
ಪ್ರೀತಿಯ ಪುಸ್ತಕ : ಸಂಚಿಕೆ - 15
Friday, July 15, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 15
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ......... ಆನೆ ಅಂದರೆ ನಿಮಗೆ ಇಷ್ಟ ಅಲ್ಲವೇ....? ಆನೆಯ ಬಗ್ಗೆ ತಮಾಷೆ ಎನಿಸುವ, ನಗಿಸುವ ಚಿತ್ರಗಳ ಜೊತೆಗೆ , ಈ ಪುಸ್ತಕ ತುಂಬಾ ಖುಶಿ ಕೊಡುತ್ತದೆ. ಹೆಸರೇ ಮಜವಾಗಿದೆ ಅಲ್ಲವೇ.. ’ಗಜಪತಿ ಕುಲಪತಿ’ ಅಂತ ಹೇಳುವುದಕ್ಕೇ ಚಂದ ಅನಿಸುತ್ತದೆ. ಇದರಲ್ಲಿ ಮೂರು ಸರಣಿಗಳು ಬಂದಿವೆ. ಆಆಆಆಕ್ಷೀ ಅಂತ ಮಳೆಯಲ್ಲಿ ನೆನದು ಸೀನುವ ಗಜಪತಿ ಕುಲಪತಿ, ಢಾಸ್ ಪೂಸ್ ಭೂಊಊಸ್ ಅಂತ ಹೂಸು ಬಿಡುವ ಗಜಪತಿ ಕುಲಪತಿ ಮತ್ತು ಕೊನೆಯದು ಗುರ್ ರ್ ಬುರ್ ರ್ ರೂಂಮ್ ಅನ್ನುವ ಹೊಟ್ಟೆ ನೋವಿನ ಗಜಪತಿ ಕುಲಪತಿ, ಎಲ್ಲವೂ ಮಕ್ಕಳಿಗೆ ಇಷ್ಟ ಆಗುತ್ತದೆ. ದೊಡ್ಡ ಗಾತ್ರದ ಆನೆ ಮಕ್ಕಳ ಹಾಗೆ ಮೃದುವಾಗಿ ಇರುತ್ತದೆ. ಗಜಪತಿ ಕುಲಪತಿಗೆ ಭಾರೀ ಭಾರೀ ಸ್ನೇಹಿತರು ಇರುತ್ತಾರೆ. ಅವರೆಲ್ಲರಿಗೆ ಗಜಪತಿ ಕುಲಪತಿ ಮೇಲೆ ಬಹಳ ಅಕ್ಕರೆ ಮತ್ತು ಕಾಳಜಿ. ಗಜಪತಿ ಕುಲಪತಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಗೊತ್ತಾ.......
ಅಶೋಕ ಅವರೇ ಇದರ ಕಥೆ ಮತ್ತು ಚಿತ್ರಗಳನ್ನು ಬರೆದಿದ್ದಾರೆ. ಚಿತ್ರಗಳನ್ನು ನೋಡಿದರೇ ಗಜಪತಿ ಕುಲಪತಿ ಮೇಲೆ ಪ್ರೀತಿ ಬಂದು ಬಿಡುತ್ತದೆ. ನಿಮಗೆ ಗಜಪತಿ ಕುಲಪತಿ ಜೊತೆಗೆ ಸ್ನೇಹ ಬೆಳೆಸುವ ಆಸೆ ಇದ್ದರೆ ಪುಸ್ತಕದ ಒಳಗೆ ಹೋಗಿ ನೋಡಿ.
ಲೇಖಕರು: ಅಶೋಕ ರಾಜಗೋಪಾಲನ್
ಅನುವಾದ:ದೀಪಾ ಗಣೇಶ
ಚಿತ್ರಗಳು: ಅಶೋಕ ರಾಜಗೋಪಾಲನ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್ (ಆನ್ ಲೈನ್ ನಲ್ಲಿ ಪಡೆಯಬಹುದು)
ಬೆಲೆ: ರೂ.135
2+ ವಯಸ್ಸಿನ ಮಕ್ಕಳಿಗಾಗಿ ಇದೆ ಈ ಪುಸ್ತಕ. ಸ್ವಲ್ಪ ದೊಡ್ಡ ಮಕ್ಕಳೂ ಕೂಡಾ ಈ ಪುಸ್ತಕವನ್ನು ಇಷ್ಟ ಪಡುತ್ತಾರೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************