-->
ವರದಿ - ಆಜಾದಿಕಾ ಅಮೃತ ಮಹೋತ್ಸವ -2022: ಸಂಚಿಕೆ - 2

ವರದಿ - ಆಜಾದಿಕಾ ಅಮೃತ ಮಹೋತ್ಸವ -2022: ಸಂಚಿಕೆ - 2

ವರದಿ - ಆಜಾದಿಕಾ ಅಮೃತ ಮಹೋತ್ಸವ - 2022
ಸಂಚಿಕೆ - 2
ತಮ್ಮ ಶಾಲೆಯಲ್ಲಿ ಜರುಗಿದ 
75 ನೇ ಸ್ವಾತಂತ್ರ್ಯೋತ್ಸವ
ಕಾರ್ಯಕ್ರಮದ ಕುರಿತಾಗಿ 
ವಿದ್ಯಾರ್ಥಿಗಳು 
ಬರೆದಿರುವ ವರದಿ

      ಮಕ್ಕಳ ಜಗಲಿಗೆ ನನ್ನ ಹೃದಯ ಪೂರಕ ವಂದನೆಗಳು. ನಾನು ಭವಿತ್ ಕುಲಾಲ್. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ನನ್ನ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಿದೆವು. ಊರಿನ ಗಣ್ಯವ್ಯಕ್ತಿಗಳು, ಶಿಕ್ಷಕ-ಶಿಕ್ಷಕಿಯರು, ಮಕ್ಕಳ ಪೋಷಕರು , ವಿದ್ಯಾರ್ಥಿಗಳು ಎಲ್ಲರೂ ಸೇರಿದ್ದೆವು. ಶಾಲೆಯ ಅಧ್ಯಕ್ಷರು ಧ್ವಜಾರೋಹಣ ಮಾಡಿದರು.
 ವಿದ್ಯಾರ್ಥಿಗಳು ಮತ್ತು ಎಲ್ಲರೂಸೇರಿ, ಧ್ವಜಗೀತೆ ರಾಷ್ಟ್ರಗೀತೆ ಹಾಡಿದೆವು. ಭಾರತ ಮಾತೆಗೆ ನಮಸ್ಕಾರ ಮಾಡಿದೆವು. ನಂತರ ಮೆರವಣಿಗೆ ಹೊರಟೆವು. ಮೆರವಣಿಗೆ ಹೋಗುವ ದೃಶ್ಯ ತುಂಬಾನೆ ಖುಷಿ ನೀಡಿತು. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತಂಡ ಮಾಡಿ ಕೇಸರಿ , ಬಿಳಿ, ನೀಲಿ , ಹಸಿರು ಬಟ್ಟೆ ಧರಿಸಿದೆವು. ವಿದ್ಯಾರ್ಥಿಗಳು ತುಂಬಾನೆ ಅಂದವಾಗಿ, ಚಂದವಾಗಿ ಕಾಣ್ಣುತ್ತಿದ್ದೆವು. ಮೆರವಣಿಗೆ ಶಾಲೆಗೆ ವಾಪಸ್ ಬಂದ ನಂತರ ವೇದಿಕೆಯಲ್ಲಿ ಕಾರ್ಯಕ್ರಮ ಇತ್ತು. ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಎಲ್ಲರೂ ಶಿಸ್ತಿನಿಂದ ಒಟ್ಟಿಗೆ ಸೇರಿ ಆಚರಿಸಿದೆವು. ಕಾರ್ಯಕ್ರಮದ ಕೊನೆಗೆ , ನಮಗೆ ಸಿಹಿ ತಿಂಡಿ ಪಲಾವ್ ತಿಂದು ಖುಷಿ ಪಟ್ಟೆವು. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಧನ್ಯವಾದಗಳು.
...................................... ಭವಿತ್ ಕುಲಾಲ್ 
7ನೇ ತರಗತಿ 
ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



      ಹರಿ ಓಂ, ನನ್ನ ಹೆಸರು ಸ್ರಾನ್ವಿ ಶೆಟ್ಟಿ ನಮ್ಮ ಶಾಲೆಯಲ್ಲಿ 75ನೇ ಸ್ವಾತಂತ್ರೋತ್ಸವದ ಅಮ್ರತ ಮಹೋತ್ಸವವನ್ನು ಬಹಳ ಸಡಗರದಿಂದ ಆಚರಿಸಿದೆವು. ಸ್ವಾತಂತ್ರದ ಹಿಂದಿನ ದಿನ ಶಾಲೆಗೆ ಹೋಗಿ ಶಾಲೆಯನ್ನು ಅಲಂಕರಿಸಿದೆವು. ಸ್ವಾತಂತ್ರ್ಯದ ದಿನ ಬೆಳಿಗ್ಗೆ ನಮ್ಮ ಶಾಲೆಯಲ್ಲಿ ನಮ್ಮ ಶಾಲೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣದ ಶಿಕ್ಷಕರಾದ ಜನಾರ್ಧನಣ್ಣನ ಜತೆಗೂಡಿ ನಾವು ಸ್ವಾತಂತ್ರದ 75ನೇ ಅಮ್ರತ ಮಹೋತ್ಸವವನ್ನು ಆಚರಿಸಿದೆವು. 
ನವೀಶಕ್ಕನವರು ನಮಗೆ ಸ್ವಾತಂತ್ರ್ಯದ ಬಗ್ಗೆ ಭೌದ್ದಿಕ್ ನೀಡಿದರು. ನಮ್ಮ ಬಾವುಟವನ್ನು ತಯಾರು ಮಾಡಿದವರು ಯಾರು ಎಂದೆಲ್ಲ ತಿಳಿಸಿಕೊಟ್ಟರು. ಆನಂತರ 9 ಗಂಟೆಗೆ ನಮ್ಮ ಶಾಲೆಯಲ್ಲಿ ಧ್ವಜಾರೋಹಣ ಮಾಡಿದರು ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ನೆರವೇರಿಸಿದರು. 
ನಮ್ಮ ಶಾಲೆಯಲ್ಲಿ ದೇಶಭಕ್ತಿ ಗೀತೆ, ಸ್ವಾತಂತ್ರ್ಯದ ಬಗ್ಗೆ ಭಾಷಣ ಮುಂತಾದ ಸ್ಫರ್ಧೆಗಳನ್ನು ಏರ್ಪಡಿಸಿದ್ದರು. ನನಗೂ ಭಾಷಣದಲ್ಲಿ ಮೊದಲ ಬಹುಮಾನ ದೊರಕಿದೆ. ನಮ್ಮ ಶಿಕ್ಷಕರು ನಮ್ಮ ದೇಶದ ಬಗ್ಗೆ ನಮಗೆ ಸ್ವಾತಂತ್ರ್ಯ ಸಿಗಲು ಹೋರಾಡಿದವರ ಬಗ್ಗೆ ತಿಳಿಸಿದರು. ಇವೆಲ್ಲಾ ವಿಷಯಗಳನ್ನು ಕೇಳಿ ನಮಗೂ ನಮ್ಮ ದೇಶದ ಬಗ್ಗೆ ದೇಶಕ್ಕಾಗಿ ಹೋರಾಡಿದವರ ಬಗ್ಗೆ ಇದ್ದ ಅಭಿಮಾನ ಇನ್ನೂ ಜಾಸ್ತಿಯಾಗಿದೆ. ನಮ್ಮ ಶಾಲೆಯಲ್ಲಿ ನಡೆದ ಅಮೃತಮಹೋತ್ಸವದ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟ ಮಕ್ಕಳ ಜಗಲಿಗೆ ತುಂಬಾ ಧನ್ಯವಾದಗಳು. 'ಜೈ ಹಿಂದ್ ಜೈ ಭಾರತ ಮಾತ'
...................................... ಸ್ರಾನ್ವಿ ಶೆಟ್ಟಿ    
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


         ಹರಿ ಓಂ , ನಾನು ಆಕಾಂಕ್ಷಾ... "ಅಮೃತ ನಡಿಗೆ - ದೇಶದ ಕಡೆಗೆ" ಎಂಬ ಘೋಷವಾಕ್ಯದೊಂದಿಗೆ ನಮ್ಮ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನಮ್ಮ ದೇಶದ ತ್ರಿವರ್ಣ ಧ್ವಜವನ್ನು ನಮ್ಮ ಶಾಲೆಯಲ್ಲಿ ಮಾಜಿ ಸೈನಿಕರೊಬ್ಬರು ಹಾರಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧ್ವಜಾರೋಹಣದ ಸಮಯದಲ್ಲಿ ಧ್ವಜ ಗೀತೆಯನ್ನು ಹಾಡುವ ಮೂಲಕ ನಾವೆಲ್ಲರೂ ಗೌರವವನ್ನು ಸೂಚಿಸಿದೆವು. ನಂತರ ಸಭಾ ಕಾರ್ಯಕ್ರಮ ಜರುಗಿತು. ಆನಂತರ ಸಿಹಿ ವಿತರಣೆಯನ್ನು ಮಾಡಲಾಯಿತು. ಅಮೃತ ಮಹೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ 1 ವಾರಗಳ ಮುಂಚೆಯೇ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೀಗೆ ಮುಂತಾದ ವೇಷ ಭೂಷಣಗಳೊಂದಿಗೆ... ಹುರಿದುಂಬಿಸುವ ಘೋಷ್ ವಾದನಗಳೊಂದಿಗೆ.. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಮಾರು ಎರಡೂವರೆ ಕಿಲೋಮೀಟರ್ ಗಳಷ್ಟು ಪಥಸಂಚಲನವನ್ನು ಮಾಡಿದೆವು. ದೇಶಪ್ರೇಮದಿಂದ ನಡೆಸಿದ ಈ ಪಥಸಂಚಲನದಲ್ಲಿ ಘೋಷವಾಕ್ಯಗಳನ್ನು ಹೇಳಲಾಯಿತು. ನಂತರ ನಮ್ಮ ಊರಿನ ಪಂಚಾಯತ್ನಲ್ಲಿ ನಾವೆಲ್ಲರೂ ಒಟ್ಟು ಸೇರಿದೆವು. ಅಲ್ಲಿ ನಮಗೆಲ್ಲರಿಗೂ ಲಘುಉಪಹಾರವನ್ನು ವಿತರಿಸಿದರು.. ಪಥಸಂಚಲನದ ನಡು-ನಡುವೆ ನಮಗೆಲ್ಲರಿಗೂ ಸಿಹಿಯನ್ನು ವಿತರಿಸಿದರು. ಹೀಗೆ ನಮ್ಮ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು.. ವಂದನೆಗಳು.. 
..................................................... ಆಕಾಂಕ್ಷಾ
10ನೇ ತರಗತಿ 
ಶ್ರೀ ದೇವಿ ಪ್ರೌಢ ಶಾಲೆ ದೇವಿನಗರ, ಪುಣಚ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



       ಎಲ್ಲರಿಗೂ ನಮಸ್ಕಾರ ನಾನು ಗಾಯತ್ರಿ. ನಮ್ಮ ದೇಶದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ನಾವು ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲದಲ್ಲಿ ಆಗಸ್ಟ್ 13,14, ಹಾಗೂ 15 ಮೂರು ದಿನಗಳಲ್ಲಿ ದ್ವಜಾರೋಹಣ ಮಾಡಿ ಆಚರಿಸಿದೆವು. ನಮ್ಮ ಶಾಲೆಯಲ್ಲಿ ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಭಾಷಣ ಸ್ವರ್ಧೆ, ದೇಶಭಕ್ತಿ ಗೀತೆ, ಚಿತ್ರಕಲಾಸ್ವರ್ಧೆ ಹಾಗೂ ಸ್ವಾತಂತ್ಯ ಹೋರಾಟಗಾರರ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತು. 
ನಂತರ ಆಗಸ್ಟ್ 15 ರಂದು ನೆಟ್ಲಾ ದೇವಸ್ಥಾನದ ವಠಾರದಿಂದ ನಮ್ಮ ಶಾಲಾವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಅಂಗನವಾಡಿ ಪುಟಾಣಿಗಳು ಹಾಗೂ ನಮ್ಮ ಶಾಲೆಯ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ವಾದ್ಯ- ಘೋಷದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶಾಲೆಗೆ ಬಂದು ನಮ್ಮ ಊರಿನ ಹಿರಿಯರಾದ ರಾಮಚಂದ್ರ ಬನ್ನಿತ್ಯಾಯರಿಂದ ದ್ವಜಾರೋಹಣ ನೆರವೇರಿತು. 
 ವೇಳೆ ನಾವೆಲ್ಲರೂ ರಾಷ್ಟ್ರಗೀತೆ ಹಾಗೂ ದ್ವಜಾಗೀತೆ ಹಾಡಿ ರಾಷ್ಟ್ರದ್ವಜಕ್ಕೆ ಗೌರವಿಸಿದೆವು. ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಅನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಂದ ನಮ್ಮ ಶಾಲೆಯಲ್ಲಿ ಹೊಸದಾಗಿ ಪ್ರಾರಂಭವಾದ ಜ್ಞಾನದೀಪ ಎಂಬ ಗ್ರಂಥಾಲಯದ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಾಗೂ ಶಾಲೆಯ ಸುತ್ತ ಮುತ್ತ ಇರುವ ಎಲ್ಲ ಸಂಘ ಸಂಸ್ಥೆಗಳ ಸದಸ್ಯರುಗಳು ಸೇರಿದ್ದು , ಮಕ್ಕಳ ದೇಶ ಭಕ್ತಿಗೀತೆ, ಭಾಷಣ, ನೃತ್ಯ ಹಾಗೂ ಅತಿಥಿಗಳ ಭಾಷಣ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಕೊನೆಗೆ ಎಲ್ಲರಿಗೂ ಸಿಹಿತಿಂಡಿ ವಿತರಿಸಿದರು. ಹೀಗೆ ಸುಂದರವಾಗಿ ನಮ್ಮ ಶಾಲೆಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಮುಕ್ತವಾಯಿತು. ಧನ್ಯವಾದಗಳು 
.................................................... ಗಾಯತ್ರಿ 
4ನೇ ತರಗತಿ 
ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಗೋಳ್ತಮಜಲು ಗ್ರಾಮ   
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



         ನನ್ನ ಹೆಸರು ಸಾನ್ವಿ ಸಿ.ಎಸ್.  ನಮಗೆಲ್ಲ ಸಂತೋಷದ ದಿನ. ಏಕೆಂದರೆ 75ನೇ ಸ್ವಾತಂತ್ರ್ಯೋತ್ಸವ, ಅಮೃತ ಮಹೋತ್ಸವ. ನಾವೆಲ್ಲರೂ ಸಡಗರ ಸಂಭ್ರಮದಿಂದ ಶಾಲೆಗೆ ಹೋಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಈಗ ನಾನು ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಹೇಗೆ ಆಚರಿಸಿದವೆಂದು ಬರೆಯುತ್ತೇನೆ. ನಾನು ಶಾಲೆಗೆ ತಲುಪಿದ ಸ್ವಲ್ಪ ಹೊತ್ತಿನಲ್ಲಿ ಅಸ್ಸೆಂಬ್ಲಿ ನಡೆಯಿತು. ಪರಮಪೂಜ್ಯ ಗುರುದೇವಾನಂದ ಸ್ವಾಮೀಜಿಯವರೇ ಸ್ವತಃ ಧ್ವಜಾರೋಹಣ ಮಾಡಿದರು. 
           ನಂತರ ನಮಗೆಲ್ಲ ಲಡ್ಡನ್ನು ಹಂಚಲಾಯಿತು. ಆಮೇಲೆ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಪರಮಪೂಜ್ಯ ಸ್ವಾಮೀಜಿಯವರು, ಪೂಜ್ಯ ಮಾತೆಯವರು ಹಾಗೂ ಮತ್ತು ಕೆಲವು ಗಣ್ಯ ಅತಿಥಿಗಳು ಆಗಮಿಸಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಸ್ವಾಮೀಜಿಯವರು ಬಹುಮಾನ ವಿತರಿಸಿದರು. 
     ನನಗೆ ಧಾರ್ಮಿಕ ಪಠಣ , ಭಾಷಣ , ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ನಂತರ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು , ಕೆಲವರು ದೇಶಭಕ್ತಿ ಗೀತೆ ಹಾಡಿದರು, ಭಾಷಣ ಮಾಡಿದವರಲ್ಲಿ ನಾನೂ ಒಬ್ಬಳು ಮತ್ತೆ ಕೆಲವರು ನೃತ್ಯ ಮಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಜಲಿಯನ್ ವಾಲಾಬಾಗ್ ಕುರಿತಾಗಿ ಮೂಕನಾಟಕ ಮಾಡಿದರು. ಆಮೇಲೆ ಮೆರವಣಿಗೆ ನಡೆಯಿತು. ನಾವು ಘೋಷಣೆಗಳೊಂದಿಗೆ ಶಾಲೆಯಿಂದ ರಸ್ತೆಯವರೆಗೆ ರಸ್ತೆಯಿಂದ ಕೆಳಗೆ ಕ್ಷೇತ್ರದ
ವರೆಗೆ ಮೆರವಣಿಗೆ ಮಾಡಿದೆವು. ನಂತರ ಕ್ಷೇತ್ರದ ಅನ್ನಛತ್ರದಲ್ಲಿ ಊಟ ಮುಗಿಸಿ ಶಾಲೆಯಿಂದ ಬಹುಮಾನಗಳನ್ನು ತೆಗೆದುಕೊಂಡು ಮನೆಗೆ ಹಿಂದಿರುಗಿದವು.
...................................... ಸಾನ್ವಿ ಸಿ ಎಸ್ 
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


     ನನ್ನ ಹೆಸರು ಮಾನ್ವಿ ಹೆಚ್ ಕುಲಾಲ್.
ನನ್ನ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ತುಂಬಾ ಚೆನ್ನಾಗಿ ಆಚರಿಸಿದೆವು. ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕೊನೆಗೆ ನಮಗೆಲ್ಲಾ ತಿನ್ನಲು ಸಿಹಿಲಾಡು ಕೊಟ್ಟರು.
............................... ಮಾನ್ವಿ ಹೆಚ್ ಕುಲಾಲ್.
5ನೇ ತರಗತಿ 
ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೋಂದೇಲ್, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
******************************************


         ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಿದೆವು. 
75 ವರ್ಷಗಳು ತುಂಬಿದ ಸವಿ ನೆನಪಿಗಾಗಿ ಶಾಲೆಯಲ್ಲಿ 3 ದಿನಗಳವರೆಗೆ ರಾಷ್ಟ ಧ್ವಜ ಹಾರಿಸಲಾಯಿತು. ಇದು ನಮಗೆ ಮರೆಯಲಾರದ ಕ್ಷಣಗಳಾಗಿವೆ. ಶಾಲೆಯಲ್ಲಿ ಬಾವುಟದ ಚಿತ್ರ ಬಿಡಿಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ದೇಶಭಕ್ತಿಯ ಗೀತಗಾಯನ ಸ್ಪರ್ಧೆ, ಹಾಗೂ ಭಾಷಣ ಸ್ಪರ್ಧೆ ನೆಡೆಸಲಾಯಿತು.ಎಲ್ಲರೂ ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆಗಸ್ಟ್ 15 ರಂದು ಬೆಳಿಗ್ಗೆ 9ಗಂಟೆಗೆ ನಮ್ಮ ಶಾಲೆಯಲ್ಲಿ ಊರಿನ ಹಿರಿಯರಿಂದ ಧ್ವಜಾರೋಹಣ ಮಾಡಿಸಲಾಯಿತು. ನಾವೆಲ್ಲರೂ ರಾಷ್ಟ್ರಗೀತೆ ಹಾಡಿ ತಾಯಿ ಭಾರತಾಂಬೆಗೆ ಗೌರವ ನಮನ ಸಲ್ಲಿಸಿದೆವು. ವಂದೇ ಮಾತರಂ ಮತ್ತು ದ್ವಜ್ ಗೀತ್ ಹಾಡಿದೆವು. ರಾಷ್ಟ್ರ ನಾಯಕರಿಗೆ ಜಯಕಾರ ಹಾಕಿದೆವು. ಘೋಷಣೆ ಕೂಗಿದೆವು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಭಾಷಣ ಮಾಡಿದೆವು. ಅತಿಥಿಗಳ, ಗುರುಗಳ ಭಾಷಣ ವನ್ನು ಆಲಿಸಿದೆವು ವೀರ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡೆವು. ಬಹುಮಾನ ಪಡೆದುಕೊಂಡು ಖುಷಿಪಟ್ಟೆವು. ಸಿಹಿಊಟ ಸಿಹಿ ತಿಂಡಿ ಸವಿದು ಹೆಮ್ಮೆಯಿಂದ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆವು. 
........................................... ಸಾನ್ವಿ ಎ.ಆರ್ 
4ನೇ ತರಗತಿ 
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚೇರು 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
******************************************

Ads on article

Advertise in articles 1

advertising articles 2

Advertise under the article