-->
ಪ್ರೀತಿಯ ಪುಸ್ತಕ : ಸಂಚಿಕೆ - 19

ಪ್ರೀತಿಯ ಪುಸ್ತಕ : ಸಂಚಿಕೆ - 19

ಪ್ರೀತಿಯ ಪುಸ್ತಕ
ಸಂಚಿಕೆ - 19

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 
                                    ಭಾರತದ ಸ್ವಾತಂತ್ರ್ಯ ಕಥೆ
       ಪ್ರೀತಿಯ ಮಕ್ಕಳೇ...... ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರುಷಗಳಾದವು. ಸ್ವಾತಂತ್ರ್ಯ ನಮಗೆ ಸುಲಭದಲ್ಲಿ ಸಿಗಲಿಲ್ಲ. ಅದಕ್ಕಾಗಿ ಎಂತೆಂತಹ ಹೋರಾಟಗಳು ನಡೆದವು. ಅಂದ ಹಾಗೆ ಸ್ವಾತಂತ್ರ್ಯ ಸಿಕ್ಕದ್ದು ಅಂದರೆ ಯಾವಾಗಲೋ ನಾವು ಸ್ವಾತಂತ್ರ್ಯ ಕಳೆದುಕೊಂಡಿದ್ದೆವು ಅಂತ ಅರ್ಥ ಅಲ್ಲವೇ..? ಈ ಪುಸ್ತಕದಲ್ಲಿ ಮೊದಲಿಗೆ ನಾವು ಹೇಗೆ ಸ್ವಾತಂತ್ರ್ಯ ಕಳಕೊಂಡೆವು ಎಂಬ ವಿವರ ಇದೆ. ಆಮೇಲೆ ಅದರಿಂದಾಗಿ ನಮ್ಮ ಮೇಲೆ ಏನು ಪರಿಣಾಮವಾಯಿತು ಎಂಬ ಕಥೆ ಇದೆ. ಅದರ ಜೊತೆ ಜೊತೆಗೇ ಸ್ವಾತಂತ್ರ್ಯದ ಚಿಂತನೆ ಹೇಗೆ ಬಂತು, ಯಾರ್ಯಾರು ಏನೇನು ಮಾಡಲು ತೊಡಗಿದರು ಎಂಬ ಚಿತ್ರಣ ಸಿಗುತ್ತದೆ. ಸ್ವಾತಂತ್ರ್ಯದ ಕಥೆ ತುಂಬಾ ದೊಡ್ಡದು. ಚಳವಳಿಗಳು ಬೇರೆ ಬೇರೆ ಆಯಾಮಗಳಲ್ಲಿ ನಡೆದಿತ್ತು. ಕ್ರಾಂತಿ ಮಾರ್ಗ, ಶಾಂತಿ ಮಾರ್ಗಗಳಲ್ಲಿ ಬ್ರಿಟಿಷರನ್ನು ಎದುರಿಸಿದ್ದರು ನಮ್ಮ ಹಿರಿಯರು. ಓದುತ್ತಾ ಹೋಗುವಾಗ, ಕೊನೆಯಲ್ಲಿ 1947ರ ಆಗಸ್ಟ್ 15 ರಂದು ಮಧ್ಯರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ಕಿತು ಅನ್ನುವಾಗ ಮನಸ್ಸು ತುಂಬಿ ಬರುತ್ತದೆ.    
        ಮಕ್ಕಳೇ ನಮ್ಮ ಇತಿಹಾಸ ನೀವು ತಿಳಿದಿರಬೇಕು. ಅದರಿಂದ ಕಲಿಯುವುದು ಸಾಕಷ್ಟು ಇದೆ. ಇದೊಂದೇ ಅಲ್ಲ, ಸ್ವಾತಂತ್ಯ್ರದ ಕುರಿತು ಬರೆದ ಬೇರೆ ಬೇರೆ ರೀತಿಯ ಪುಸ್ತಕಗಳನ್ನು ನೀವು ಓದಿಕೊಳ್ಳಬೇಕು. ಅಂತೆಯೇ ಬೇರೆ ದೇಶಗಳ ಸ್ವಾತಂತ್ರ್ಯ ಕಥೆ ನೀವು ತಿಳಿದುಕೊಳ್ಳಬೇಕು. ಓದಿಕೊಳ್ಳುತ್ತಾ, ತಿಳಿದುಕೊಳ್ಳುತ್ತಾ 75 ರ ಸ್ವಾತಂತ್ರ್ಯವನ್ನು ಸಂಭ್ರಮಿಸೋಣ. 
ಲೇಖಕರು: ಕೃಷ್ಣ ಚೈತನ್ಯ
ಅನುವಾದ: ಭೈರರಾಜ
ಚಿತ್ರಗಳು: ಜ್ಯೋತಿಷ್ ದತ್ತ ಗುಪ್ತ 
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪಕಿ೵ಸಬಹುದು–ಮೋಹನ– 9980181718) 
ಬೆಲೆ: ರೂ.15
ಆರು, ಏಳನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
....................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article