
ಲಾವಣ್ಯ ಬರೆದಿರುವ ಕವನ
Tuesday, July 5, 2022
Edit
ಮಕ್ಕಳ ಜಗಲಿಯಲ್ಲಿ
ಲಾವಣ್ಯ ಬರೆದಿರುವ
ಕವನ
ಕಾರಣವ ಹೇಳು ನೀ ಮನುಜ.....?
---------------------------------
ಆ ಬಣ್ಣ ಈ ಬಣ್ಣವೆಂಬ ಭೇದವೇತಕೆ?
ಬಿಳಿ ಬಣ್ಣ ಚೆಂದವೆಂಬ ಮೂಢನಂಬಿಕೆ ಏತಕೆ?
ಕಪ್ಪು ಬಣ್ಣ ನಿಕೃಷ್ಟವೆಂಬ ಭಾವವೇತಕೆ
ಕಾರಣವ ಹೇಳು ನೀ ಮನುಜ...
ಬಣ್ಣವೆಂಬುವುದು ವ್ಯಕ್ತಿಯ
ವ್ಯಕ್ತಿತ್ವವ ತಿಳಿಸುವುದೇ.....?
ಬಣ್ಣದಿಂದ ವ್ಯಕ್ತಿಯ ಮನವ
ಅರಿಯಲಾಗುವುದೇ.....?
ಬಣ್ಣದಿಂದಲೇ ಜಗತ್ತು ಸಾಗುತಲಿದೆಯೇ..?
ಕಾರಣವ ಹೇಳು ನೀ ಮನುಜ...
ಎಲ್ಲ ಮನುಜರ ರಕ್ತದ ಬಣ್ಣ ಕೆಂಪು
ಭೇದವಿಲ್ಲ ಅದಕೆ ಕಪ್ಪು-ಬಿಳುಪು
ಸಾಧನೆಗೆ ಬೇಕಿದೆಯೇ ಬಣ್ಣ
ತಿಳಿಯದು ಏನೋ ನನಗೆ...
ಬಿಳಿಯರು ನೀಗ್ರೋಗಳನ್ನ
ಗುಲಾಮರಾಗಿ ಸಿದಂತೆ..
ಕಪ್ಪು ಬಣ್ಣವ ನಿಕೃಷ್ಟವೆಂದೇಕೆ ಕಾಣುವಿರಿ
ಪುರಾಣದಲ್ಲಿ ಬರುವ ದ್ರೌಪದಿ
ಕಪ್ಪು ಬಣ್ಣವಲ್ಲವೇ?
ಕೃಷ್ಣ ಕಪ್ಪುಬಣ್ಣವಲ್ಲವೇ...?
ಬಣ್ಣದಿಂದೇನಾಗಬೇಕು ಮನುಜ
ಮನವ ಅರಿತು ನಡೆಯೋ....
ಸಾಧನೆಗೆ ಬಣ್ಣ ಅಡಿಯಾಗಲಾರದು
ತಿಳಿದು ಮುನ್ನಡೆಯದಿದ್ದರೆ ಜೀವನ ಸಾಗದು.
ಪ್ರಥಮ ಪಿಯುಸಿ
ಸರಕಾರಿ ಪದವಪೂರ್ವ ಕಾಲೇಜು
ಕುರ್ನಾಡು , ಮುಡಿಪು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************