-->
ವಿಶ್ವ ಯೋಗ ದಿನಾಚರಣೆ - 2022 ಜಗಲಿ ಮಕ್ಕಳ ವರದಿ : ಸಂಚಿಕೆ - 3

ವಿಶ್ವ ಯೋಗ ದಿನಾಚರಣೆ - 2022 ಜಗಲಿ ಮಕ್ಕಳ ವರದಿ : ಸಂಚಿಕೆ - 3

ಜೂನ್ -21
ವಿಶ್ವ ಯೋಗ ದಿನಾಚರಣೆ - 2022 
ಜಗಲಿ ಮಕ್ಕಳ ವರದಿ
ಸಂಚಿಕೆ - 3

        ತಮ್ಮ ಶಾಲೆಗಳಲ್ಲಿ ಜರುಗಿದ ಯೋಗ ದಿನಾಚರಣೆ ಕುರಿತು ಜಗಲಿಯ ಮಕ್ಕಳು ಬರೆದು ಕಳಿಸಿರುವ ವರದಿಗಳು ಇಲ್ಲಿವೆ..... ಜಗಲಿಯ ಮಕ್ಕಳಲ್ಲಿ ಕಾರ್ಯಕ್ರಮದ ವರದಿಯನ್ನು ಮಾಡುವ ಮತ್ತು ಬರೆಯುವ ಕೌಶಲ್ಯವನ್ನು ಮೂಡಿಸುವ ಪ್ರಯತ್ನ ಇದಾಗಿದೆ....




ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚ ವೈದ್ಯಕೇನಾಂ|
ಯೋಪಾ ಕರೋತ್ತಂ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿರಾನತೋಸ್ಮಿ||
    ನಾನು ಸಾನ್ವಿ ಸಿ ಎಸ್....... ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ್ದು ನಮ್ಮ ಭಾರತ. ಅದು ನಮಗೆ ತುಂಬಾ ಹೆಮ್ಮೆಯ ವಿಚಾರ. ಯೋಗದ ಎಲ್ಲಾ ವಿಧಿ ವಿಧಾನಗಳನ್ನು ತಿಳಿಸಿ ಕೊಟ್ಟದ್ದು ಪತಂಜಲಿ ಮಹರ್ಷಿಗಳು. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನ. ಈ ಪ್ರಯುಕ್ತ ನಮ್ಮ ಶಾಲೆಗೆ ಮೈತ್ರೇಯಿ ಗುರುಕುಲದ ಮಾತೆಯಾದ ಪೂರ್ಣಿಮಾ, ವನಜ ಹಾಗೂ ಪಾರ್ವತಿ ಅವರು ಅತಿಥಿಗಳಾಗಿ ಬಂದಿದ್ದರು. ಅವರು ನಮಗೆ ಯೋಗಾಸನದಿಂದಾಗುವ ಪ್ರಯೋಜನಗಳನ್ನು ತುಂಬಾ ಚೆನ್ನಾಗಿ ಅರ್ಥವಾಗುವಂತೆ ವಿವರಿಸಿದರು. ಅವರು ನಮಗೆ ಯೋಗ ಪ್ರದರ್ಶಿಸಲು ತರಬೇತಿ ನೀಡಿದರು. ಜೊತೆಗೆ ನಮಗೆ ಸತತ ಎರಡು ದಿನಗಳಿಂದ ಯೋಗಾಭ್ಯಾಸಗಳನ್ನು ಅಭ್ಯಾಸ ಮಾಡಿಸಿದರು. ಆ ದಿನ ನಮ್ಮ ಶಾಲೆಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಬಂದಿದ್ದರು. ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಮೀಜಿಯವರು ಯೋಗದ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಸಿದರು. ನಾವು ಒಂದು ದಿನ ಯೋಗ ಮಾಡುವುದಲ್ಲ ಪ್ರತಿದಿನವೂ ಯೋಗವನ್ನು ಅಭ್ಯಾಸ ಮಾಡಬೇಕು. ಅಭ್ಯಾಸ ಮಾಡಿದರೆ ಮಾತ್ರವೇ ನಮಗೆ ಅದರ ಫಲ ಸಿಗುತ್ತದೆ. ಯೋಗದಿಂದ ಮಾನಸಿಕವಾಗಿಯೂ ದೈಹಿಕವಾಗಿಯೂ ಆರೋಗ್ಯವಂತರಾಗಿ ಇರಬಹುದು. ಯೋಗದಿಂದ ಏಕಾಗ್ರತೆಯು ಬರುತ್ತದೆ. ಹೀಗೆ ನಮ್ಮ ಯೋಗ ದಿನ ತುಂಬಾ ಸುಂದರವಾಗಿ ನಡೆಯಿತು.
.............................................. ಸಾನ್ವಿ ಸಿ ಎಸ್ 
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


      ನನ್ನ ಹೆಸರು ಸಾನಿಕ ಭಟ್, ನಾನು ಓದುತ್ತಿರುವ ಸುಳ್ಯದ ರೋಟರಿ ಶಾಲೆಯಲ್ಲಿ ಜೂನ್21ರಂದು ಯೋಗದ ದಿನಾಚರಣೆಯಲ್ಲಿ ನಮ್ಮ ಶಾಲೆಯ ಎಲ್ಲಾ ಮಕ್ಕಳು, ಶಿಕ್ಷಕ , ಶಿಕ್ಷಕಿಯರೊಂದಿಗೆ ನಾನು ಕೂಡ ಭಾಗಿಯಾಗಿರುವುದು ತುಂಬಾ ಸಂತೋಷ ಕೊಟ್ಟಿದೆ. ಯೋಗ ಆರೋಗ್ಯಕೆ ಒಳ್ಳೆಯದು , ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೂಡ ಉಪಯುಕ್ತವಾಗಿರುವ ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿದಿನ ಪಾಲಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 
.............................................. ಸಾನಿಕ ಭಟ್ 
6ನೇ ತರಗತಿ, 
ರೋಟರಿ ಶಾಲೆ ಸುಳ್ಯ  
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************



    ನನ್ನ ಹೆಸರು ಶ್ರೇಯಾ ಆರ್ ನಾಯ್ಕ.... ದಿನಾಂಕ ೨೧-೦೬-೨೦೨೨ ಮಂಗಳವಾರ "ವಿಶ್ವ ಯೋಗ ದಿನಾಚರಣೆ"ಯ ಅಂಗವಾಗಿ ನಮ್ಮ ಶಾಲೆ" ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು" ಇಲ್ಲಿ "ಸಾಮೂಹಿಕ ಯೋಗ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಆಸನಗಳನ್ನು ಪ್ರದರ್ಶಿಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಿ.ವಿಶ್ವೇಶ್ವರ ಅಡಿಗರು ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡಿದರು. ಶಾಲೆಯ ಸಮಸ್ತ ಅಧ್ಯಾಪಕರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
.................................. ಶ್ರೇಯಾ ಆರ್ ನಾಯ್ಕ
8ನೇ ತರಗತಿ 
ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು , ಬೈಂದೂರು ತಾಲೂಕು , ಉಡುಪಿ ಜಿಲ್ಲೆ
******************************************




       ನಮಸ್ತೇ..... ನನ್ನ ಹೆಸರು ಸಾತ್ವಿಕ್ ಗಣೇಶ್... ಎಲ್ಲರಿಗೂ ಯೋಗ ದಿನಾಚರಣೆಯ ಶುಭಾಶಯಗಳು...... ವೇಣೂರು, ಜೂನ್ ೨೧ರಂದು ಯೋಗ ದಿನಾಚರಣೆಯನ್ನು ವೇಣೂರಿನ ನಮ್ಮಸರಕಾರಿ ಪ್ರೌಢಶಾಲೆಯಲ್ಲಿ ಆಚರಿಸಿದೆವು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯ್ತು. ಸುಶೀಲಾ ಮೇಡಂ ಅವರು ಯೋಗ ಮಾಡುವುದರಿಂದ ಆಗುವ ಪ್ರಯೋಜನವನ್ನು ಮತ್ತು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳಿದರು. ದೈಹಿಕ ಶಿಕ್ಷಕರು ಯೋಗವನ್ನು ಮಾಡಿದರು. ಅವರೊಂದಿಗೆ ನಮ್ಮ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿ ಸೂರ್ಯ ನಮಸ್ಕಾರ, ವಜ್ರಾಸನ, ಪದ್ಮಾಸನ ಮೊದಲಾದ ಯೋಗಾಸನವನ್ನು ಮಾಡಿದೆವು .
.................................. ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************



        ಮಕ್ಕಳ ಜಗಲಿ....ನನ್ನ ಹೆಸರು ಲಹರಿ ಜಿ.ಕೆ...... ನಮ್ಮ ಶಾಲೆಯಲ್ಲಿ ಯೋಗ ದಿನಾಚರಣೆ..... ಯೋಗ ದಿನಾಚರಣೆಯಂದು ನಮ್ಮ ಶಾಲೆಯಲ್ಲಿ ನಮ್ಮ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಯೋಗದಿನವನ್ನು ಆಚರಿಸಲಾಯಿತು.... ಈ ಕಾರ್ಯಕ್ರಮದ ನೇತೃತ್ವವನ್ನು ಯೋಗಪಟುವಾದ ಅಶೋಕ್ ಸರ್ ರವರು ವಹಿಸಿದ್ದರು... ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ವಿದ್ಯಾರ್ಥಿಗಳಿಂದ ಯೋಗಾಭ್ಯಾಸವು ನಡೆಯಿತು.... ಪ್ರಾಂಶುಪಾಲರು ಯೋಗ ಮಾಡುವುದರಿಂದ ನಾವು ಅನೇಕ ರೋಗಗಳಿಂದ ಮುಕ್ತರಾಗಬಹುದು ಹಾಗೂ ನೆಮ್ಮದಿಯ , ಆರೋಗ್ಯವಂತ ಜೀವನವನ್ನು ನಡೆಸಬಹುದು ಎಂದು ತಿಳಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಂದ ಯೋಗ ಕಾರ್ಯಕ್ರಮವು ನಡೆಯಿತು.
....................................... ಲಹರಿ ಜಿ.ಕೆ 
೭ನೇತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************




      ನನ್ನ ಹೆಸರು ಗ್ರೀಷ್ಮಾ. ನಾನು 9ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಮ್ಮ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಆಚರಿಸಿದೆವು.  ನಮಗೆ ದೈಹಿಕ ಶಿಕ್ಷಕರಾದ ರಾಜೇಶ್ ಸರ್ ಕುಳಿತು ಮಾಡುವ ಆಸನ, ನಿಂತು ಮಾಡುವ ಆಸನಗಳನ್ನು ಹೇಳಿಕೊಟ್ಟರು. ಶ್ವಾಸಕೋಶದ ತೊಂದರೆಗೆ ಪರಿಹಾರವಾದ ಪ್ರಾಣಾಯಾಮವನ್ನು ನಾವೆಲ್ಲರೂ ಏಕಾಗ್ರತೆಯಿಂದ ಮಾಡಿದೆವು. ಯೋಗದಿಂದಾಗುವ ಉಪಯೋಗದ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸಿದರು. ಅದಲ್ಲದೆ ಯೋಗದೊಟ್ಟಿಗೆ ಪರಿಸರ ಜಾಗೃತಿಯ ಶಿಬಿರವನ್ನು ಆಯೋಜಿಸಿದ್ದರು. ಪರಿಸರವನ್ನು ಉಳಿಸದಿದ್ದರೆ ನಮಗೆ ತೊಂದರೆ ನಾವೆಲ್ಲರೂ ಒಂದಾಗಿ ಮರಗಿಡಗಳನ್ನು ಉಳಿಸಿ ಬೆಳೆಸೋಣ ಎಂದು ಮುಖ್ಯಶಿಕ್ಷಕರು ಹೇಳಿದರು. ನಂತರ ನಾವು ಯೋಗದ ಪ್ರತಿಜ್ಞೆ ಮಾಡಿ ಮಾನವೀಯತೆಗಾಗಿ ಯೋಗ ಕಾರ್ಯಕ್ರಮವನ್ನು ಮುಗಿಸಿ ತರಗತಿಗೆ ಹೊರಟೆವು. ಧನ್ಯವಾದಗಳು.....
.................................................. ಗ್ರೀಷ್ಮಾ 
9ನೇ ತರಗತಿ 
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
******************************************

Ads on article

Advertise in articles 1

advertising articles 2

Advertise under the article