-->
ಧೃತಿ ಬರೆದ ಕವನಗಳು

ಧೃತಿ ಬರೆದ ಕವನಗಳು

ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


          ಪರಿಸರ ಸಂರಕ್ಷಣೆ
         -----------------------
ಹಸಿರಲಿ ಅಡಗಿದೆ ನಮ್ಮ ಉಸಿರು 
ಹಸಿದವನಿಗೆ ನೀಡುತಿರುವುದು ಅನ್ನ, ನೀರು 
ಚಿಲಿಪಿಲಿ ಹಕ್ಕಿಗಳಿಗೆ ಸುಂದರ ತೇರು 
ಸುರಿಸುವುದು ಆಗಾಗ ಮಳೆಯ ನೀರು 
       ಸ್ವಚ್ಛವಾಗಿ ಇಡೋಣ ಪರಿಸರ
       ಬೆಳೆಸೋಣ ಸುತ್ತ ಗಿಡಮರ
       ಶುದ್ಧವಾಗುವುದು ಸರೋವರ
       ಪ್ರಕೃತಿಯೇ ನಮ್ಮ ಪಾಲಿಗೆ ವರ 
ನೆರಳ ನೀಡಿ ತಣಿಸುವ ದೇವರು
ಪರಿಸರವೇ ಔಷಧೀಯ ತವರೂರು
ಸವಕಳಿ ಆಗದಂತೆ ತಡೆಯುವುದು ಬೇರು 
ಮರಗಳ ಕಡಿಯುವರು ಮಾನವರು
       ಪರಿಸರ ಸಂರಕ್ಷಣೆ
       ನಮ್ಮೆಲ್ಲರ ಹೊಣೆ
       ರಕ್ಷಣೆ ಮಾಡುತ್ತಿಲ್ಲ ನಾವು
       ಅದಕ್ಕೋಸ್ಕರ ಇಷ್ಟೆಲ್ಲಾ ನೋವು 
ರಸ್ತೆಯಲ್ಲಿ ವಾಹನಗಳ ಓಡಾಟ
ಕಪ್ಪು ಹೊಗೆಯ ನಿತ್ಯ ಕಾಟ
ಕಷ್ಟ ಇನ್ನು ಮುಂದೆ ಉಸಿರಾಟ
ಮೊಳಗಲಿ ಮಾಲಿನ್ಯ ವಿರುದ್ಧ ಹೋರಾಟ 
      ಭೂಮಿಗೆ ಪ್ರಕೃತಿಯೇ ಆಭರಣ 
      ಹೂ-ತಳಿರುಗಳಿಂದ ಮಾಡಲ್ಪಟ್ಟ ತೋರಣ           
      ಸ್ವಾಗತ ಸಕಲ ಜೀವರಾಶಿಗಳಿಗೆ
      ಇರುವುದೊಂದೆ ಭೂಮಿ ನಾಳೆಗೆ
...................................................... ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


            ಮೊಬೈಲ್
            --------------
ಮೊಬೈಲು ಒಂದು ವಸ್ತು
ಅದನ್ನು ನೋಡಿದರೆ ಆಗದು ಸುಸ್ತು
    ಸಿಗುವುದಿಲ್ಲಿ ಹಲವು ವಿಷಯ ಗಮ್ಮತ್ತು
    ಆದರೂ ಇದೆ ಭವಿಷ್ಯಕ್ಕೆ ಬಹಳ ಕುತ್ತು
ಮಾಡುವರು ಮೊಬೈಲಿನಲಿ ಆಟ
ಮರೆತುಹೋಗಿದೆ ಮೈದಾನದ ಓಟ
     ಮಾತನಾಡುವರು ನಿತ್ಯ ಮೊಬೈಲಿನಲಿ 
     ಮಾತನಾಡಲ್ಲ ಸಿಕ್ಕರೆ ಎದುರಿನಲಿ 
ಕಣ್ಣಿಗೂ ನೋವಿನ ತೊಂದರೆ
ಮೊಬೈಲು ನಿತ್ಯ ಕೈಗೆತ್ತಿಕೊಂಡರೆ
      ಮೊಬೈಲಿನಲ್ಲಿ ಕೇಳಿ... ಸರಾಗ ಪದ್ಯ
      ಶಾಲೆಯಲ್ಲಿ ಎಷ್ಟೇ ಕಲಿತರೂ ಬಾರದು ಗದ್ಯ 
ಯಾರ ಕೈಯಲ್ಲಿ ನೋಡಿದರು ಮೊಬೈಲು
ಈಗ ಆಗಿಬಿಟ್ಟಿದೆ ಅದುವೇ ಸ್ಟೈಲು 
        ಬದಲಾಗಿಬಿಟ್ಟಿದೆ ನಮ್ಮೀ ಜಗತ್ತು
        ಬದಲಾಗಬೇಕಿದೆ ನಾವಿವತ್ತು 
...................................................... ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************                ಜೀವನ
                -----------
ಎಷ್ಟೋ ಕನಸುಗಳನ್ನು ಕಾಣುತ್ತಾ
ಅದನ್ನು ನನಸಾಗಿಸಲು ಪ್ರಯತ್ನಿಸುತ್ತಾ
ದಿನವಿಡೀ ಅದಕ್ಕಾಗಿ ಯೋಚಿಸುತ್ತಾ
ಸಫಲತೆಯ ಕಡೆ ಸಾಗುತ್ತಾ....
      ತೊಂದರೆಗಳನ್ನೆಲ್ಲಾ ಸಹಿಸುತಲಿ 
      ಒಳ್ಳೆಯ ಮಾರ್ಗದಿ ಸಾಗುತಲಿ 
      ಗುರಿಯನ್ನು ತಲುಪುವ ತವಕದಲಿ 
      ಓಡುವ ಹಿಂದೆ ಸಮಯದಲಿ 
ಒಳ್ಳೆಯ ಕೆಲಸವು ಸಿಗುತಿರಲು 
ಶ್ರದ್ಧೆಯಿಂದ ತಪ್ಪದೆ ಮಾಡುತಲಿರಲು 
ದುಡಿದ ಶ್ರಮದ ಬೆವರಿನ ಫಲ
ಸಿಗುವುದು ಬಾಳಲಿ ಪ್ರತಿ ಫಲ
     ಹೀಗೆ ಜೀವನವು ಸಾಗುತಿರಲು
     ನೋವುಗಳೆಲ್ಲ ಮಾಸಿ ಹೋಗಲು
     ಮಾಡಲು ಕನಸನು ನನಸಾಗಿ
     ತಿಳಿಯಿತು ಜೀವನ ಬದಲಾಗಿ 
...................................................... ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


            ಪಟಾಕಿ
            -----------
ಪಟಾಕಿ ಯಲ್ಲಿದೆ ಗಮ್ಮತ್ತು
ಆದರೂ ಇದೆ ಆಪತ್ತು
ಕೈಯಲ್ಲಿ ಸಿಡಿದರೆ ವಿಪತ್ತು 
ಹಾಳಾಗುವುದು ನಮ್ಮಯ ಸಂಪತ್ತು 


        ಭಾರತಮಾತೆ
        ------------------
ಭಾರತಮಾತೆಯ ರೂಪ ಲಾವಣ್ಯ
ನಾ ಕಂಡು ಆದೆನು ಧನ್ಯ
ಎಲ್ಲರಿಗೂ ಇದೆ ಮಾನ್ಯ
ಭಾರತದಲ್ಲಿ ಹುಟ್ಟಿದ ನಾವೆಲ್ಲ ಪುಣ್ಯ


             ತರಕಾರಿ
         -----------------
ತಿನ್ನಿರಿ ಒಳ್ಳೆಯ ತರಕಾರಿ
ದೇಹಕ್ಕೆ ತುಂಬಾ ಉಪಕಾರಿ
ಆಗದು ಎಂದೂ ಅಪಕಾರಿ
ಆರೋಗ್ಯಕ್ಕೆ ಬಹಳ ಹಿತಕಾರಿ 


                ಕವನ
           ----------------
ಕವನ ಬರೆಯುವುದು ಒಳ್ಳೆಯ ಹವ್ಯಾಸ
ಆಗದು ಎಂದಿಗೂ ದುರಭ್ಯಾಸ
ಆಗಿಬಿಟ್ಟರೆ ಅಭ್ಯಾಸ
ಆಗಬಹುದು ಮುಂದೊಂದು ಇತಿಹಾಸ 


                ನಿಸರ್ಗ
              -------------
ಭೂಮಿಯ ಮೇಲಿನ ನಿಸರ್ಗ
ಅದುವೇ ಭೂಲೋಕದ ಸ್ವರ್ಗ
ಅದ ಮಾಡಿದರೆ ನಾಶ 
ಹಾಳಾಗುವುದು ಓದಿದ ಕೋಶ
...................................................... ಧೃತಿ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************Ads on article

Advertise in articles 1

advertising articles 2

Advertise under the article