ಸ್ವಾತಂತ್ರ್ಯದ ಅಮೃತ ಮಹೋತ್ಸವ - ಕವನ
Monday, August 15, 2022
Edit
ಆಜಾದಿಕಾ ಅಮೃತ ಮಹೋತ್ಸವ - 2022
ದೇಶವನ್ನು ಕುರಿತು
ಆದ್ಯಂತ್ ಅಡೂರು
ಬರೆದಿರುವ ಕವನ
ತುಂಬಿತು ನಮ್ಮಯ ಮನದಿ ಹರುಷ
ಕೆಂಪು ಕೋಟೆಯಲಿ ಪ್ರಧಾನಿ ಭಾಷಣ
ಮಾಡಿದೆವು ನಾವಿಲ್ಲಿ ಧ್ವಜಾರೋಹಣ
ಗಾಂಧಿಯು ನಮಗೆ ಸ್ವಾತಂತ್ರ್ಯ ಕೊಟ್ಟರು
ಭಾರತದ ರಾಷ್ಟ್ರಪಿತರು ಇವರು
ಅಹಿಂಸೆಯಿಂದಲೇ ಬ್ರಿಟೀಷರನ್ನು ಓಡಿಸಿದರು
ಭವ್ಯ ಭಾರತವನ್ನು ಕಾಪಾಡಿದರು
ಸುಭಾಸ ಬೋಸರು, ನೆಹರೂರವರು
ಆಂಗ್ಲರ ಎದುರು ಯುದ್ಧ ಮಾಡಿದರು
ನಮಗೆ ಸ್ವಾತಂತ್ರ್ಯ ತಂದುಕೊಟ್ಟರು
ಜೈ ಹಿಂದ್ ಘೋಷಣೆ ಕೂಗಿದರು
ಮಾಡಿದರು ಬೋಸರು INA ಸೈನ್ಯ
ಹಲವಾರು ಯೋಧರು ಕೊಟ್ಟರು ಪ್ರಾಣ
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು
ಎಲ್ಲರು ಒಂದಾಗಿ ಖುಷಿಯಿಂದ ಆಚರಿಸಿದೆವು
9ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು, ಕಾಸರಗೋಡು - 671543
********************************************