
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ - 25
Saturday, June 4, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 25
ಪತ್ರಗಳಿಗೆ ಉತ್ತರಗಳ ಸುರಿಮಳೆಯೊಡನೆ ಭಾವಗಳೂ ನೆನೆದು ನೆನಪುಗಳನ್ನು ಹಸಿರಾಗಿಡುವ ಸ್ಫೂರ್ತಿಯ ಪಯಣ... ಇದು 25 ನೆಯ ಸಂಚಿಕೆ... ಬರೆಸುತ್ತಿರುವುದು ನಿಮ್ಮ ಪ್ರೀತಿ.
ಈ ದಿನ...... ಹಸಿರು ಪಸರಿಸಿ ಉಳಿಸುವ ಉದ್ದೇಶಕ್ಕಾಗಿ ಹುಟ್ಟಿಕೊಂಡ ಆಚರಣೆಯೊಂದಿಗೆ ಮಹತ್ವ ಪಡೆದಿದೆ.1972 -73 ರ ವಿಶ್ವಸಂಸ್ಥೆಯ ಮಹಾಸಭೆ ಯಲ್ಲಿ ನಿರ್ಧಾರವಾದಂತೆ 1974 ರಲ್ಲಿ ಮೊದಲ ಆಚರಣೆ... ಪ್ರತಿ ವರ್ಷವೂ ಇದೊಂದು ಸಂಭ್ರಮವೇ....! ತೋರ್ಪಡಿಕೆಗಿಂತ ನೈಜ ಕಾಳಜಿ ಜಾಗೃತವಾಗಲೆನ್ನುವ ಆಶಯ.
ಪರಿಸರಕ್ಕೊಂದು ದಿನ..! ನಾವು ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕುವ ಪ್ರಯತ್ನ...! ಗಿಡ ನೆಟ್ಟು ಖುಷಿ ಪಟ್ಟು ಈ ದಿನವನ್ನು ಮುಕ್ತಾಯಗೊಳಿಸಿದರೆ....?
ಗಿಡ ನೆಡುವುದರ ಜೊತೆಗೆ ಪರಿಸರವನ್ನು ಹಾಗೆಯೇ ಉಳಿಸಿಕೊಳ್ಳಲು ನಮ್ಮ ಪ್ರಯತ್ನಗಳೇನು....? ನಮ್ಮ ಉಸಿರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪರಿಸರ ಕಾಳಜಿಗಳೇನು.....?
ಚಿಪ್ಕೋ ಚಳುವಳಿಯೆಂಬ ಹೆಸರಿನಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ನಾಶವಾಗುತ್ತಿರುವ ಅರಣ್ಯವನ್ನು ರಕ್ಷಿಸಲು , ಪರಿಸರ ಹೋರಾಟಗಾರರು ಪರಸ್ಪರ ಕೈ ಹಿಡಿದುಕೊಂಡು ಮರಗಳನ್ನು ಅಪ್ಪಿ ಹಿಡಿಯುತ್ತಿದ್ದರು.. ಅದು 1973 ರ ಸಮಯ. ಉತ್ತರಪ್ರದೇಶದಲ್ಲಿ ಬಹಳಷ್ಟು ಪ್ರಭಾವ ಬೀರಿ ದೇಶದುದ್ದಕ್ಕೂ ಸ್ಫೂರ್ತಿ ಯಾದ ಈ ಪರಿಕಲ್ಪನೆಯ ರೂವಾರಿ ಖ್ಯಾತ ಪರಿಸರವಾದಿ ಶ್ರೀ ಸುಂದರಲಾಲ್ ಬಹುಗುಣ.
ಕರ್ನಾಟಕದ ಸಾಲು ಮರದ ತಿಮ್ಮಕ್ಕ. ಮುಗ್ದ ಮನಸ್ಸಿನೊಳಗೆ ಪ್ರಬುದ್ಧ ಆಲೋಚನೆಗಳನ್ನು ಸಾಕಾರಗೊಳಿಸಿದವರು.
ಗಿಡ ನೆಡುವ ಈ ದಿನ.... ಆಲೋಚನೆಗಳು ವಿಸ್ತಾರಗೊಳ್ಳಲಿ... ಪರಿಸರಕ್ಗಾಗಿ..
ಇದೇ ಈ ದಿನ ಮತ್ತೊಂದು ಹೊಸ ಯೋಚನೆಯ ಬೀಜವು ಮೊಳಕೆಯೊಡೆಯಲಿ.
ಕಳೆದ ಸಂಚಿಕೆಗೆ ಜಗಲಿಯ ಶ್ರಾವ್ಯ, ಲಹರಿ, ಪ್ರಿಯ, ಆಯಿಷಾ ಹಮ್ನ, ಧೃತಿ, ಸ್ರಾನ್ವಿ ಶೆಟ್ಟಿ, ಬಿಂದುಶ್ರೀ , ಸಾತ್ವಿಕ್ ಗಣೇಶ್ ಬರೆಹದ ಭಾವವಾಗಿದ್ದಾರೆ... ಎಲ್ಲರ ಓದಿಗೆ ಪ್ರೀತಿಯ ನೆನಪುಗಳು.
ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************