![ಚಿತ್ರಕಥೆ -10 : ಹುಳ , ಇರುವೆ ಮತ್ತು ಕಪ್ಪೆ ಚಿತ್ರಕಥೆ -10 : ಹುಳ , ಇರುವೆ ಮತ್ತು ಕಪ್ಪೆ](https://blogger.googleusercontent.com/img/b/R29vZ2xl/AVvXsEh9UJtcwtX5JTLyKylwVEyR9jCzh9kCd64HjiwmJIMeT-XS2n6H3Mp7EiGXcJKIpMNPyhPCPNjfXFYRJ76TlhbQDylBr4DfSzyfbs0weu-7UP18ccLlnOC89GrKDoAkJ3kJ23WVIG-lB7Ee/s1600/1654585561294538-0.png)
ಚಿತ್ರಕಥೆ -10 : ಹುಳ , ಇರುವೆ ಮತ್ತು ಕಪ್ಪೆ
Tuesday, June 7, 2022
Edit
ಚಿತ್ರಕಥೆ -10
ಒಂದು ಚಿಕ್ಕ ಗಿಡದ ನಡುವೆ ಒಂದು ಹುಳದ ಮನೆ ಇತ್ತು. ಒಂದು ದಿನ ಅದರಲ್ಲಿರುವ ಹುಳಕ್ಕೆ ತುಂಬಾ ಹಸಿವಾಗಿತ್ತು. ಅದು ಏನಾದರೂ ತಿನ್ನಲು ಸಿಗುತ್ತದೆ ಎಂದು ಮನೆಯಿಂದ ಹೊರಗೆ ಬಂದು ನೋಡಿತು. ಅಲ್ಲಿ ಸುಮಾರು ಇರುವೆಗಳು ಸಕ್ಕರೆಯನ್ನು ಎತ್ತಿಕೊಂಡು ಹೋಗುತ್ತಿದ್ದವು. ಇದನ್ನು ನೋಡಿ ಹುಳ ಅಲ್ಲಿಗೆ ಹೋಯಿತು. ಹೋಗುತ್ತಿರುವಾಗ ಎದುರಿನಿಂದ ಒಂದು ಕಪ್ಪೆ ಬಂತು. ಕಪ್ಪೆ ಹುಳವನ್ನು ತಿನ್ನಲು ಹೋದಾಗ ಅಲ್ಲಿರುವ ಇರುವೆಗಳು ಕಪ್ಪೆಗೆ ಕಚ್ಚಿ-ಕಚ್ಚಿ ನೋವು ಮಾಡಿತು. ಕಪ್ಪೆ ಅಲ್ಲಿಂದ ಓಡಿ ಹೋಯಿತು. ಹುಳಕ್ಕೆ ತುಂಬಾ ಖುಷಿಯಾಗಿ ಹುಳ ಇರುವೆಗಳಿಗೆ ಧನ್ಯವಾದ ಹೇಳಿತು. ಇರುವೆಗಳು ಹುಳವನ್ನು ತನ್ನ ಮನೆಗೆ ಕರೆದುಕೊಂಡು ಹೋದವು. ಅಲ್ಲಿ ಹುಳಕ್ಕೆ ಇರುವೆಗಳು ತಿನ್ನಲು ಊಟ ತಿಂಡಿ ಎಲ್ಲಾ ಕೊಟ್ಟಿತು. ಹುಳಕ್ಕೆ ತುಂಬಾ ಖುಷಿಯಾಗಿ ಇರುವೆಗಳು ಮತ್ತು ಹುಳ ಗೆಳೆಯರಾದವು.
5ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************