-->
ಚಿಟಾಣಿ ಚಿಟ್ಟೆ (ಕವನ ಸಂಕಲನ) : ದಿಯಾ ಉದಯ್ ಡಿ ಯು

ಚಿಟಾಣಿ ಚಿಟ್ಟೆ (ಕವನ ಸಂಕಲನ) : ದಿಯಾ ಉದಯ್ ಡಿ ಯು

ದಿಯಾ ಉದಯ್ ಡಿ ಯು
4ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ, ಮುಲ್ಕಿ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

ಇವರು ಬರೆದಿರುವ
ಚಿಟಾಣಿ ಚಿಟ್ಟೆ
ಕವನ ಸಂಕಲನದಿಂದ  
32 ಕವನಗಳು ಇಲ್ಲಿವೆ.....


        ಪದ ಬಂಡಿ
         -----------
ಗರಗಸದ ಹರಿತ
ಅರಸನ ರಥ
    ಆಗಸದ ಹಿತ
    ಆತನ ಮತ
ಊರಿನ ಪಥ
ಅವಳ ಕವಿತ
    ಮನದ ತುಡಿತ
    ನವಿಲಿನ ಕುಣಿತ
******************************************


             ಪದಗಳ ಆಟ
              -----------
ದಸರದ ಸಡಗರ
ಆಲದ ಒಣಮರ
     ಬಳಪದ ಅಕ್ಷರ
     ಗರಗಸದ ಗರಗರ
ವಚನದ ವರ
ನಯನದ ಕಿರಣ
******************************************


           ಪದಗಳ ಆಟ
              -----------
ಅಕ್ಷರದ ಪಟ
ಅರಸನ ಭಟ
    ಅವರ ಓಟ
    ಮಗುವಿನ ಹಟ
ಮಗನ ಊಟ
ಗೆಳೆಯರ ಆಟ
******************************************


            ಪದಗಳ ಆಟ
                -----------
ಸರಸರ ಗರಗಸ
ದಸರದ ಅರಸ
ಅವಳ ಕಸ
     ಆಗಸದ ಕನಸ
     ಊಟದ ಮನಸ
     ಅಗಲದ ಕಳಸ
******************************************


          ಪದಗಳ ಆಟ
             -----------
ಅರಸನ ಊಟ
ಆತನ ಆಟ
       ಈಶನ ಪಟ
       ಆತನ ಘಟ
ತನಯನ ಓಟ
ಕದದ ಕಟಕಟ
     ಎಡಬಲ ತಟ-ಪಟ
     ಪದಗಳ ವಟ ವಟ
******************************************

                 ಬೇಕು
               -----------
ನನ್ನ ಅಮ್ಮ ನನ್ನ ಅಮ್ಮ
ತರಲೆ ನನ್ನ ಕೆಲಸ 
      ಊಟ ಬೇಡ ಪಾಠ ಬೇಡ
      ಆಟ ನನಗೆ ಬೇಕು
ತಿಂಡಿ ಎಲ್ಲಾ ನನಗೆ ಬೇಕು
ಬಯಲಲಿ ನೆಗೆಯ ಬೇಕು
     ಶಾಲೆ ಸಾಕು ಆಟ ಬೇಕು
     ಹೊರಗಡೆ ಓಡ ಬೇಕು.
******************************************

          ಸಕಲವು ನಮಗೆ...
         ----------------------
ಹಸಿರ ಪರಿಸರ
ಉಸಿರ ಗಾಳಿ
ಕುಡಿವ ಜಲ
ಊಟದ ತರಕಾರಿ
ನೆಲದ ಬೆಳೆ
ಈಶನ ಕರುಣೆ
ಸಕಲವು ನಮಗೆ...
******************************************

         ಸರ
      -----------
ಅವಳ ಸರ
ತರತರದ ಸರ
    ಹವಳದ ಸರ
    ಛಲದ ಸರ
ದಸರದ ಸರ
ನಗರದ ಸರ
    ಅಂದದ ಸರ
    ಅಗಲದ ಸರ
ಮಗಳ ಸರ
ಬಲದ ಸರ
    ಅವಳ ಸರ
    ಲಕಲಕದ ಸರ
ಅಂದದ ಸರ
ಚಂದದ ಸರ
******************************************

           ನಾಯಿಮರಿ
            -----------
ನಾಯಿಮರಿ ನಾಯಿಮರಿ
ನನ್ನ ಜೊತೆಗೆ ಆಡ ಬಾ
     ಕಾಫಿ ಕೊಡುವೆ ತಿಂಡಿ ಕೊಡುವೆ
     ನನ್ನ ಜೊತೆಗೆ ಆಡ ಬಾ
ಕಪ್ಪು ಬಿಳಿಯು ನಿನ್ನ ಬಣ್ಣ 
ನನಗಿಂತ ನೀನು ಸಣ್ಣ
ನನ್ನ ಜೊತೆಗೆ ಆಡ ಬಾ
     ಹಾಲು ಮೊಸರು ಬೆಣ್ಣೆ ಕೊಡುವೆ
     ನನ್ನ ಜೊತೆಗೆ ಆಡ ಬಾ
ನನ್ನ ಗೊಂಬೆ ನಿನಗೆ ಕೊಡುವೆ
ನನ್ನ ಜೊತೆಗೆ ಆಡ ಬಾ
    ಅಮ್ಮ ತಂದ ಸ್ವೀಟು ಕೊಡುವೆ
    ನನ್ನ ಜೊತೆಗೆ ಆಡ ಬಾ..
******************************************

                   ಚಳಿ
               -----------
ಅಮ್ಮ ಅಮ್ಮ ಚಳಿ ಚಳಿ
ಅಜ್ಜಿ ಅಜ್ಜಿ ಚಳಿ ಚಳಿ
ಕಂಬಳಿ ಬೇಕು ಬಳಿ ಬಳಿ
ಓಡುತ ಬಂತು ಗಿಳಿ ಗಿಳಿ
ನನಗೆ ಬೇಕು ಚಕ್ಕುಲಿ
ಹಾಡುತ ಕುಣಿಯುತ ನಲಿ ನಲಿ
ಓಡುವುದು ಆಗ ಚಳಿ..
******************************************

              ಹಕ್ಕಿಗಳು
          ------------------
ಹಕ್ಕಿಗಳು ಹಕ್ಕಿಗಳು
ಅಂದದ ಹಕ್ಕಿಗಳು
     ಹಾಡಲು ಬೇಕು ಕೋಗಿಲೆ
     ಆಡಲು ಬೇಕು ಗಿಳಿ
ಹಾರಲು ಬೇಕು ಗಿಡುಗ
ಸೇವೆಗೆ ಬೇಕು ಕಾಗೆ
    ಕುಣಿಯಲು ಬೇಕು ನವಿಲು
    ಸಾಕಲು ಬೇಕು ಪಾರಿವಾಳ
ಬದುಕಲು ಬೇಕು ಗುಬ್ಬಿ
ಈಜಲು ಬೇಕು ಬಾತು
ತಿನ್ನಲು ಬೇಕು ಕೋಳಿ.
     ಹಕ್ಕಿಗಳು ಹಕ್ಕಿಗಳು
     ಅಂದ ಚಂದದ ಹಕ್ಕಿಗಳು..
******************************************

           ಅಮ್ಮ
          -----------
ನನ್ನ ಮುದ್ದು ಅಮ್ಮ
ನನ್ನ ಪ್ರೀತಿ ಅಮ್ಮ
    ನಮ್ಮ ಹೆತ್ತ ಅಮ್ಮ
    ನಮ್ಮ ಹೊತ್ತ ಅಮ್ಮ
ಹಾಲು ಕೊಟ್ಟ ಅಮ್ಮ
ಊಟ ಕೊಡುವ ಅಮ್ಮ
     ಮೊದಲ ಗುರು ಅಮ್ಮ
     ನಮ್ಮ ದೇವರು ಅಮ್ಮ...
******************************************

              ಅಜ್ಜಿ
            -----------
ಕಥೆಯನು ಹೇಳುವ ಅಜ್ಜಿ
ಪದವನು ಹಾಡುವ ಅಜ್ಜಿ
    ಕೋಲನು ಹಿಡಿದು ಸೊಂಟವ ಬಗ್ಗಿಸಿ
    ಬಾಗುತ ನಡೆಯುವ ಅಜ್ಜಿ
ಕೋಳಿಯ ಸಾಕುವ ಅಜ್ಜಿ
ಮದ್ದನು ಕೊಡುವ ಅಜ್ಜಿ
    ಸ್ನಾನವ ಮಾಡಿಸುವ ಅಜ್ಜಿ
    ಊಟವ ತಿನಿಸುವ ಅಜ್ಜಿ
ನಾಯಿಯ ಸಾಕುವ ಅಜ್ಜಿ
ಬೆಕ್ಕನು ಸಾಕುವ ಅಜ್ಜಿ
     ಬಹಳ ಒಳ್ಳೆಯ ಅಜ್ಜಿ
     ನಮ್ಮನು ಪ್ರೀತಿಸುವ ಅಜ್ಜಿ..
ನನ್ನ ಮುದ್ದಿನ ಅಜ್ಜಿ
ನನ್ನ ಪ್ರೀತಿಯ ಅಜ್ಜಿ..
******************************************

              ಅಜ್ಜ
           -----------
ಅಜ್ಜನಿಗೆ ಮಕ್ಕಳೆಂದರೆ
ಬಹಳ ಇಷ್ಟವಂತೆ
ಅಜ್ಜನೊಡಲು ಆಡಲು
ಮಕ್ಕಳು ಬೇಕಂತೆ
     ಅಜ್ಜ ಮಕ್ಕಳನ್ನು ಕರೆದುಕೊಂಡು
     ಅಂಗಡಿಗೆ ಹೋಗಿ
     ತಿಂಡಿ ತೆಗೆದುಕೊಟ್ಟು
     ಚಾಕಲೇಟ್ ರಾಶಿ ರಾಶಿ
     ತೆಗೆದು ಕೊಡುವರಂತೆ
ಭುಜದ ಮೇಲೆ ಕೂರಿಸಿ
ಆಟ ಆಡಿಸುವರಂತೆ
ನೀರಿನಲ್ಲಿ ಕರೆದುಕೊಂಡು ಹೋಗಿ
ಈಜು ಕಲಿಸುವರಂತೆ
      ಬ್ಯಾಟು ಹಿಡಿದು ಆಟ ಆಡಿ
      ಕ್ರಿಕೆಟ್ ಕಲಿಸುವರಂತೆ
      ಮೋಡಿ ಮಾಡಿ ಹಾಡು ಹೇಳಿ
      ನಕ್ಕು ನಗಿಸುವರಂತೆ..
******************************************


                ಎಲೆ
            -----------
ಎಲೆಯೇ ನೀನು ಹಸಿರು ಇರುವೆ
ಮರದ ಮೇಲೆ ಕುಳಿತಿರುವೆ
     ಗಿಡದಲ್ಲೂ ಮಲಗಿರುವೆ
     ಗಾಳಿಯನ್ನು ನಮಗೆ ಕೊಡುವೆ
ನಿನ್ನ ನಾನು ತಿನ್ನುವೆ
ನಿನ್ನ ನಡುವೆ ಹೂಗಳು ಇವೆ
     ಕೆಲವು ಕಡೆ ಮುಳ್ಳುಗಳು ಇವೆ
     ನಿನ್ನ ನೋಡಿ ಖುಷಿ ಪಡುವೆ
ಎಲೆಯೇ ನೀನು ಹಸಿರು ಇರುವೆ..
ನಮಗೆ ನೀನು ಗಾಳಿಯ ಕೊಡುವೆ..
******************************************


              ಕಣ್ಣು
            -----------
ಕಪ್ಪು ಬಿಳಿಯ ಬಣ್ಣ ಕಣ್ಣು
ಅತ್ತ ಇತ್ತ ನೋಡೋ ಕಣ್ಣು
     ಚಕ್ರದಂತೆ ಇರುವ ಕಣ್ಣು
     ದೀಪದಂತೆ ಹೊಳೆವ ಕಣ್ಣು
ಬಣ್ಣಗಳ ಹೇಳೊ ಕಣ್ಣು
ಸಣ್ಣದಾದ ಮುದ್ದು ಕಣ್ಣು
     ನೋವಾದರೆ ಕೂಗೋ ಕಣ್ಣು
     ನಗುವಿನಲ್ಲು ಕಣ್ಣೀರು ಸುರಿಸೋ ಕಣ್ಣು
ಮುಖದ ಒಂದು ಭಾಗ ಕಣ್ಣು
ನಮಗೂ ನಿಮಗೂ ಬೇಕು ಕಣ್ಣು
     ಕನ್ನಡಕವನ್ನು ಕೇಳುವ ಕಣ್ಣು
     ಕಣ್ಣಿನ ಮೇಲೆ ಇರಲಿ ಒಂದು ಕಣ್ಣು..
******************************************


            ಹುಡುಗಿ
             -----------
ನನ್ನ ಪ್ರೀತಿಯ ಹುಡುಗಿ
ಅವಳೇ ನನ್ನ ಗೆಳತಿ
      ಅವಳ ಮಾತು ಚಂದ
       ಅವಳ ನಡೆಯು ಅಂದ
ಅವಳ ಕಣ್ಣು ಗೋಲಿ ಹಾಗೆ
ಅವಳ ಜುಟ್ಟು ಕೊಂಬಿನಂತೆ
       ದುಂಡು ಮುಖದ ಚೆಲುವೆ
       ಅವಳ ಆನಂದ ನನಗೆ ಅಂದ
ನನ್ನ ಮುದ್ದು ಎಂದೂ ಅವಳು
ನನ್ನ ಜೊತೆಗೆ ಅವಳು..
       ಅವಳ ಜೊತೆಗೆ ನಾನು
       ಈಜುವಂಥ ಮೀನು!!!
******************************************                 ಶಿಕ್ಷಕರು
                -----------
ಎಲ್ಲಾ ಶಿಕ್ಷಕರೆಂದರೆ ಅಚ್ಚುಮೆಚ್ಚು
ನಮ್ಮ ಪ್ರೀತಿಯ ಬೆಲ್ಲದ ಅಚ್ಚು!
      ಓದಲು ಬರೆಯಲು ಹೇಳಿ ಕೊಡುವರು
      ತಪ್ಪಿದರೆ ಮತ್ತೆ ತಿದ್ದಿ ಹೇಳುವರು.
ಅಮ್ಮನ ಹಾಗೆ ಗುರುಗಳೂ ಕೂಡಾ,
ಬುದ್ಧಿಯ ಕಲಿಸುವರು ನಮಗೆ ನೋಡಾ!
    ಕನ್ನಡ, ಗಣಿತ, ಇಂಗ್ಲಿಷ್, ಪರಿಸರ
    ಆಟೋಟ ಪಾಠ ನೀತಿ ಕತೆಯ ಸಾರ!
ಗುರುಗಳು ಎಂದರೆ ಗೌರವ ಅಪಾರ
ಹತ್ತಿರ ಬರಲು ಓಡುವೆವು ದೂರ..
******************************************


             ನಮ್ಮ ಶಾಲೆ
               -----------
ನಮ್ಮ ಶಾಲೆ ರೋಟರಿ ಶಾಲೆ
ಸುಳ್ಯದಲಿ ಇರುವುದು ನಮ್ಮ ಶಾಲೆ
     ಆಟವೂ ಇರುವ ಪಾಠವೂ ಇರುವ
     ಅಂದದ ಶಾಲೆ ನಮ್ಮ ಶಾಲೆ
ಸಂಗೀತ, ಕರಾಟೆ,ಚಿತ್ರಕಲೆ
ಎಲ್ಲವೂ ಕಲಿಸುವ ನಮ್ಮ ಶಾಲೆ
     ನಮ್ಮ ಶಾಲೆ ನಮಗೆ ಇಷ್ಟ
     ಬಿಟ್ಟು ಇರುವುದು ಬಹಳ ಕಷ್ಟ
ಆಟ ಪಾಠ ಎಲ್ಲವೂ ಖುಷಿ
ಕಲಿಯದೆ ಇದ್ದರೆ ಬದುಕು ಮಸಿ
    ಸ್ಕೂಲ್ ಬಸ್ಸಲ್ಲಿ ಹೋಗುವ ಸಂತಸ
    ಗೆಳೆಯರ ಕೂಡಿ ಆಡಲು ಸಂತಸ
ಆದಿತ್ಯವಾರ ಶಾಲೆಗೆ ರಜಾ
ಮನೆಯಲೆ ಇದ್ದು ಕುಣಿಯಲು ಮಜಾ
     ಓದಲು ಬರೆಯಲು ಪುಸ್ತಕ ಉಂಟು
     ಕಾರ್ಟೂನ್ ನೋಡಲು ಟಿವಿ ಉಂಟು
ಆಗಾಗ ಕಂಪ್ಯೂಟರ್ ಕಲಿಯಲು ಓಡುವೆವು
ಸಮವಸ್ತ್ರವನು ಧರಿಸಿ ಶಾಲೆಗೆ ಬರುವೆವು
     ವ್ಯಾಯಮ ಮಾಡಲು ಒಟ್ಟಿಗೆ ನಿಲ್ಲುವೆವು
     ಪ್ರಾರ್ಥನೆ ಹಾಡಿ ಖುಷಿಯನು ಪಡೆವೆವು
ನಮ್ಮ ಶಾಲೆ ನಮಗೆ ಇಷ್ಟ
ಬಿಟ್ಟು ಇರುವುದು ಬಹಳ ಕಷ್ಟ
******************************************


                 ಚುಟುಕು
                 -----------
ಚಿಟ್ಟೆಯ ಬಟ್ಟೆಯು ನನಗೆ ಇಷ್ಟ
ಅದನ್ನು ಹಿಡಿಯಲು ಬಹಳ ಕಷ್ಟ
ಓದುವ ಚಿಟ್ಟೆಯ ಹಿಡಿದು ಬಿಟ್ಟೆ
ಕಚ್ಚುವುದೆಂದು ನಾ ಬಿಟ್ಟು ಬಿಟ್ಟೆ..
******************************************


                 ಗೆಳತಿಯರು
                    -----------
ನನ್ನ ಗೆಳತಿಯರು ಮಾಳು ಮತ್ತು ಮಾನ್ವಿ
ಮಿತಾಲಿ, ಶಿಶಿರ, ಪೂಜಿತ ಎಲ್ಲರ ಗುಂಪು ಸವಿ!
     ಆಟವೂ ಒಟ್ಟಿಗೆ, ಊಟವೂ ಒಟ್ಟಿಗೆ
     ಕೆಲವು ಸಲ ಜಗಳ ಅವರ ಒಟ್ಟಿಗೆ!
ವರುಷ ಕಳೆಯಿತು ದೂರಾಗಿ ಕೊರೋನದಿಂದ
ಮತ್ತೆ ಸೇರಿದೆವು ಒಂದಾಗಿ ಸಂತಸದಿಂದ!
     ಆಡುತ್ತಾ ಕುಣಿಯುತ್ತಾ ನಲಿಯುತ್ತಾ
     ಓಡುತ್ತಾ ಓದುತ್ತಾ ಬರೆಯುತ್ತಾ!
ಜೊತೆ ಜೊತೆಯಲಿ ಒಂದೇ ತರಗತಿಯಲಿ
ಇನ್ನೂ ಕೆಲವರು ನಮ್ಮ ಹಿಂದು ಮುಂದಿನಲಿ!
     ನನ್ನ ಗೆಳತಿಯರು ನನಗೆ ಮುದ್ದು
     ನನ್ನ ಅಮ್ಮನಿಗೆ ನಾನು ಮುದ್ದು..!
******************************************               ಕನ್ನಡ
             -----------
ಹಲವು ಭಾಷೆ ಇದ್ದರೂ
ಉಪಯೋಗಿಸುವ ಭಾಷೆ ಕನ್ನಡ!
ಹಲವು ನುಡಿಗಳು ಇದ್ದರೂ
ಮಾತಾಡುವ ಭಾಷೆ ಕನ್ನಡ!
     ಕೆಲವು ಭಾಷೆ ಕಲಿತರೂ
     ಬರೆಯುವ ಭಾಷೆ ಕನ್ನಡ
     ಹಲವು ಊರು ಸುತ್ತಿದರೂ
     ಬದುಕುವ ನಾಡು ಕರ್ನಾಟಕ
ಹಲವು ರಾಗ ಕಲಿತರೂ
ಹಾಡುವ ಹಾಡು ಕನ್ನಡ
ಹಲವು ಊರು ನೋಡಿದರೂ
ಇಷ್ಟದ ರಾಜ್ಯ ಕರ್ನಾಟಕ..
******************************************
         

                ಪುಸ್ತಕ
               -----------
ಓದುವ ಪುಸ್ತಕ ಬರೆಯುವ ಪುಸ್ತಕ
ದೊಡ್ಡ ಪುಸ್ತಕ ಚಿಕ್ಕ ಪುಸ್ತಕ
       ಮಗ್ಗಿ ಪುಸ್ತಕ ಚಿತ್ರ ಪುಸ್ತಕ
       ಕಾಪಿ ಪುಸ್ತಕ ನೋಟ್ ಪುಸ್ತಕ
ಖಾಲಿ ಪುಸ್ತಕ ಗೆರೆ ಪುಸ್ತಕ
ಓದಲು ಬೇಕು ಕಥೆಯ ಪುಸ್ತಕ
      ಬ್ಯಾಂಕಿನ ಖಾತೆಯ ಸಣ್ಣ ಪುಸ್ತಕ
      ಚಿಕ್ಕದಾದರೂ ದುಡ್ಡು ಇರುವ ಪುಸ್ತಕ
ಬೇರೆಯವರಿಗೆ ಕೊಡಲು ಆಗದ ಪುಸ್ತಕ
ನಮಗೂ ನಿಮಗೂ ಬೇಕು ಪುಸ್ತಕ..
******************************************

          

         ಪೆನ್ಸಿಲ್ ಮಾಮ
        ---------------------
ಪೆನ್ಸಿಲ್ ಮಾಮಾ ಪೆನ್ಸಿಲ್ ಮಾಮಾ 
ಬರೆಯಲು ನೀನೇ ಬೇಕು
ಬರೆಯುವಾಗ ನೀ ತಪ್ಪಿದರೆ
ಅಳಿಸಲು ರಬ್ಬರ್ ಬರಬೇಕು
    ಮೆಂಡರ್ ಬಂದರೆ ಚೂಪಾಗುವೆ ನೀ
    ದಿನ ದಿನವೂ ಚಿಕ್ಕವನಾಗುವೆ
    ಊಟ ನೀರು ನಿನಗೆ ಬೇಡ
    ತಿನ್ನುತ ತಿನ್ನುತ ನಾ ಬೆಳೆಯುವೆ
ಪುಸ್ತಕದ ಮೇಲೆ ನೀನು ಕುಣಿಯುವೆ
ಅಂದದ ಚಿತ್ರವ ನೀನು ಬರೆಯುವೆ
ಶೇಡಿಂಗ್ ಕೊಡಲು ಓಡಿ ಬರುವೆ
ಬರೆಯಲು ನಮಗೆ ಸಹಾಯ ಮಾಡುವೆ..
******************************************


                  ಊಟ
                 ----------
ಎಲ್ಲರಿಗೂ ಬೇಕು ರುಚಿಯಾದ ಊಟ
ಊಟವಿಲ್ಲದೆ ನಾವಿಲ್ಲ..
ಊಟವೆ ನಮಗೆಲ್ಲ..
ಇದುವೇ ಶಕ್ತಿಯು ಜಗಕೆಲ್ಲ..
     ಉಪ್ಪು ಹುಳಿ ಖಾರ ಸಿಹಿ
     ಎಲ್ಲವೂ ಸೇರಲು ಊಟ ಸವಿ
     ಆಗಿದು ಅಗಿದು ತಿನ್ನುವೆವು
     ಚಾಕಲೇಟನ್ನು ಚೀಪುವೆವು...
ಹೊಟ್ಟೆಯು ಸಾಕು ಎನ್ನುವವರೆಗೆ
ಹಣ್ಣು ತರಕಾರಿ ಕಾಯಿ ಪಲ್ಯ
ಹಾಲು ಮೀನು ಮಾಂಸ ಮೊಟ್ಟೆ
ಎಲ್ಲವ ತಿಂದು ನಾ ಬೆಳೆದು ಬಿಟ್ಟೆ
     ಪ್ರಾಣಿ ಪಕ್ಷಿಗಳಿಗೂ ಬೇಕು
     ಗಿಡ ಮರ ಜೀವಿಗಳಿಗೂ ಬೇಕು
     ಹಸಿವೆಯು ಕಡಿಮೆ ಆಗ ಬೇಕು
     ಲೇಸು ಚಿಪ್ಸ್ ಕಡಿಮೆ ತಿನ್ನಬೇಕು
     ಅಮ್ಮ ಮಾಡಿದ ಅಡಿಗೆ ಮೆಚ್ಚ ಬೇಕು..
******************************************


                     ಕೈ
                  ----------
ಬರೆಯಲು ಬೇಕು ಕೈ
ಊಟವ ಮಾಡಲು ಬೇಕು ಕೈ
ಸ್ನಾನ ಮಾಡಲು ಬೇಕು ಕೈ
ಆಟ ಆಡಲು ಬೇಕು ಕೈ
     ಮಗುವನ್ನು ಹಿಡಿಯಲು ಬೇಕು ಕೈ
     ಪೂಜೆಯ ಮಾಡಲು ಬೇಕು ಕೈ
     ದೇವರ ಬೇಡಲು ಬೇಕು ಕೈ
     ಫೋನನು ಹಿಡಿಯಲು ಬೇಕು ಕೈ
ಕಸವನು ಗುಡಿಸಲು ಬೇಕು ಕೈ
ಪೆನ್ನು ಪೆನ್ಸಿಲ್ ಹಿಡಿಯಲು ಬೇಕು ಕೈ
ಕೆಲಸ ಮಾಡಲು ಬೇಕು ಕೈ
ಕಣ್ಣೀರು ಒರೆಸಲು ಬೇಕು ಕೈ
     ಸಹಾಯ ಮಾಡಲು ಬೇಕು ಕೈ
     ಚೆಂಡಲಿ ಆಡಲು ಬೇಕು ಕೈ
     ಚೀಲವ ಹಿಡಿಯಲು ಬೇಕು ಕೈ
     ನಮಗೂ ನಿಮಗೂ ಬೇಕು ಕೈ..
******************************************


                   ಕನ್ನಡಕ
                   -----------
ಅಮ್ಮನ ಕನ್ನಡಕ ಕಳೆದೇ ಹೋಗುವುದು
ಎಷ್ಟು ಹುಡುಕಿದರೂ ಸಿಗದೇ ಇರುವುದು
ಯಾವಾಗಲೂ ಅಡಗಿ ಕುಳಿತುಕೊಳ್ಳುವುದು
ಆಗಾಗ ಹುಡುಕಿ ಸುಸ್ತಾಗುವುದು
      ನೀಲಿ ಬಣ್ಣದಲ್ಲಿ ಇರುವುದು
      ಓದಲು ಸಹಾಯ ಮಾಡುವುದು
      ಕಿವಿಯಲಿ ಹತ್ತಿ ಕುಳಿತಿರುವುದು
      ಮೂಗಿನ ಮೇಲೆ ನಿಂತಿರುವುದು
ನಾನೂ ಅದರ ಹಾಗೆ ಇರುವೆನು
ಅಮ್ಮನಿಗೆ ಯಾವಾಗಲೂ ಸಹಾಯ ಮಾಡುವೆನು..
******************************************


          ಜೋಕಾಲಿ
           -----------
ನನ್ನಯ ಮೆಚ್ಚಿನ ಜೋಕಾಲಿ
ಅಮ್ಮನ ಸೀರೆಯ ಜೋಕಾಲಿ
ಆಚೆಗೂ ಈಚೆಗೂ ತೂಗುವುದು
ನನಗೆ ಖುಷಿಯನು ನೀಡುವುದು
     ಮನೆಯೊಳಗೆ ಅದನ್ನು ಕಟ್ಟಿರುವುದು
     ಗೆಳೆಯರ ಜೊತೆಗೆ ಆಡುವುದು
     ಎಲ್ಲರೂ ಸೇರಿ ಜೀಕುವುದು
     ಸೀರೆ ತುಂಡಾದರೆ ಬೀಳುವುದು
ಮತ್ತೆ ಹೊಸ ಸೀರೆ ಕಟ್ಟುವುದು
ಅಮ್ಮ ನಮಗೆ ಗದರುವುದು
ಜೋಕಾಲಿ ಆಟ ಇಷ್ಟದ ಆಟ
ಮಕ್ಕಳಿಗೆಲ್ಲ ಬೇಕಾದ ಆಟ..
******************************************
           

              ಚಿಟಾಣಿ ಚಿಟ್ಟೆ
            ----------------------
ಚಿಟಾಣಿ ಚಿಟ್ಟೆ ಚಿಟಾಣಿ ಚಿಟ್ಟೆ
ಓಡುತ ಎಲ್ಲಿಗೆ ಹೊರಟಿರುವೆ
     ಬಣ್ಣದ ಬಣ್ಣದ ಅಂಗಿಯ ತೊಟ್ಟು
     ಹೂವಿಂದ ಹೂವಿಗೆ ಹಾರುತ ಇರುವೆ
ಬಾ ಬಾ ಇಲ್ಲಿಗೆ ಒಟ್ಟಿಗೆ ಆಡುವ
ನಿನ್ನಯ ಹಾಡನು ನನಗೂ ಕಲಿಸು
      ಬಿಸಿಲಲೂ ಮಳೆಯಲೂ ಹಾರುವೆ ನೀನು
      ರಾತ್ರಿ ಎಲ್ಲಿಗೆ ಹೋಗುವೆ ನೀನು?
ಅಮ್ಮನು ಮಾಡಿದ ತಿಂಡಿಯ ಕೊಡುವೆನು
ಓಡುತಾ ಬಾ ಬಾ ಚಿಟಾಣಿ ಚಿಟ್ಟೆ
      ಹಾಲು ಹಣ್ಣು ಚಕ್ಕುಲಿ ಕೊಡುವೆನು
      ಆಟದ ಸಾಮಾನು ನಿನಗೇ ಇಡುವೆನು
ಇಬ್ಬರೂ ಸೇರಿ ಆಡುವ ಬಾ ಬಾ
ಬೇಗನೆ ಓಡುತ ಇಲ್ಲಿಗೆ ಬಾ ಬಾ
******************************************        ಅರಳುತ್ತಿರುವ ಪ್ರೇಮದ ಮಲ್ಲಿಗೆ
      -------------------------------------------
ಅರಳುತ್ತಿರುವ ಪ್ರೇಮದ ಮಲ್ಲಿಗೆಯೆ
ನೀ ಎಂದೆಂದೂ ಪರಿಮಳ ಬೀರುತ್ತಿರು
     ಸೂರ್ಯ ಬರುವಾಗ ನೀ ಹೊಳೆಯುತ್ತಿರು 
     ಸರದಂತಹ ಮಾಲೆಯಲ್ಲಿ ನೀ ನಗುತಿರು
ಜಯ ಸಿಗುವ ಪೂಜೆಗೆ ನೀ ಹೋಗುತ್ತಿರು 
ಅಶ್ವಿನಿ ನಕ್ಷತ್ರದ ಹಾಗೆ ನೀ ಮಿನುಗುತ್ತಿರು 
    ಲಕ್ಷ್ಮಿ ದೇವಿಯ ತಲೆಯಲ್ಲಿ ನೀ ಪ್ರಭೆಯಾಗಿರು
    ಆಶಾ ಗುಣಗಳ ಸವಿಯಾಗಿ ಬೆಳೆಸುತ್ತಿರು
ಮನೆಯ ಅಂಗಳದಲ್ಲಿ ನಲಿಯುತ್ತಿರು
ಮನದಲಿ ಪರಿಮಳ ಬೀರುತ್ತಿರು
    ಗೆಳೆಯರ ಜೊತೆಯಲಿ ಆಡುತ್ತಿರು
    ನಗು ನಗುತಾ ಸಂತಸದಿಂದ ಇರು
******************************************


                ಗಿಡಗಳು
                -----------
ಹಸಿರಿನ ಗಿಡಗಳ ಬೆಳೆಸೋಣ
ತಂಪಿನ ನೆರಳಲಿ ಕೂರೋಣ
ಪಕ್ಷಿಯ ಚಿಲಿಪಿಲಿ ಕೇಳೋಣ
ಬಣ್ಣದ ಹೂಗಳ ನೋಡೋಣ
ರುಚಿಕರ ಹಣ್ಣನು ತಿನ್ನೋಣ
ಹಸಿರಿನ ಪರಿಸರ ಉಳಿಸೋಣ..
............................ದಿಯಾ ಉದಯ್ ಡಿ ಯು
4ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ
ಕಿಲ್ಪಾಡಿ, ಮುಲ್ಕಿ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article