
ಪೂರ್ತಿ ಬರೆದಿರುವ ಕವನಗಳು
Friday, July 1, 2022
Edit
ಮಕ್ಕಳ ಜಗಲಿಯಲ್ಲಿ
ಪೂರ್ತಿ ಬರೆದಿರುವ
ಕವನಗಳು
ನಮ್ಮ ಪ್ರೀತಿಯ ಪುಸ್ತಕ
------------------------
ವಿಭಿನ್ನ ಬೆಡಗಿನ ಅಂದ - ಚಂದದ ಪುಸ್ತಕ..
ಇದರಿಂದ ಸಂಪೂರ್ಣ ತುಂಬಿದೆ
ಎಲ್ಲಾ ಜನರ ಮಸ್ತಕ...
ಪುಸ್ತಕವೆಂಬುದು ಶಾರದಾ
ಮಾತೆಯ ಪ್ರತಿರೂಪ..
ಪುಸ್ತಕವೇ ವಿದ್ಯಾದೇಗುಲದ
ಜ್ಞಾನ ದೀಪ...
ಪುಸ್ತಕವೆಂಬುದು ಅಂಧಕಾರವ
ಹೋಗಲಾಡಿಸುವ ಗೂಟ..
ಪುಸ್ತಕವೇ ಉಜ್ವಲ ಬೆಳಕಿನ ಕಿರೀಟ...
ಪುಸ್ತಕವೇ ವಿದ್ಯಾಲಹರಿ..
ಇದು ಸರ್ವರಿಗೂ ನೀಡುವುದು
ವಿದ್ಯಾಸಿರಿ...
.............................................. ಪೂರ್ತಿ
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಪ್ರೀತಿಯ ದೇವತೆ ಅಮ್ಮ
--------------------------------
ಈ ಜಗದಲ್ಲಿ ಶ್ರೇಷ್ಠವಾದವರು ಅಮ್ಮ.
ಯಾಕೆಂದರೆ , ಅವರಿಂದಲೇ
ದೊರಕಿದೆ ನಮಗೆ ಈ ಜನ್ಮ.
ಗರ್ಭದಲಿ ಹೊತ್ತ ಮಾತೆ ನೀ..
ಮಮತೆಯಲ್ಲಿ ಮಮಕರಿಸಿದ
ಪ್ರೀತಿಯ ದೇವತೆ ನೀ...
ಪ್ರೀತಿ - ವಾತ್ಸಲ್ಯ ಗಳ ಪ್ರತಿರೂಪ ನೀ..
ಸ್ನೇಹ - ಸೌಹಾರ್ದತೆಯ ಸಮರೂಪ ನೀ...
ಪ್ರೀತಿಯ ಕಡಲ ನಮಗೆ ಹರಿಸಿದ
ಕರುಣೆದಾತೆ ನೀ..
ನೋವಿನ ಸುರಿಮಳೆ ತಾನೇ ಸಹಿಸಿದ
ಉದಾರ ಮನಸ್ಸಿನ ಜನ್ಮದಾತೆ ನೀ...
.............................................. ಪೂರ್ತಿ
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಹಚ್ಚ ಹಸುರಿನ ಗಿಡ - ಮರಗಳು
-----------------------------------
ಗಿಳಿಯ ಪಚ್ಚೆಯ ಗಿಡ - ಮರಗಳು..
ನೀವು ಎಲ್ಲರಿಗೂ ನೀಡಿದಿರಿ
ತಂಪಾದ ನೆರಳು...
ಕಲ್ಮಶವಿಲ್ಲದ ನಿಮ್ಮ ಮನಸ್ಸು..
ಕಿರಿ - ಹಿರಿಯರಿಗೆಲ್ಲರಿಗೂ ಕೊಡುವಿರಿ
ಹಣ್ಣು - ಹಂಪಲುಗಳೆಂಬ ತಿನಿಸು...
ನಿಮ್ಮ ನೋವುಗಳ ಮರೆತು ನಮಗೆ
ನೀಡುವಿರಿ ಸ್ವಚ್ಛ್ರಂದ ಗಾಳಿ..
ವಿಶ್ವ ಪರಿಸರ ದಿನದಂದು ಸುತ್ತಲೂ ಹಚ್ಚ ಹಸುರಿನ ಸಸಿ -ಗಿಡಗಳ ರಂಗಿನ ಹೋಳಿ...
ಪ್ರಕೃತಿಯಲ್ಲಿ ನಿಮ್ಮ ಸೌಂದರ್ಯದ ಕಣಜ..
ಅದರ ಸೌಂದರ್ಯವ ಸವಿಯಲು
ಅಸೂಯೆ ಪಡುವ ಮನುಜ...
ಹಚ್ಚ - ಹಸುರಿನ ಗಿಡ - ಮರ..
ಮನುಜನು ಮಾಡುವನು ನಿಮ್ಮ ಸಮರ...
ಮನುಜರಿಗೆ ಒಳಿತು ಬುದ್ದಿಯ ನೀಡು ದೇವಾ..
ಕೆಡುಕು ಮನುಜರ ಶಿಕ್ಷಿಸು ಮಹಾದೇವ...
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************