
ಆರ್ಟ್ ಗ್ಯಾಲರಿ : ಕಲಾವಿದ ಸಯ್ಯದ್ ಆಸಿಫ್ ಆಲಿ : ಸಂಚಿಕೆ - 02
Thursday, July 14, 2022
Edit
ಆರ್ಟ್ ಗ್ಯಾಲರಿ : ಕಲಾವಿದ ಸಯ್ಯದ್ ಆಸಿಫ್ ಆಲಿ : ಸಂಚಿಕೆ - 02
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ
ಕಲಾವಿದರ ಹೆಸರು : ಸಯ್ಯದ್ ಆಸಿಫ್ ಆಲಿ.
Artist Name : Syed Asif Ali
◾ ನೈಸರ್ಗಿಕ ಸೌಂದರ್ಯಕ್ಕೆ ಮನವೊಲಿದು ಭಾವನೆಗಳ ಲಹರಿಗೆ ಕುಂಚ ನಾಟ್ಯ ವಾಡುವ ಮನಮೋಹಕ ದೃಶ್ಯ ಇವರ ಕಲಾಕೃತಿಗಳಲ್ಲಿ. ಎಲ್ಲಾ ಮಾಧ್ಯಮಗಳಲ್ಲೂ ಪರಿಣತಿ ಪಡೆದಿರುವ ಇವರು ಜಲವರ್ಣದಲ್ಲಿ ವಿಶೇಷ ಛಾಪನ್ನು ಮೂಡಿಸಿರುವರು. ನೈಸರ್ಗಿಕ ದೃಶ್ಯಗಳನ್ನು ಜಲವರ್ಣದಲ್ಲಿ ಸೆರೆ ಹಿಡಿಯುವ ಇವರ ಕೌಶಲ್ಯ ಅವರ್ಣನೀಯ. ನಿಖರತೆಯಡೆಗೆ ಸಾಗುವ ಇವರ ಕಲಾಕೃತಿಗಳ ಸೊಬಗು ತನ್ನ ಲಯವನ್ನು ನೋಡುಗರಿಗೆ ಹಬ್ಬದಂತೆ ಕಟ್ಟುತ್ತದೆ. ನೈಜ ಚಿತ್ರಣ , ಭಾವಚಿತ್ರ , ಸಮಕಾಲೀನ ಚಿತ್ರದಲ್ಲೂ ಹಿಡಿತ ಬೆರಗು ಮೂಡಿಸುವಂತದ್ದು.
◾ 1972 ರಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಇಲ್ಲಿ ಜನಿಸಿ . G.D. ART ಪದವಿಯನ್ನು ತುಮಕೂರಿನ RKN ಚಿತ್ರಕಲಾ ವಿದ್ಯಾಲಯದಲ್ಲಿ ಹಾಗೂ Master in Visual Art(MVA) ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು.
◾ ಪ್ರಸಕ್ತ ಮಂಗಳೂರಿನ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
◾ ಇವರ ಕಲಾಕೃತಿಗಳು ರಾಷ್ಟ್ರದ ಹಾಗೂ ಹೊರ ರಾಷ್ಟ್ರದ ಅನೇಕ ಭಾಗಗಳಿಗೆ ಮಾರಾಟವಾಗಿದೆ.
ಪ್ರಶಸ್ತಿಗಳ ವಿವರ:
Awards :
◾ All India national level exhibition award Ambala - 1994
◾Mysore Dasara annual exhibition award : total 9 awards (1993 - 2003)
◾ Karnataka Lalitha Kala academy award - 2009
◾Camlin National award - 2014
◾Address
Syed Asif Ali
Artist/ Lecturer mahalasa college of visual art
Bhagavati Nagar
Mangalore 575 003
Mobile +91 99165 26147
******************************************
size : 18 x 24 inches
media : watercolor
price : 20000
size : 3x4 feet
media : Oil Colour
price : 55,000
size : 3x4 feet
media : Oil Colour
price : 60,000
size : 2x3 feet
media : Oil Colour
price : 20000
size : 3x4 inches
media : Oil Colour
price : 60,000
ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ.
ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
Artist/ Lecturer
mahalasa college of visual art
Bhagavati Nagar
Mangalore 575 003
Mobile +91 99165 26147
******************************************