-->
ಪ್ರೀತಿಯ ಪುಸ್ತಕ : ಸಂಚಿಕೆ - 21

ಪ್ರೀತಿಯ ಪುಸ್ತಕ : ಸಂಚಿಕೆ - 21

ಪ್ರೀತಿಯ ಪುಸ್ತಕ
ಸಂಚಿಕೆ - 21

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                                    ಮಕ್ಕಳು ನೀಡಿದ ಶಿಕ್ಷೆ
          ಪ್ರೀತಿಯ ಮಕ್ಕಳೇ....... ‘ಮಕ್ಕಳು ನೀಡಿದ ಶಿಕ್ಷೆ’ ಹೆಸರೇ ಎಷ್ಟು ಕುತೂಹಲಕಾರಿಯಾಗಿದೆ ಅಲ್ಲವೇ...? ಮಕ್ಕಳು ಯಾರಿಗೆ ಶಿಕ್ಷೆ ಕೊಟ್ಟರು...? ಯಾಕೆ ಶಿಕ್ಷೆ ಕೊಟ್ಟರು...? – ಅನ್ನುವ ಪ್ರಶ್ನೆಗಳು ಹುಟ್ಟುತ್ತವೆ ಅಲ್ಲವೇ...? ಹೌದು, ಇದು ಸ್ವಲ್ಪ ವಿಶೇಷವೇ. ಈ ಕತೆಯಲ್ಲಿ ಮಕ್ಕಳು ದೊಡ್ಡವರಿಗೆ ಶಿಕ್ಷೆ ಕೊಡುತ್ತಾರೆ. ಮತ್ತು ದೊಡ್ಡವರು, ಮಕ್ಕಳು ನೀಡಿದ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತಾರೆ. ಊರಿನಲ್ಲಿ ಇರುವ ಒಂದು ದೊಡ್ಡ ಮರದ ಮೇಲೆ ಮಕ್ಕಳಿಗೆ ಪ್ರೀತಿ ಬೆಳೆದಿರುತ್ತದೆ. ತಮ್ಮ ಟೀಚರ್ ಹತ್ರ ಮರದ ಕೆಳಗೆಯೇ ತರಗತಿ ನಡೆಸುವಂತೆ ಕೇಳಿಕೊಳ್ಳುತ್ತಾರೆ. ಪರೀಕ್ಷೆಗೆ ಓದುವಾಗಲೂ ಮರದ ಕೆಳಗೆಯೇ ಸೇರಿಕೊಂಡು ಓದುತ್ತಾರೆ. ಬೇಸಿಗೆ ರಜೆ ಮುಗಿಸಿ ವಾಪಾಸು ಬಂದಾಗ ಮರ ಇರುವುದಿಲ್ಲ. ಮಕ್ಕಳಿಗೆ ಎಷ್ಟು ಬೇಸರ ಆಗಿರಬಹುದು ಅಲ್ಲವೇ....? ಎಷ್ಟೊಂದು ದೊಡ್ಡ ಮರ. ಎಷ್ಟೊಂದು ಪ್ರಾಣಿ, ಪಕ್ಷಿಗಳಿಗೆ ಆಶ್ರಯವಾಗಿತ್ತು. ಏನಾಯಿತು ಮರಕ್ಕೆ....? ಮಕ್ಕಳು ಸುಮ್ಮನೇ ಬಿಡಲಿಲ್ಲ. ಮರ ಹೇಗೆ ಕಾಣೆಯಾಯಿತು ಎಂಬುದನ್ನು ಕಂಡು ಹಿಡಿದರು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟರು. ಶಿಕ್ಷೆ ಕೂಡಾ ಬಹಳ ಚೆನ್ನಾಗಿದೆ. ಓದಿ ನೋಡಿ.. ನಾ ಡಿಸೋಜಾ ಅವರು ಹೆಸರಾಂತ ಲೇಖಕರು. ಮಕ್ಕಳಿಗಾಗಿಯೂ ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕವನ್ನು ನಾಟಕ ರೂಪದಲ್ಲಿ ಬರೆದಿದ್ದಾರೆ. 
ಲೇಖಕರು: ನಾ ಡಿಸೋಜಾ
ಚಿತ್ರಗಳು: ಪಾರ್ಥ ಸೇನಗುಪ್ತ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪಕಿ೵ಸಬಹುದು – ಮೋಹನ – 9980181718) 
ಬೆಲೆ: ರೂ.19 (ಹಳೆಯ ಪ್ರತಿ, ಈಗ ಬೆಲೆ ಬದಲಾಗಿರಲೂಬಹುದು)
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************
     

Ads on article

Advertise in articles 1

advertising articles 2

Advertise under the article