ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ ಸಂಚಿಕೆ - 4
Sunday, June 26, 2022
Edit
ಜೂನ್ -21
ವಿಶ್ವ ಯೋಗ ದಿನಾಚರಣೆ - 2022 :
ಜಗಲಿ ಮಕ್ಕಳ ವರದಿ
ಸಂಚಿಕೆ - 4
ತಮ್ಮ ಶಾಲೆಗಳಲ್ಲಿ ಜರುಗಿದ ಯೋಗ ದಿನಾಚರಣೆ ಕುರಿತು ಜಗಲಿಯ ಮಕ್ಕಳು ಬರೆದು ಕಳಿಸಿರುವ ವರದಿಗಳು ಇಲ್ಲಿವೆ..... ಜಗಲಿಯ ಮಕ್ಕಳಲ್ಲಿ ಕಾರ್ಯಕ್ರಮದ ವರದಿಯನ್ನು ಮಾಡುವ ಮತ್ತು ಬರೆಯುವ ಕೌಶಲ್ಯವನ್ನು ಮೂಡಿಸುವ ಪ್ರಯತ್ನ ಇದಾಗಿದೆ....
ನನ್ನ ಹೆಸರು ತರುಣ್ ಕೃಷ್ಣ .ಜಿ .ಎಸ್. ಶಾಲಾ 'ಸ್ವಸ್ಥ-ಸ್ವಾಸ್ಥ್ಯ' ಸಂಘದ ಆಶ್ರಯದಲ್ಲಿ ಮಾನವೀಯತೆಗಾಗಿ ಯೋಗ ಎಂಬ ಗುರಿಯಿಟ್ಟು ಯೋಗ ದಿನಾಚರಣೆ ಆಚರಿಸಲಾಯಿತು. ಡಾ| ಚೇತನಾ ಮುದ್ರಜೆ ಇವರು ಶುಭ ಹಾರೈಸಿದರು. ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಯೋಗಾಭ್ಯಾಸದ ಬಗ್ಗೆ ಹೇಳಿದರು. ಕಳೆದ 15 ರಿಂದ 21ರವರೆಗೆ ಶಾಲಾ ವತಿಯಿಂದ ಶ್ರೀ ರಂಗಪ್ಪ ಶ್ರೀಮಾನ್ ಮಕ್ಕಳಿಗೆ ಯೋಗ ಕಲಿಸಿದರು. ಎಲ್ಲಾ ಮಕ್ಕಳು ಸಂತೋಷದಿಂದ ಭಾಗವಹಿಸಿದರು.
5 ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ವಿವೇಕನಗರ , ತೆಂಕಿಲ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಾನು ಋತ್ವಿಕ್ ಮೊಳೆಯಾರ್. ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದೇನೆ. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಯೋಗ ಎಂಬ ಆಚರಣೆ ಬಹಳ ಪರಂಪರಾಗತ. ನಮ್ಮ ಶಾಲೆಯಲ್ಲಿ ಯೋಗ ಗುರುಗಳಾದ ಶ್ರೀಯುತ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ವಿವಿಧ ಆಸನಗಳನ್ನು ಮಾಡಲಾಯಿತು. ಎಲ್ಲಾ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮನಸ್ಸಿನ ಏಕಾಗ್ರತೆಗೆ, ಉಲ್ಲಾಸಕ್ಕೆ , ನಿಖರತೆಗೆ, ಪ್ರಾವೀಣ್ಯತೆಗೆ, ದೃಢತೆಗೆ ಯೋಗ ಬಹಳ ಮುಖ್ಯ. ಯೋಗಾಸನ ಹಾಗೂ ಪ್ರಾಣಾಯಾಮಗಳಿಂದ ಚ್ಯವನ ಮಹರ್ಷಿಯಂತೆ ಯಾವಾಗಲೂ ಸದಾ ಯವ್ವನದಿಂದಲೂ ಆರೋಗ್ಯದಿಂದಲೂ ಇರಲು ಸಾಧ್ಯ. ಧನ್ಯವಾದಗಳು.
5ನೇಯ ತರಗತಿ
ಸಾಂದೀಪನಿ ಗ್ರಾಮೀಣ ಆಂಗ್ಲ
ಮಾಧ್ಯಮ ಶಾಲೆ, ನರಿಮೊಗರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನನ್ನ ಹೆಸರು ಪ್ರಣವ್ ದೇವ್. ನಮ್ಮ ಶಾಲೆಯಲ್ಲಿ 21 ಜೂನ್ 2022 ರಂದು ವಿಶ್ವ ಯೋಗ ದಿನವನ್ನು ಆಚರಿಸಿದೆವು. ಇದೊಂದು ಸುಂದರ ಅನುಭವ, ನಮ್ಮ ಟೀಚರ್ ಯೋಗದಿಂದ ಆಗುವ ಉಪಯೋಗ ತಿಳಿಸಿದರು, ನಾನು ಎರಡನೇ ತರಗತಿ ಯಲ್ಲಿ ಓದುತ್ತಿರುವುದರಿಂದ ನಾವೆಲ್ಲರೂ ಪ್ರೇಕ್ಷಕರಾಗಿ ಹಿರಿಯ ವಿದ್ಯಾ ರ್ಥಿಗಳು ಮಾಡುತ್ತಿರುವ ಆಸನಗಳನ್ನು ನೋಡಿದೆವು. ಅಬ್ಬಾ! ಎಷ್ಟೊಂದು ಸುಂದರ, ಶಿಸ್ತು, ಉಸಿರು ಬಿಗಿ ಹಿಡಿದು ನಾನು ನೋಡಿದೆನು. ನಾನು ಸಹ ಇದೇ ರೀತಿಯ ಆಸನಗಳನ್ನು ಅಭ್ಯಾಸ ಮಾಡಬೇಕು, ಎಂದು ಅಂದುಕೊಂಡಿದ್ದೇನೆ. "ಯೋಗ ಬಲ್ಲವನಿಗೆ ರೋಗವಿಲ್ಲ" ವಂದನೆಗಳು,
ತರಗತಿ -೧
ಲೇಡಿ ಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*****************************************
ನನ್ನ ಹೆಸರು ಕೌಶೀಲ. ನಮ್ಮ ಶಾಲೆಯಲ್ಲಿ ಜೂನ್ 21 ಮಂಗಳವಾರದಂದು ವಿಶ್ವ ಯೋಗ ದಿನವಾಗಿ ಆಚರಣೆಮಾಡಲಾಯಿತು.. ಆ ದಿನದಂದು ಒಂದು ಪ್ರತ್ಯೇಕ ಕಾರ್ಯಕ್ರಮ ನಡೆಸಿ ನಮಗೆ ಬೇಕಾದ ನಿರ್ದೇಶಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್ ರಫೀಕ್ ಸರ್ ನೀಡಿದರು.... ಯೋಗ ಮಾಡುವುದರಿಂದ ಉಂಟಾಗುವ ಪ್ರಯೋಜನವನ್ನು ಕನ್ನಡ ಶಿಕ್ಷಕರಾದ ಗೋಪಾಲಕೃಷ್ಣ ಸರ್ ಹೇಳಿಕೊಟ್ಟರು.... ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಲತಾ ಮೇಡಂ ಹಾಗೂ ಎಲ್ಲಾ ಶಿಕ್ಷಕರು ಯೋಗಾಸನ ಮಾಡಿದರು. ಯೋಗಾಸನ ಮಾಡುವುದರಿಂದ ನಮಗೆ ಅರೋಗ್ಯ ದೈಹಿಕ ಸಮಸ್ಯೆಗಳ ನಿವಾರಣೆಗೆ ಉಪಯುಕ್ತವಾಗಿದೆ.. ಧನ್ಯವಾದಗಳು..
9ನೇ ತರಗತಿ
ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಆತ್ಮೀಯ ಯೋಗ ಅಭಿಮಾನಿಗಳೇ.... ನನ್ನ ಹೆಸರು ಕಾರುಣ್ಯ ಎನ್ ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ. ಇಲ್ಲಿನ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. 21/6/2022 ರಂದು ವಿಶ್ವ ಯೋಗ ದಿನವನ್ನಾಗಿ ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ನಮ್ಮ ಶಾಲೆಯಲ್ಲಿ ಯೋಗಾಭ್ಯಾಸವನ್ನು ನಮ್ಮಊರಿನ ಯೋಗ ಶಿಕ್ಷಕಿಯಾದ ಶ್ರೀಮತಿ ಸರಸ್ವತಿ ಮಾತಾಜಿಯವರಿಂದ ಪ್ರಾರಂಭವಾಯಿತು. ಯೋಗ ಮಾಡುವ ವಿಧಾನ ಯೋಗದ ಮಹತ್ವ ಹಾಗೂ ಅದರಿಂದಾಗುವ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡುವಲ್ಲಿ ಯೋಗವು ಸದಾಕಾಲ ನಡೆಯುತ್ತಿರಲಿ. ಯೋಗ ಮಾಡಿ ರೋಗವನ್ನು ದೂರ ಮಾಡೋಣ ಹಾಗೂ ಆರೋಗ್ಯವನ್ನು ಕಾಪಾಡೋಣ. ಮನಸ್ಸು ಹಾಗೂ ದೇಹವನ್ನು ಒಂದುಗೂಡಿಸುವ ಕ್ರಿಯೆಯೇ ಯೋಗ. ಈ ನಿಟ್ಟಿನಲ್ಲಿ ಯೋಗಾಭ್ಯಾಸ ನಮ್ಮೆಲ್ಲರ ದಿನನಿತ್ಯದ ಭಾಗವಾಗಲಿ ಎನ್ನುತ್ತಾ... ನಮ್ಮ ನಡೆ ಯೋಗದ ಕಡೆ ಧನ್ಯವಾದಗಳು...... ಇಂತಿ ಪ್ರೀತಿಯ
4ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನನ್ನ ಹೆಸರು ಮಾನ್ವಿ ಹೆಚ್. ಕುಲಾಲ್ ಎಂದು. ನಾನು ಇಂಗ್ಲಿಷ್ ಮಾಧ್ಯಮ ಶಾಲೆ, ಭೋಂದೆಲ್ . ನನಗೆ ಯೋಗ ತುಂಬಾ ಇಷ್ಟ, ನಾನು ಬೆಳಿಗ್ಗೆ ಬೇಗ ಎದ್ದು ದೈನಂದಿನ ಕೆಲಸ ಮುಗಿಸಿ ಯೋಗ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ. ಯೋಗ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಶಾಲೆಯಲ್ಲಿ ಮಕ್ಕಳು ,ವೀಕ್ಷಕರು ಎಲ್ಲರೂ ಒಟ್ಟಿಗೇ ಕುಳಿತು ಯೋಗ ಮಾಡಿದೆವು. ಯೋಗದಲ್ಲಿ ವಿವಿಧ ಬಗೆಯ ಆಸನ , ಪ್ರಾಣಾಯಾಮ, ಎಲ್ಲಾ ತಿಳಿಸಿ ಕೊಟ್ಟರು.
3 ನೇ ತರಗತಿ
ಸೈಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಬೊಂದೆಲ್
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************