
ಸುಮನ ಬರೆದಿರುವ ಕವನಗಳು
Friday, July 1, 2022
Edit
ಮಕ್ಕಳ ಜಗಲಿಯಲ್ಲಿ
ಸುಮನ ಬರೆದಿರುವ
ಕವನಗಳು
ಅಮ್ಮ
-----------
ಜನ್ಮ ನೀಡಿದಳು ಎನಗೆ
ಪ್ರೀತಿ ತೋರಿದ ದೇವತೆ
ಮೊದಲ ಸ್ನೇಹಿತೆ ಇವಳೇ ಎನಗೆ
ಸ್ನೇಹಭಾವ ತುಂಬಿದಳು
ಎನ್ನ ಹೃದಯದೊಳಗೆ
ನನ್ನ ಕಣ್ಣಲ್ಲಿ ಕಣ್ಣೀರು ಬಾರದಂತೆ
ನೋಡಿಕೊಂಡಳಿವಳು ಎನ್ನಮ್ಮ
ನನಗಾಗಿ ಎದುರಿಸಿರುವಳು
ಅದೆಷ್ಟೋ ಕಷ್ಟವಾ
ಒಂಬತ್ತು ತಿಂಗಳು ಹೊತ್ತು ಹೆತ್ತು
ಸಾಕಿದಳು ಎನ್ನಮ್ಮ
ಕಣ್ಣೆದುರು ತೋರಿಸಿದಳು ಸ್ವರ್ಗವ ಎನ್ನಮ್ಮ
ಅಮ್ಮ ಅನ್ನೋ ಪದಕ್ಕೆ
ಮುನ್ನುಡಿಯಾದಳು ನನಗೆ ನನ್ನಮ್ಮ
.............................................. ಸುಮನ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಅಮ್ಮ
-----------
ಪ್ರೀತಿ ಎನ್ನುವ ಪದಕೆ
ಉತ್ತರವಾಗಿ ಬಂದೆ
ನೀ ಅಮ್ಮ
ಧೈರ್ಯ ಅನ್ನೋ ಪದಕೆ
ಅರ್ಥವೇ ನೀ ಅಮ್ಮ
ಕಾಳಜಿ ಅನ್ನೋ ಪದಕೆ
ನೀ ಸಾಕ್ಷಿಯಾದೆ
ನಂಬಿಕೆ ಅನ್ನೋ ಹೆಸರಿಗೆ
ನೀ ಉಸಿರಾಗಿರುವೆ ಅಮ್ಮ
ಇನ್ನೇನು ನಾ ಹೇಳಲಿ ಮಾತೇ
ನೀ ಎನ್ನ ಬಾಳಿಗೆ ಸರ್ವಸ್ವವಾಗಿ
ಬಂದ ದೇವತೆ ನೀನಮ್ಮ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಡುಮಠ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************