
ಆದ್ಯಂತ್ ಅಡೂರು ರಚಿಸಿರುವ ಕವನಗಳು
Monday, July 18, 2022
Edit
ಮಕ್ಕಳ ಜಗಲಿಯಲ್ಲಿ
ಆದ್ಯಂತ್ ಅಡೂರು
ರಚಿಸಿರುವ ಕವನಗಳು
ಮಳೆಗಾಲದ ಸೊಬಗು - ಕವನ
-------------------------------------
ಮಳೆಗಾಲದಲ್ಲಿ ಬರುವುದು ಮಳೆಯು
ಹಚ್ಚ ಹಸಿರಿನಿಂದಿರುವುದು ಬೆಳೆಯು
ತುಂಬಿ ಹರಿಯುವುದು ಕೆರೆ, ನದಿ, ಹೊಳೆಯು
ಹೊರಗಿಳಿದರೆ ಮೈಯಲ್ಲಾಗುವುದು ಕೊಳೆಯು
ಎಲ್ಲಾ ಕಡೆಯೂ ಜಾರುತ್ತಿರುವುದು
ಒದ್ದೆಯಾದರೆ ಜ್ವರವೂ ಬರುವುದು
ಮಳೆಗಾಲದಲಿ ಸೊಳ್ಳೆ ಬರುವುದು
ಡೆಂಗ್ಯೂ, ಮಲೇರಿಯಾ ರೋಗ ತರುವುದು
ಮಳೆಗಾಲದಲಿ ಗದ್ದೆ ಉಳುವರು
ಭತ್ತದ ನಾಟಿಯ ಮಾಡುವರು
ರೋಗವ ತಡೆಯಲು ಔಷಧ ನೀಡುವರು
ಉತ್ತಮ ಬೆಳೆಯನು ಪಡೆಯುವರು
ಮಳೆಗಾಲದಲಿ ಆಗುವುದು ಚಳಿ
ಎಲ್ಲೆಡೆ ಬೀಸುವುದು ತಂಪಾದ ಗಾಳಿ
ಗಿಡ - ಮರಗಳಿಗೆ ನೀರು ಲಭಿಸುವುದು
ಹಕ್ಕಿಗಳು ಖುಷಿಯಿಂದ ಕುಣಿಯುವುದು
9ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ,
ಅಡೂರು , ಕಾಸರಗೋಡು ತಾಲೂಕು
ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ
******************************************
ಚುಟುಕುಗಳು
ಹಕ್ಕಿ
------------
ಹಕ್ಕಿಯೊಂದು ಬಾನಿನಲ್ಲಿ ಹಾರುತಿರುವುದು
ಚಿಂವ್ ಚಿಂವ್ ಎನ್ನುತ ಹಾಡುತಿರುವುದು
ಕಸ - ಕಡ್ಡಿಗಳಲ್ಲಿ ಗೂಡು ಕಟ್ಟುತಿರುವುದು
ನೆಲದಲ್ಲಿದ್ದ ಹುಳಗಳನ್ನು ತಿನ್ನುತಿರುವುದು
ಆಷಾಢ ಮಾಸ
------------------------
ಬಂದಿತು ಬಂದಿತು ಆಷಾಢ ಮಾಸವು
ದೈವದ ಕೋಲವು ನಡೆಯುವವು
ಆಟಿಕೆಳೆಂಜ ಬರುವ ಮಾಸವು
ಹಬ್ಬಗಳೆಲ್ಲಾ ಶುರುವಾಗುವವು
9ನೇ ತರಗತಿ
ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ,
ಅಡೂರು , ಕಾಸರಗೋಡು ತಾಲೂಕು
ಕಾಸರಗೋಡು ಜಿಲ್ಲೆ , ಕೇರಳ ರಾಜ್ಯ
******************************************