-->
ಪ್ರೀತಿಯ ಪುಸ್ತಕ : ಸಂಚಿಕೆ - 13

ಪ್ರೀತಿಯ ಪುಸ್ತಕ : ಸಂಚಿಕೆ - 13

ಪ್ರೀತಿಯ ಪುಸ್ತಕ
ಸಂಚಿಕೆ - 13

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

                                        ಬೇಸಿಗೆ ಮರಗಳ ಸ್ಪರ್ಧೆ
     ಪ್ರೀತಿಯ ಮಕ್ಕಳೇ..... ಬೇಸಿಗೆಯ ಒಂದು ದಿನ. ಸುಡು ಬಿಸಿಲು. ಅಲ್ಲಿ ಒಂದು ಸ್ಪರ್ಧೆ ನಡೆಯುವುದಿತ್ತು. ಸ್ಪರ್ಧೆ ಏನು ಗೊತ್ತಾ? ಸೂರ್ಯನನ್ನು ಯಾವ ಮರ ಅತಿ ಹೆಚ್ಚು ಪ್ರೀತಿಸುತ್ತದೆ ಎಂಬುದನ್ನು ನೋಡುವುದೇ ಸ್ಪರ್ಧೆ. ಪ್ರತಿಯೊಂದು ಗಿಡ ಮರಕ್ಕೂ ಸೂರ್ಯನ ಬಗ್ಗೆ ಗೌರವ, ಆದರೆ, ಅದನ್ನು ತೋರಿಸಿಕೊಡುವುದು ಹೇಗಪ್ಪಾ..? ಸ್ಪರ್ಧೆಯಲ್ಲಿ ಭಾಗವಹಿಸಲು ಎಂತೆಂತಹ ಮರಗಳು ಬಂದವು, ಹೇಗೆ ತಮ್ಮ ಪ್ರೀತಿಯನ್ನು ತೋರಿಸಿಕೊಂಡವು, ಮತ್ತೆ ಕೊನೆಯಲ್ಲಿ ಯಾವ ಮರ ಸ್ಪರ್ಧೆಯಲ್ಲಿ ಗೆದ್ದಿತು, ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಕುತೂಹಲ ಇದ್ದರೆ ಪುಸ್ತಕ ಓದಿ. ದೊಡ್ಡ ದೊಡ್ಡ ಮರಗಳ, ಹೂವಿನ ಗಿಡಗಳ ಚಿತ್ರಗಳನ್ನು ಕಣ್ಣುತುಂಬಾ ನೋಡಿ ಆನಂದಿಸಿ. ಜೊತೆಗೆ ನಿಮಗೆ ಯಾವ ಯಾವ ಮರಗಳ ಪರಿಚಯ ಇದೆ, ಯಾವ ಮರಗಳ ಜೊತೆಗೆ ಸ್ನೇಹ ಬೆಳೆದಿದೆ, ಯಾವ ಯಾವ ಮರಗಳ ಕತೆಗಳು ಗೊತ್ತಿವೆ ನೋಡಿಕೊಳ್ಳಿ. ಅದೊಂದು ದೊಡ್ಡ ಜಗತ್ತು. ಬೆರಗಾಗುವಷ್ಟು ವೈವಿಧ್ಯಗಳಿವೆ.....
ಲೇಖಕರು: ರಾಧಾ ಎಂ. ಕಂಬದಕೋಣೆ 
ಅನುವಾದ: ಬೆ.ಗೋ. ರಮೇಶ್ 
ಚಿತ್ರಗಳು: ಡೀನ್ ಗ್ಯಾಸ್ಪರ್  
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ   
ಬೆಲೆ: ರೂ.11
ಐದು, ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
............................... ವಾಣಿ ಪೆರಿಯೋಡಿ, 
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article