
ಶಿಫಾನ ಬರೆದಿರುವ ಕವನಗಳು
Friday, July 1, 2022
Edit
ಮಕ್ಕಳ ಜಗಲಿಯಲ್ಲಿ
ಶಿಫಾನ ಬರೆದಿರುವ
ಕವನಗಳು
ಜ್ಞಾನದ ಜ್ಯೋತಿ - ಕವನ
-----------------------
ಅಕ್ಷರ ವಿದ್ದರೆ ಸುತ್ತಲೂ
ಇರುವುದಿಲ್ಲ ಕತ್ತಲು
ಅಕ್ಷರ ಬಲ್ಲವ ಪಡೆದನು ಎಲ್ಲವ
ಕಲಿತರೆ ವಿದ್ಯಾ ನೀವು
ನಿಮಗಿಲ್ಲ ಯಾವ ನೋವು
ಶಿಕ್ಷಣದಿಂದ ಜೀವನ ಚಂದಾಕಾರ
ತೊಲಗಲಿ ಅಂಧಾಕಾರ
ಶಾಲೆಯೆಂದರೆ ಗುರು
ಜ್ಞಾನದ ಪಾಠ ಶುರು
ಶಿಕ್ಷಣದ ಒಂದು ಅರ್ಥ
ಕಳೆದುಕೊಂಡರೆ ವ್ಯರ್ಥ
ಕಲಿಯುವ ನಿನ್ನ ಆಸಕ್ತಿ
ಅದುವೇ ಶಿಕ್ಷಣದ ಶಕ್ತಿ
ಹಿಡಿದರೆ ವಿದ್ಯೆಯ ದಾರಿ
ಗೆಲ್ಲುವೆ ಸೋಲನ್ನು ಮೀರಿ
ಅಕ್ಷರಗಳ ಮುತ್ತು
ಬರೆದರೆ ನಾಳೆಗೆ ತುತ್ತು
ನಮ್ಮಲ್ಲಿದ್ದರೆ ಉತ್ಸಾಹ
ಸಿಗುವುದೆಲ್ಲರ ಪ್ರೋತ್ಸಾಹ
ತಂದೆ ಆಡಿದ ಒಳ್ಳೆಯ ಮಾತು
ತಾಯಿ ಕೊಡುವ ಕೈತುತ್ತು
ಸೋಲಿನ ಪಾಠ ಚಂದ
ಹಸಿವಿನ ಊಟ ಅಂದ
ಮಗುವಿಗೆ ಬೇಕು ಕಲಿಕೆಯ ಪ್ರೀತಿ
ಬೆಳಗಲಿ ನಿತ್ಯ ಜ್ಞಾನದ ಜ್ಯೋತಿ
ಹತ್ತನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************