
ರಿಧಾ ಬರೆದಿರುವ ಕವನಗಳು
Friday, July 1, 2022
Edit
ಮಕ್ಕಳ ಜಗಲಿಯಲ್ಲಿ
ರಿಧಾ ಬರೆದಿರುವ
ಕವನಗಳು
ನನ್ನ ಚಿಕ್ಕ ಕುಟುಂಬ
-----------------------
ತಾಯಿಯ ಗರ್ಭದಿ ಜನಿಸಿದೆ ನಾನು
ತಾಯಿಯ ಮಡಿಲಲಿ ಮಲಗಿದೆ ನಾನು
ಜೋ.. ಜೋ. .ಲಾಲಿ ಎನ್ನುತ ಅಮ್ಮ
ಅಕ್ಕರೆಯಿಂದ ನನ್ನ ಮಲಗಿಸುವಳು/ಪ/
ಬಾ ಬಾ ಪುಟ್ಟ ಎನ್ನುತ ಅಪ್ಪ
ಮಮತೆಯಿಂದ ನನ್ನ ಎತ್ತಿಕೊಳ್ಳುವನು
ತಂದೆಯ ತಾಯಿಯ ಪ್ರೀತಿಯಿಂದಲೇ
ಬೆಳೆದೆನು ನಾನಿಂದು
ಅಪ್ಪ ಅಮ್ಮನ ಋಣದಿಂದಲೇ
ಕವಿಯಾದೆನು ನಾನಿಂದು/ಪ/
ದಿನವೂ ಕಥೆಯ ಹೇಳುವಳು ಅಜ್ಜಿ
ತಿನ್ನುತ ಕೇಳುವೆ ನಾನೋಂದು ಬಜ್ಜಿ
ಆಟವಾಡಲು ಬರುವನು ಅಜ್ಜ
ತಿಳಿಸಿಕೊಡುವನು ಸಜ್ಜನರ ಸಂಗ/ಪ/
ಅಮ್ಮನ ನೋಡಿದರೆ ಪ್ರೀತಿಯು ನನಗೆ
ಅಪ್ಪನ ಕಂಡರೆ ಬಲು ಇಷ್ಟವು ನನಗೆ
ತಂಗಿಯು ನಾನು ಆಡುವೆವು
ಚುಕುಬುಕು ರೈಲನು ಓಡಿಸುವೆವು /ಪ/
ಶಾಲೆಗೆ ಬಂದೆನು ಅಪ್ಪನ ಋಣದಿಂದ
ತಾಯಿಯೇ ಮೊದಲ ಗುರುವಾದಳು
ಮನೆಯಿಂದ
ದೇವರಂತೆಯೇ ಬಂದರು ಇವರು
ಪ್ರೀತಿ ಪ್ರೇಮದಿ ಬೆಳೆಸುತಿಹರು ನಮ್ಮನ್ನು /ಪ/
..................................... ರಿಧಾ ಡೋರಳ್ಳಿ
4ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ
*******************************************
ದೇಶದ ಯೋಧರು
--------------------
ಈ ದೇಶದ ಯೋಧರೆ. . .
ದೇಶವನ್ನು ಕಾಪಾಡುವ ವೀರರೇ. .
ದೇಶವ ಕಾಯುತಾ ಇರುವರು
ಶತ್ರುಗಳನ್ನು ನಾಶ ಮಾಡುವರು
ದೇಶದ ಬಾವುಟವ ಗೌರವಿಸುವರು
ಜನಗಣಮನವಾ ಹಾಡುವರು
ಈ ವೀರ ಸೈನಿಕರು. .ಈ ವೀರ ಸೈನಿಕರು/ಪ/
ದೇಶ ಸೈನ್ಯವಾ ಬೆಳೆಸಿ
ದೇಶದ ಗೌರವ ಉಳಿಸಿ
ಗಡಿಯನು ಕಾಯುತಿಹರು
ದೇಶವಾ ರಕ್ಷಿಸುತಿಹರು
ಈ ವೀರ ಸೈನಿಕರು. .ಈ ವೀರ ಸೈನಿಕರು. ./ಪ/
ಭಾರತ ಮಾತೆಯ ಗೌರವಿಸುವರು
ನಿಷ್ಠೆಯಿಂದ ತಮ್ಮ ಕೆಲಸ ಮಾಡುವರು
ಅಪ್ಪ ಅಮ್ಮನ ಮರೆತು ದೇಶವ ಕಾಯುತಿಹರು
ಈ ವೀರ ಸೈನಿಕರು ಈ ವೀರ ಸೈನಿಕರು
ನಮ್ಮಯ ನಾಡಿನ ನಾಯಕರು . ./ಪ/
4ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ
*******************************************