-->
ವರದಿ - ಆಜಾದಿಕಾ ಅಮೃತ ಮಹೋತ್ಸವ - 2022 : ಸಂಚಿಕೆ - 1

ವರದಿ - ಆಜಾದಿಕಾ ಅಮೃತ ಮಹೋತ್ಸವ - 2022 : ಸಂಚಿಕೆ - 1

ವರದಿ - ಆಜಾದಿಕಾ ಅಮೃತ ಮಹೋತ್ಸವ - 2022 :
ಸಂಚಿಕೆ - 1
ತಮ್ಮ ಶಾಲೆಯಲ್ಲಿ ಜರುಗಿದ 
75 ನೇ ಸ್ವಾತಂತ್ರ್ಯೋತ್ಸವ
ಕಾರ್ಯಕ್ರಮದ ಕುರಿತಾಗಿ 
ವಿದ್ಯಾರ್ಥಿಗಳು 
ಬರೆದಿರುವ ವರದಿನನ್ನ ಶಾಲೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವ : ಆದ್ಯಂತ್ ಅಡೂರು
      ನಮ್ಮ ಶಾಲೆಯಲ್ಲಿ ಅಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ನಡೆಯಿತು. ಇದರಲ್ಲಿ ಮೊದಲು ಯಾವತ್ತಿನಂತೆ ಶಾಲಾ ಅಸ್ಸೆಂಬ್ಲಿ ನಡೆಯಿತು. ನಂತರ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದರು. ನಂತರ ಶಾಲಾ ಪೋಲಿಸ್ ದಳ (SPC) ರವರಿಂದ ಪಥಸಂಚಲನ ನಡೆಯಿತು. ನಂತರ ನಮ್ಮ ಶಾಲೆಯಲ್ಲಿಂದ ದೇಲಂಪಾಡಿ ಗ್ರಾಮ ಪಂಚಾಯತ್ ತನಕ ವರ್ಣರಂಜಿತ ಮೆರವಣಿಗೆ ನಡೆಯಿತು. 
ಇದರಲ್ಲಿ ಮೊದಲಿಗೆ ಶಾಲಾ ಪೋಲಿಸ್ ದಳದವರು, ನಂತರ ಗಾಂಧೀಜಿ, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಭಗತ್ ಸಿಂಗ್, ಒನಕೆ ಓಬವ್ವ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಗಳು ಇದ್ದರು. ಅವರ ಹಿಂದೆ 2 ರಿಂದ 12 ನೇ ತರಗತಿವರೆಗಿನ ಮಕ್ಕಳು, ಹೀಗೆ ಕ್ರಮವಾಗಿದ್ದರು. ನಂತರ LP, UP, HS ಮಕ್ಕಳಿಂದ ದೇಶ ಭಕ್ತಿಗೀತೆ, ನೃತ್ಯ, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಕೂಡಾ ಪಾಯಸ ಮತ್ತು ಲಡ್ಡು ವಿತರಿಸಿದರು. ಹೀಗೆ ಸುಂದರವಾಗಿ ನಮ್ಮ ಶಾಲೆಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಮುಕ್ತಾಯವಾಯಿತು.
...................................... ಆದ್ಯಂತ್ ಅಡೂರು
9ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು, ಕಾಸರಗೋಡು- 671543
******************************************


    ಎಲ್ಲರಿಗೂ ನಮಸ್ಕಾರ ನಾನು ವೀಕ್ಷಣ್ ಆಚಾರ್ಯ ಮರ್ಣೆ. ನಮ್ಮ ಭಾರತ ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎನ್ನುವುದು ನಮಗೆ ಹೆಮ್ಮೆಯ ವಿಷಯ. ನಾವು ನಮ್ಮ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು, ಉಡುಪಿಯಲ್ಲಿ ಆಗಸ್ಟ್ 13, 14 ಹಾಗು 15 ಹೀಗೆ ಮೂರು ದಿನಗಳ ಕಾಲ ಧ್ವಜಾರೋಹಣವನ್ನು ಮಾಡಿದೆವು. 
        ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾಷಣ ಸ್ಪರ್ಧೆ, ನಾಟಕ, ನೃತ್ಯ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಚಟುವಟಿಕೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳೆಲ್ಲರು ಅತೀವ ಆನಂದದಿಂದ ಭಾಗವಹಿಸಿದರು. ನಂತರ ಆಗಸ್ಟ್ 15 ರಂದು ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗು ಉಡುಪಿಯ ಇತರ ಶಾಲೆಯ ವಿದ್ಯಾರ್ಥಿಗಳು, ಒಟ್ಟು 5,000 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಸೇರಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಬೆಳಗ್ಗೆ 9:00 ಘಂಟೆಗೆ ನಡೆದ ಧ್ವಜಾರೋಹಣದಲ್ಲಿ ಅತೀವ ಸಂಭ್ರಮದಿಂದ ಪಾಲ್ಗೊಂಡೆವು. ಹೀಗೆ ನನ್ನ ಶಾಲೆಯ ವಿದ್ಯಾರ್ಥಿಗಳು, ಸಹಪಾಠಿಗಳು ಹಾಗು ನನ್ನ ನೆಚ್ಚಿನ ಶಿಕ್ಷಕರ ಜೊತೆಗೂಡಿ ಸ್ವಾತ್ರಂತ್ರ್ಯ ದಿನಾಚರಣೆಯನ್ನು ಆಚರಿಸಿದೆವು. ಧನ್ಯವಾದಗಳು.  
................................................. ವೀಕ್ಷಣ್
10 ನೇ ತರಗತಿ
ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು 
ಉಡುಪಿ , ಉಡುಪಿ ಜಿಲ್ಲೆ
******************************************      ಮಕ್ಕಳ ಜಗಲಿಯ ವೃಂದಕ್ಕೆ ಆತ್ಮೀಯ ಶುಭ ನಮನಗಳು.... ನಾನು ಪೂರ್ತಿ..... ಮೊದಲನೆಯದಾಗಿ ಎಲ್ಲಾ ಭಾರತೀಯರಿಗೂ 75ನೇಯ ಸ್ವಾತಂತ್ಯ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು....  
ನಮ್ಮ ಶಾಲೆಯಲ್ಲಿಯೂ ಕೂಡ....! ಎನ್ನುವುದಕ್ಕಿಂತಲೂ ಮೊದಲು ನಮ್ಮ ಮನೆಗಳಲ್ಲಿ ಧ್ವಜವನ್ನು ಹಾರಿಸಿ ಸಂಬ್ರಮಿಸಿದೆವು... ಎಂದಿನಂತೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದ ಸಂಭ್ರಮವು ಎರಡು ದಿನಗಳ ಮುಂಚೆಯೇ ಜಗಮಗಿಸುತ್ತಿತ್ತು... ನಾವೆಲ್ಲರೂ ಒಟ್ಟಾಗಿ ಸೇರಿ ಶಾಲೆಯನ್ನು , ಧ್ವಜಸ್ತಂಭವನ್ನೂ ಸ್ವಚ್ಛಗೊಳಿಸಿ 3 ಬಣ್ಣಗಳ ಮೆರುಗನ್ನು ಶಾಲೆಗೆ ಸಿಂಗರಿಸಿ, ಧ್ವಜಸ್ತಂಭದ ಸುತ್ತಲೂ ಹೂಗಳನ್ನು ಜೋಡಿಸಿಟ್ಟು ಖುಷಿಪಟ್ಟೆವು.... ನಂತರ 15 ರಂದು ಗ್ರಾಮ ಪಂಚಾಯತ್ ನಲ್ಲಿ ಧ್ವಜಾರೋಹಣದ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಪ್ರೈಮರಿ ಸ್ಕೂಲ್ ನ ಮಕ್ಕಳ ರಾಲಿ ನೋಡುತ್ತಾ ತುಂಬಾ ವಿಜೃಂಭಿಸಿದೆವು.... ನಂತರ ಧ್ವಜಾರೋಹಣದ ವೇಳೆ ನಾವೆಲ್ಲರೂ ರಾಷ್ಟ್ರ ಗೀತೆ, "ವಂದೇ ಮಾತರಂ" ಹಾಗೂ "ಧ್ವಜ ಗೀತೆ" ಹಾಡಿ ರಾಷ್ಟ್ರ ಧ್ವಜಕ್ಕೆ ಗೌರವಿಸಿದೆವು....
      ಅನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳ ಭಾಷಣ ಹಾಗೂ ಬಹುಮಾನಗಳ ವಿತರಣೆ ಕಾರ್ಯಕ್ರಮ... ಜರುಗಿತು. ಈ ಎಲ್ಲಾ ಸಮಾರಂಭಗಳಲ್ಲಿ ಎಲ್ಲರೊಂದಿಗೆ ಪಾಲ್ಗೊಂಡು ಎಲ್ಲರೂ ಸಂಭ್ರಮಿಸಿದೆವು.... ಭಾರತ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು....
"ಜೈ ಭಾರತಾಂಬೆ" ಎಂದು ಹೇಳುತ್ತ... ಈ ಸಂತೋಷದ ಕ್ಷಣಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ... ವಂದನೆಗಳು.........
................................................ ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
******************************************

 

         ನಾನು ಪಿ.ಜೆ ಹೃತಿಕ್. ಈ ವರ್ಷದ ಸ್ವಾತಂತ್ರ್ಯ ದಿನದ ಆಚರಣೆ ನಮ್ಮ ಶಾಲೆಯಲ್ಲಿ ಬಹಳ ವಿಶೇಷವಾಗಿ ನಡೆದಿತ್ತು. ನಮ್ಮ ಶಾಲೆಯಲ್ಲಿ ಬೆಳಗ್ಗೆ 8:45 ಗಂಟೆಗೆ ಸರಿಯಾಗಿ ರಾಷ್ಟ್ರ ಧ್ವಜವು ಬಾನಿನಲ್ಲಿ ವಿಜೃಂಭಿಸಿತು. ಧ್ವಜವನ್ನು ನೋಡುತ್ತಿದ್ದಾಗ ದೇಶಪ್ರೇಮವು ಉಕ್ಕಿ ಬರುತ್ತಿತ್ತು. ಅದರಲ್ಲೂ ನಮ್ಮ ಶಾಲೆಯಲ್ಲಿ ಧ್ವಜಾರೋಹಣವನ್ನು ಮಾಜಿ ಸೈನಿಕರೊಬ್ಬರು ನೆರವೇರಿಸಿದ್ದರಿಂದ ಪ್ರತಿಯೊಬ್ಬರಿಗೂ ರೋಮಾಂಚನವಾಗುವುದಂತೂ ಖಂಡಿತವಾಗಿತ್ತು.
 ಸುಮಾರು ಎರಡೂವರೆ ಕಿಲೋಮೀಟರ್ ವರೆಗೂ ನಾವು ರಾಷ್ಟ್ರಧ್ವಜ , ಘೋಷ ವಾಕ್ಯ , ಘೋಷ್ ವಾದನಗಳೊಂದಿಗೆ ಮೆರವಣಿಗೆ ಸಾಗಿದೆವು. ಮಧ್ಯ-ಮಧ್ಯದಲ್ಲಿ ಸಿಹಿ ವಿತರಿಸಿದ್ದರಿಂದ ಮಕ್ಕಳಿಗೆ ಮೆರವಣಿಗೆ ಸಾಗುವ ಉತ್ಸಾಹ ಹೆಚ್ಚಾಗಿತ್ತು. ಕಿವಿಗೆ ಕೇಳುವ ಘೋಷವಾಕ್ಯಗಳಿಂದ ದಾಹ ಸುಸ್ತು ಇದಾವುದೂ ಗೊತ್ತಾಗಲೇ ಇಲ್ಲ. ಕೊನೆಗೆ ನಮ್ಮ ನೆರೆಯ ಶಾಲೆಯೊಂದರಲ್ಲಿ ಎಲ್ಲರೂ ಒಟ್ಟಿಗೆ ಸೇರಿದರು ನಂತರ ಉಪಹಾರ ವಿತರಿಸಲಾಯಿತು.
       ಹೀಗೆ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ನಮ್ಮ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ನಾವು ಹಿಂದೆಂದೂ ಕಂಡಿರದ ರೀತಿಯಲ್ಲಿ ಈ ವರ್ಷದ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಿಸಲಾಯಿತು...
............................................ ಪಿ.ಜೆ ಹೃತಿಕ್
10ನೇ ತರಗತಿ
ಶ್ರೀದೇವಿ ಪ್ರೌಢಶಾಲೆ ದೇವಿನಗರ , ಪುಣಚ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************       ನನ್ನ ಹೆಸರು ಶ್ರಾವ್ಯ..... ನಮ್ಮ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. 
ನಮ್ಮ ನಡೆ - ದೇಶ ಕಡೆ ಎಂಬ ಘೋಷಣೆಯೊಂದಿಗೆ ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ ಆಚರಿಸಲಾಯಿತು
................................................ ಶ್ರಾವ್ಯ.
10ನೇ ತರಗತಿ. 
ಶ್ರೀ ದೇವಿ ವಿದ್ಯಾಕೇಂದ್ರ ದೇವಿನಗರ ಪುಣಚ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************      ನನ್ನ ಹೆಸರು ಲತಿಕಾ ...... ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂತೋಷದಿಂದ ಆಚರಿಸಲಾಯಿತು. ಕ್ರೀಡಾಂಗಣದಲ್ಲಿ 3500 ವಿದ್ಯಾರ್ಥಿಗಳಿಂದ 75ರ ಸಂಕೇತ ರಚಿಸಲಾಯಿತು.
 ನಂತರ ಅತಿಥಿಗಳು ಧ್ವಜಾರೋಹಣ ಮಾಡಿದರು. ನಂತರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ಅತಿಥಿ ಗಳು ಹಿತನುಡಿ ಆಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಿತು. ನಂತರ ಸಿಹಿ ಹಂಚಿದರು ನಮ್ಮ ಶಾಲೆಯಲ್ಲಿ ಆಚರಿಸಿದ ಸ್ವಾತಂತ್ರ್ಯದ ಆಚರಣೆ ಎಲ್ಲರಿಗೂ ಕುಶಿ ತಂದಿದೆ.  
................................................ ಲತಿಕ
5ನೇ ತರಗತಿ
ಶ್ರೀ ರಾಮ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ 
ಹನುಮಾನ್ ನಗರ , ಕಲ್ಲಡ್ಕ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************       ನನ್ನ ಹೆಸರು ಸಿಂಚನಾ.... ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ನಮಗೆ ಶಾಲೆಯಲ್ಲಿ
ಧ್ವಜ ‌ಸಿಕ್ಕಿತು. 15/8/2022 ರಂದು ನನ್ನ ಶಾಲೆಯಲ್ಲಿ 9 ಗಂಟೆಗೆ ಧ್ವಜಾರೋಹಣದ ಸಮಯಕ್ಕೆ ತಲುಪಿದೆ.
 ನಾನು ನನ್ನ ಶಾಲೆಯಲ್ಲಿ ಮುಖ್ಯಮಂತ್ರಿ ಆಗಿದ್ದೇನೆ. ನನಗೆ ತುಂಬಾ ಸಂತೋಷವಾಯಿತು. ನನಗೆ ಶಾಲೆಯಲ್ಲಿ ಚಾಕಲೇಟ್ ಸಿಕ್ಕಿತು. ಈ ವರ್ಷ ತುಂಬಾ ಗಮತ್ತಿನಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂತೋಷದಿಂದ ಆಚರಿಸಿದೆವು.
........................................... ಸಿಂಚನಾ ಶೆಟ್ಟಿ
5ನೇ ತರಗತಿ
ದ.ಕ.ಜಿ.ಪ. ಪ್ರಾಥಮಿಕ ಶಾಲೆ, ಸೇಡಿಗುಳಿ 
 ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article