-->
ಹಸಿರು ಯೋಧರು - 2022 : ಸಂಚಿಕೆ - 3

ಹಸಿರು ಯೋಧರು - 2022 : ಸಂಚಿಕೆ - 3

ಮಕ್ಕಳ ಜಗಲಿಯಲ್ಲಿ
ಹಸಿರು ಯೋಧರು - 2022 : ಸಂಚಿಕೆ - 3
ಜೂನ್ - 5
ವಿಶ್ವ ಪರಿಸರ ದಿನದ ನೆನಪಿನಲ್ಲಿ 
ಜಗಲಿಯ ಮಕ್ಕಳು ಗಿಡವನ್ನು ನೆಟ್ಟು ,  ಬೆಳೆಸಿದ ಅನುಭವದ ಮಾತುಗಳು ಇಲ್ಲಿವೆ....


       ನಮಸ್ತೇ , ನಾನು ಸಾತ್ವಿಕ್ ಗಣೇಶ್. ಎಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು. ನಾನು ಅಪ್ಪನ ಜೊತೆಗೂಡಿ ಆರೋಗ್ಯದಾಯಕವಾದ ನೆಲ್ಲಿಕಾಯಿಯ ಗಿಡವನ್ನು ನೆಟ್ಟೆನು. ಅದಕ್ಕೆ ನೀರು , ತರಗೆಲೆ, ಗೊಬ್ಬರ ಎಲ್ಲ ಹಾಕಿದೆವು. ಅಪ್ಪನು ಗಿಡಕ್ಕೆ ಹುಳ ಬರದಂತೆ ಕಹಿಬೇವಿನ ಹಿಂಡಿಯ ನೀರನ್ನು ಸಿಂಪಡಿಸುತ್ತಾರೆ. ಬೇಸಿಗೆ ಕಾಲದಲ್ಲಿ ಗಿಡಕ್ಕೆ ನೀರು ಹಾಕುತ್ತೇನೆ. ಚಿಕ್ಕ ಗಿಡವು ಬೆಳೆದು ಈಗ ಇಷ್ಟು ದೊಡ್ಡದಾಯಿತು. ಗಿಡವು ಬೆಳೆದು ದೊಡ್ದ ದಾಗುವುದನ್ನು ನೋಡುವಾಗ ತುಂಬಾ ಸಂತೋಷ ವಾಗುತ್ತದೆ. ಇನ್ನು ದೊಡ್ಡ ಮರವಾಗಲು ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಪರಿಸರದಲ್ಲಿ ಗಿಡವನ್ನು ಬೆಳೆಸಿ ಶುದ್ಧ ಗಾಳಿಯು ಬರುವಂತೆ ಮಾಡೋಣ.
......................................... ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು , ವೇಣೂರು 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************               



      ಹಸಿರು ಯೋಧರು 2022...... ನಾನು ಶಿಶಿರ್. ವಿಶ್ವ ಪರಿಸರ ದಿನದ ಶುಭಾಶಯಗಳು. ಕಳೆದ ವರ್ಷ ಹಸಿರು ಯೋಧರು ಅಂಕಣದಲ್ಲಿ ನಾವು ನೆಟ್ಟು ಬೆಳೆಸಿದ ಹೊಂಗೆ ಗಿಡ ಹಾಗು 30 ಬಗೆಯ ಸಸ್ಯದ ಬಗ್ಗೆ ಬರೆದಿದ್ದೆ. ನಾವು ಹೆಚ್ಚಾಗಿ ಹಣ್ಣಿನ ಗಿಡಗಳನ್ನು ನೆಟ್ಟಿರುವುದರಿಂದ ಬೇಸಿಗೆಯಲ್ಲಿ ಅದಕ್ಕೆ ನೀರುಣಿಸಿ ಕೆಲವು ಗಿಡಗಳಿಗೆ ಗೊಬ್ಬರ ಹಾಕಿದ್ದೇವೆ. ಬೇಸಿಗೆಯಲ್ಲಿ ನಮ್ಮ ಮಾವಿನ ಹಣ್ಣಿನ ಮರದಲ್ಲಿ ತುಂಬಾ ಹಣ್ಣುಗಳಾಗಿವೆ . ನಮ್ಮ ಕೆಂಪಲಸಿನ ಮರದಲ್ಲಿ ಹೊಸದಾಗಿ ಆರು ಹಲಸಿನ ಹಣ್ಣುಗಳಾಗಿವೆ. ಅದಲ್ಲದೆ ಅನನಾಸು, ಗೇರು ಹಣ್ಣು, ಪೇರಳೆ , ಪಪ್ಪಾಯ, ನಕ್ಷತ್ರ ಹಣ್ಣುಗಳು ಕೂಡ ಆಗಿವೆ. ಈಗ ಮಳೆ ಪ್ರಾರಂಭವಾಗಿರುವುದರಿಂದ ನಮ್ಮ ಪರಿಸರ ಹಚ್ಚ ಹಸುರಾಗಿದೆ. ಇಂತಹ ಪರಿಸರವನ್ನು ದಯಪಾಲಿಸಿದ ಪ್ರಕೃತಿ ಮಾತೆಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************             



       ನಾನು ಸಾನ್ವಿ ಸಿ. ಎಸ್........ ಪರಿಸರ ಎಂದರೆ ಸುತ್ತಮುತ್ತಲಿನ ಪ್ರಕೃತಿ. ಪ್ರಕೃತಿಯು ಶುದ್ಧವಾಗಿರಬೇಕಾದರೆ ನಾವು ಗಿಡಗಳನ್ನು ನೆಡಬೇಕು. ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದರೆ ವಾತಾವರಣವು ಶುದ್ಧವಾಗಿರುತ್ತದೆ. ಅವುಗಳನ್ನು ನೆಟ್ಟರೆ , ಅವುಗಳ ಪೋಷಣೆಯನ್ನು ಮಾಡಬೇಕು. ಗಿಡಗಳಲ್ಲಿ ಆಮ್ಲಜನಕವು ಉತ್ಪತ್ತಿಯಾಗುತ್ತದೆ. ಆಮ್ಲಜನಕವು ನಮಗೆ ಉಸಿರಾಡಲು ಅತ್ಯಗತ್ಯ. ಅದು ಇಲ್ಲದಿದ್ದರೆ ನಮಗೆ ಜೀವಿಸಲು ಸಾಧ್ಯವಿಲ್ಲ. 
           ನಾನು ಕಳೆದ ವರ್ಷ ಮಾವಿನ ಗಿಡವನ್ನು ನೆಟ್ಟು ಬೆಳೆಸಿದ್ದೆ. ನಾನು ಆಗಾಗ ಅದನ್ನು ಗಮನಿಸುತ್ತಿದ್ದೆ. ಆ ಗಿಡಕ್ಕೆ ನೀರು, ಬೂದಿ, ತರಗೆಲೆ ಇತ್ಯಾದಿಗಳನ್ನು ಹಾಕುತ್ತಿದ್ದೆ. ಈಗ ಆ ಗಿಡ ನನ್ನಷ್ಟೇ ಎತ್ತರಕ್ಕೆ ಬೆಳೆದಿದೆ. 
             ಯೋಧರು ನಮ್ಮ ದೇಶವನ್ನು ಹೇಗೆ ಕಾಯುತ್ತಾರೆ ಹಾಗೆ ನಾವು ಪರಿಸರ ಸಂರಕ್ಷಣೆ ಮಾಡಿ ದೇಶವನ್ನು ರಕ್ಷಿಸೋಣ.
.............................................. ಸಾನ್ವಿ ಸಿ ಎಸ್ 5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************               

     ನಾನು ಋತ್ವಿಕ್ ಮೊಳೆಯಾರ್.... ನಾನೊಂದು ದಿನ ಒಂದು ಗುಬ್ಬಚ್ಚಿಯನ್ನು ಕಂಡೆ. ಸ್ವಲ್ಪ ಸಮಯದಲ್ಲಿ ಒಂದು ಚಿಟ್ಟೆಯನ್ನು ಕಂಡೆ. ಅವೆಲ್ಲವೂ ಎಲ್ಲಿ ಕ್ಷಣ ಹೊತ್ತು ಕುಳಿತು ಹೋಗುತ್ತಿದ್ದವು. ಗೊತ್ತೇ?. ಅಂದು ನಾನು ನೆಟ್ಟು ಬೆಳೆಸಿದ ಬಾಳೆ ಗಿಡದಲ್ಲಿ. ಆ ಕ್ಷಣ ನನಗೆ ಬಹಳ ಆನಂದವನ್ನು ತಂದಿತು. ಇಂದು ಬಾಳೆ ಗಿಡದಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ ಆಶ್ರಯವನ್ನು ಪಡೆದಿದೆ. ನನ್ನಿಂದ ಆದಷ್ಟು ಪ್ರಕೃತಿಗೆ ಪೂರಕವಾದ ಕೆಲಸಕ್ಕೆ ಗಿಡ ನೆಡುವುದೇ ಸರಿ ಎಂದು ಈ ವರ್ಷದ ವಿಶ್ವ ಪರಿಸರ ದಿನದಂದು ಗೇರು, ಹಲಸು, ನೆಲ್ಲಿ ಗಿಡಗಳನ್ನು ನೆಟ್ಟಿದ್ದೇನೆ. ನನಗೆ ಗುಬ್ಬಚ್ಚಿ ಗೂಡೇ ಹೆಚ್ಚು ಸಸಿಗಳನ್ನು ನೆಡಲು ಸ್ಪೂರ್ತಿಯಾಗಿದೆ. ಧನ್ಯವಾದಗಳು  
................................. ಋತ್ವಿಕ್ ಮೊಳೆಯಾರ್ 
5ನೇ ತರಗತಿ
ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ ನರಿಮೊಗರು , ಪುತ್ತೂರು, ದ.ಕ.ಜಿಲ್ಲೆ
*******************************************     

          

Ads on article

Advertise in articles 1

advertising articles 2

Advertise under the article