
ಶ್ರಾವ್ಯ ಬರೆದಿರುವ ಕವನ
Friday, July 1, 2022
Edit
ಮಕ್ಕಳ ಜಗಲಿಯಲ್ಲಿ
ಶ್ರಾವ್ಯ ಬರೆದಿರುವ
ಕವನ
ಮನಸ್ಸು
--------------------
ಕೂರದು ಒಂದೆಡೆ
ನಿಲ್ಲದು ಒಂದೆಡೆ
ಸದಾ ಚಂಚಲ ಇದರ ನಡೆ.......
ಕೈಗೂ ನಿಲುಕದ ಯೋಚನೆ ಒಮ್ಮೆ
ನಿರಾಸಕ್ತಿಯುೂ ಕೆಲವೊಮ್ಮೆ
ಅತೀ ಸೂಕ್ಷ್ಮ ಇದರ ಬಗೆ
ಸದಾ ಚಿಂತನೆ ಇದರ ನಡೆ.......
ವಿಚಾರವೊಂದು ಒಳಹೊಕ್ಕರೆ ಸಾಕು
ಧಣಿಸಿ ಬಿಡುವುದು ಇಡೀ ಮನವ
ಸಿಗುವರೆಗೂ ಉತ್ತರ ಒಳಗೊಳಗೆ ಶೋಧ....
ಮಾತಿಗೂ ಮನಸ್ಸಿಗೂ ಅದೇನೋ ನಂಟು
ಬಿಡದು ಅಚ್ಚಿನ ಮಾತಿನ ಅಂಟು
ಒಳಿತೋ? ಕೆಡುಕೋ? ಕೇಳಿದ ಮಾತು
ಪರಿಣಾಮ ಮಾತ್ರ ಭಾರಿ ಜೋರು
ಕೂರದು ಒಂದೆಡೆ
ನಿಲ್ಲಲು ಒಂದೆಡೆ
ಸದಾ ಚಂಚಲ ಇದರ ನಡೆ....
ಸದಾ ಚಿಂತನೆ ಇದರ ಬಗೆ....
ದ್ವಿತೀಯ ಪಿ ಯು ಸಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************