ಆರ್ಟ್ ಗ್ಯಾಲರಿ : ಕಲಾವಿದ ಗಣೇಶ ಸೋಮಯಾಜಿ ಬಿ : ಸಂಚಿಕೆ - 05
Thursday, August 4, 2022
Edit
ಆರ್ಟ್ ಗ್ಯಾಲರಿ : ಕಲಾವಿದ ಗಣೇಶ ಸೋಮಯಾಜಿ ಬಿ : ಸಂಚಿಕೆ - 05
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ
ಕಲಾವಿದರ ಹೆಸರು : ಗಣೇಶ ಸೋಮಯಾಜಿ ಬಿ.
GANESH SOMAYAJI Artist
1949 ರಲ್ಲಿ ಬಂಟ್ವಾಳದಲ್ಲಿ ಜನನ.
ಕಲಾವಿದ , ಕಲಾಶಿಕ್ಷಕ, ಕಲಾಸಂಘಟಕರಾಗಿದ್ದ ಇವರು ಜಿ.ಡಿ. ಆರ್ಟ್ ಕಲಾ ಪದವಿಯನ್ನು 1973 ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಪಡೆದರು. 39 ವರ್ಷಗಳ ಕಾಲ ಕಲಾ ಶಿಕ್ಷಕನಾಗಿದ್ದು , ಮಂಗಳೂರಿನಲ್ಲಿ ಕಳೆದ ಐದು ದಶಕಗಳಿಂದ ಕಲಾ ಸೇವೆ ಸಲ್ಲಿಸುತ್ತಿದ್ದಾರೆ. ಜಲವರ್ಣ, ತೈಲವರ್ಣಗಳು , ಭಾವಚಿತ್ರ , ದೃಶ್ಯಚಿತ್ರಗಳು, ಸ್ಥಳದಲ್ಲೇ ಆಶು ಚಿತ್ರ ರಚಿಸುವಲ್ಲಿ ವಿಶೇಷ ನಿಪುಣತೆ ಪ್ರದರ್ಶಿಸಿದ್ದಾರೆ. ರಾಜ್ಯ , ಹೊರ ರಾಜ್ಯಗಳಲ್ಲಿ ಚಿತ್ರ ಪ್ರಾತ್ಯಕ್ಷಿಕೆ, ಕಲಾಶಿಬಿರ, ಕಮ್ಮಟಗಳಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಹಲವಾರು ಕಡೆ , ಮುಂಬಯಿ , ಪೂನಾ , ವಾರಣಾಸಿ ರಾಷ್ಟ್ರೀಯ ಕಲಾ ಶಿಬಿರಗಳಲ್ಲಿ ಭಾಗಿಯಾಗಿದ್ದಾರೆ. ಜಾಹಾಂಗೀರ್ ಆರ್ಟ್ ಗ್ಯಾಲರಿ ಮುಂಬೈ , ದಿಲ್ಲಿ , ಸೇರಿದಂತೆ ದೇಶದ ಹಲವಾರು ಕಡೆ ಏಕವ್ಯಕ್ತಿ ಹಾಗೂ ಗುಂಪು ಚಿತ್ರಕಲೆಯ ನೂರಾರು ಪ್ರದರ್ಶನದಲ್ಲಿ ಕಳೆದ ನಲುವತ್ತು ವರ್ಷಗಳಿಂದ ಭಾಗವಹಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಲ್ಲದೆ ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯರಾಗಿ (1993-96), ಲಲಿತಕಲಾ ಅಕಾಡೆಮಿಯ -4 ಬಾರಿ ಸಂಪನ್ಮೂಲ ಕಲಾವಿದರಾಗಿ , ಅಕಾಡೆಮಿಯ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅಕಾಡೆಮಿ ವಾರ್ಷಿಕ ಕಲಾ ಪ್ರದರ್ಶನದ ತೀರ್ಪುಗಾರರಾಗಿ , ಮಹಾ ವಿಶ್ವವಿದ್ಯಾಲಯಗಳು ರಾಜ್ಯ , ರಾಷ್ಟ್ರೀಯ ಮಟ್ಟದ ಹಲವಾರು ಚಿತ್ರ ಕಲಾಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು
◾ಕರ್ನಾಟಕ ಸರ್ಕಾರ ಪ್ರಥಮವಾಗಿ ಕೊಡಮಾಡಿದ ಅತ್ಯುತ್ತಮ ಕಲಾ ಶಿಕ್ಷಕ ಪ್ರಶಸ್ತಿ 1993.
◾ಕರ್ನಾಟಕ ಸರ್ಕಾರದ ಜನಮೆಚ್ಚಿದ ಶಿಕ್ಷಕ 2002.
◾ಸಂದೇಶ ಪ್ರತಿಷ್ಠಾನ (ರಿ)ಮಂಗಳೂರು ,ಕಲಾ ಶಿಕ್ಷಕ ರಾಜ್ಯಪ್ರಶಸ್ತಿ 2003.
◾ಮೈಸೂರು ದಸರಾ ಚಿತ್ರಕಲಾ ಪ್ರದರ್ಶನ ರಾಜ್ಯಪ್ರಶಸ್ತಿ.1990.
◾ಕಾ .ವಾ. ಆಚಾರ್ಯ ವಿದ್ಯಾರ್ಥಿ ಟ್ರಸ್ಟ್ (ರಿ) ವತಿಯಿಂದ ಕಲಾನಿಧಿ ಪ್ರಶಸ್ತಿ.2007.
◾ಕರ್ನಾಟಕ ಲಲಿತಕಲಾ ಅಕಾಡೆಮಿ ವಾರ್ಷಿಕ ಕಲಾ ಪ್ರದರ್ಶನ -ರಾಜ್ಯ ಪ್ರಶಸ್ತಿ 2017.
◾ಆಳ್ವಾಸ್ ಚಿತ್ರಸಿರಿ ಗೌರವ ಕಲಾವಿದ ರಾಜ್ಯಪ್ರಶಸ್ತಿ 2018.
◾ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರಥಮವಾಗಿ ಕೊಡಮಾಡಿದ ದಿವಂಗತ ದೇವರಾಜ ಅರಸು ರಾಜ್ಯ ಪ್ರಶಸ್ತಿ 2019.
◾ಕರ್ನಾಟಕ ಲಲಿತಕಲಾ ಅಕಾಡೆಮಿಯ ಹಿರಿಯ ಕಲಾವಿದ ರಾಜ್ಯ ಗೌರವ ಪ್ರಶಸ್ತಿ 2020 -21. ಪ್ರಮುಖವಾದವುಗಳು.
ಕಲಾಕೃತಿಗಳ ಸಂಗ್ರಹ
◾ಕರ್ನಾಟಕ ಲಲಿತಕಲಾ ಅಕಾಡೆಮಿ.
◾ಕರ್ನಾಟಕ ಚಿತ್ರಕಲಾ ಪರಿಷತ್ ಶಾಶ್ವತ ಆರ್ಟ್ ಗ್ಯಾಲರಿ.
◾ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ಮ್ಯೂಸಿಯಂ, ಮಂಗಳೂರು.
◾"ಹಸ್ತಶಿಲ್ಪ" ರಾಷ್ಟ್ರೀಯ ಮ್ಯೂಸಿಯಂ ,ಮಣಿಪಾಲ.
◾ದೇಶ, ವಿದೇಶ ,ಗಲ್ಫ್ ದೇಶಗಳ ಸಹಿತ ವಿವಿಧ ಕಡೆಗಳಲ್ಲಿ ಹಾಗೂ ವೈಯಕ್ತಿಕ ಸಂಗ್ರಹಾಲಯಗಳು.
ವಿಳಾಸ :
ಕಲಾವಿದ ಗಣೇಶ್ ಬಿ ಸೋಮಯಾಜಿ
ಬಳ್ಳಾಲ್ ಬಾಗ್ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob : +91 98453 35557
********************************************
Size : 24x30 inches
Media : Acrylic on Canvas
Size : 24x36 inches
Media : Acrylic on Canvas
Size : 36x48 inches
Media : Acrylic on Canvas
Size : 14x20 inches
Media : Watercolor on paper
Size : 14x20 inches
Media : Watercolor on paper
Size : 14x20 inches
Media : Watercolor on paper
Size : 36x48 inches
Media : Acrylic on Canvas
Size : 14x20 inches
Media : Watercolor on paper
Size : 14x20 inches
Media : Watercolor on paper
Size : 14x20 inches
Media : Watercolor on paper
Size : 14x20 inches
Media : Acrylic on paper
Size : 60x48 inches
Media : Acrylic on Canvas
ಕಲಾವಿದ ಗಣೇಶ್ ಬಿ ಸೋಮಯಾಜಿ ಮಂಗಳೂರಿನ ಹಿರಿಯ ಚಿತ್ರ ಕಲಾವಿದರು. ನಿಸರ್ಗ ಚಿತ್ರಣ , ನೈಜ ಚಿತ್ರಣ , ಅರೆ- ನೈಜ ಚಿತ್ರಣಕ್ಕೆ ಒತ್ತು ಕೊಟ್ಟು ರಚಿತವಾಗಿರುವ ಇವರ ಕಲಾಕೃತಿಗಳು ಸಂಭ್ರಮವನ್ನು ತರುವ ಮೂಲಕ ನೋಡುಗರಿಗೆ ಆನಂದ ಮೂಡಿಸುತ್ತದೆ. ಬಣ್ಣಗಳ ಪ್ರಖರತೆ , ನೆರಳು ಬೆಳಕಿನ ವಿನ್ಯಾಸ ಭಾವನೆಗಳನ್ನು ಮೈಗೂಡಿಸಿಕೊಂಡು ಇವರ ಕಲಾಕೃತಿಗಳು ಮೂಡುತ್ತವೆ. ದಕ್ಷಿಣ ಕನ್ನಡದ ವಿವಿಧ ಭಾಗದ ಜನಪದ ಸೊಗಡಿನ ವಿಷಯಾಧಾರಿತ ಚಿತ್ರಣಗಳು ಇವರ ಕಲಾಕೃತಿಗಳಲ್ಲಿ ಕಾಣುತ್ತವೆ. ಜಲ ವರ್ಣ , ತೈಲ ವರ್ಣ ಮತ್ತು ಅಕ್ರಾಲಿಕ್ ಮಾಧ್ಯಮಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ನಾಡಿನ ಸಂಪನ್ಮೂಲ ಕಲಾವಿದರಾಗಿದ್ದಾರೆ.
********************************************
ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ.
ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಬಳ್ಳಾಲ್ ಬಾಗ್ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
Mob : +91 98453 35557
********************************************