ಅಶ್ವಿಕ್ ಬರೆದಿರುವ ಕವನ
Monday, July 11, 2022
Edit
ಮಕ್ಕಳ ಜಗಲಿಯಲ್ಲಿ
ಅಶ್ವಿಕ್ ಬರೆದಿರುವ
ಕವನ
ಚಂದ್ರ
------------
ಚಂದ್ರನ ಹೊಳಪು ಚಂದ
ಚಂದ್ರನ ಬೆಳಕು ಅಂದ
ನೋಡು ನನ್ನ ತಂಗಿ
ಆ ಬಿಳಿಯ ಅಂಗಿ
ಆ ಅಂದ ನನ್ನ ತಂಗಿಯ
ಕಣ್ಣಿನಲ್ಲಿ ಇರುವಾಗ ರಂಗುರಂಗು
ಬರುವನು ಚಂದಿರ ಹುಣ್ಣಿಮೆಯಲ್ಲಿ
ಕತ್ತಲನು ಸರಿಸುವ ರಾತ್ರಿಯಲಿ
ನನ್ನ ಮುದ್ದು ತಂಗಿಗೆ
ನಿನ್ನ ಮುಖ ತೋರಿಸಿ
ಅವಳ ಮುಖದಲ್ಲಿ
ನಗು ತರಿಸುವ ನೀನು
ನನ್ನ ತಂಗಿಗೆ ಊಟ ಮಾಡಲು
ನಿನ್ನ ಒಪ್ಪಿಗೆ ಬೇಕೇ ಬೇಕು
ಅಳುವಾಗ ನೀನು ಕಂಡರೆ ಸಾಕು
ಮುಖದಲ್ಲಿ ನಗುವಿನ ಕೇಕೆ
ನಾವಿಬ್ಬರೂ ತಲೆಬಾಗಿ ಕೈ ಮುಗಿವೆವು
ಕರುಣಿಸು ಜಗತ್ತಿಗೆ ಉತ್ತಮ ಆರೋಗ್ಯ
4ನೇ ತರಗತಿ
ಸೈಂಟ್ ಪೀಟರ್ ಕ್ಲೇವರ್ ಚರ್ಚ್
ಸ್ಕೂಲ್ , ಅಳದಂಗಡಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************