-->
ಹಸಿರು ಯೋಧರು - 2022 : ಸಂಚಿಕೆ - 2

ಹಸಿರು ಯೋಧರು - 2022 : ಸಂಚಿಕೆ - 2

ಮಕ್ಕಳ ಜಗಲಿಯಲ್ಲಿ
ಹಸಿರು ಯೋಧರು - 2022 : ಸಂಚಿಕೆ - 2
ಜೂನ್ - 5
ವಿಶ್ವ ಪರಿಸರ ದಿನದ ನೆನಪಿನಲ್ಲಿ 
ಜಗಲಿಯ ಮಕ್ಕಳು ಗಿಡವನ್ನು ನೆಟ್ಟು , ಬೆಳೆಸಿದ ಅನುಭವದ ಮಾತುಗಳು ಇಲ್ಲಿವೆ....




     ನಾನು ಸಾನಿಕ ಭಟ್ , ನಾನು ಕಳೆದ ವರ್ಷ ನಮ್ಮ ಮನೆಯ ಅಂಗಳದ ಬದಿಯಲ್ಲಿ ಒಂದು ಬಾಳೆ ಗಿಡ ನೆಟ್ಟು ಅದಕ್ಕೆ ಸ್ವಲ್ಪ ಗೊಬ್ಬರ ಹಾಕಿ, ಪ್ರತಿ ದಿನ ನೀರು ಹಾಕಿ ಬೆಳೆಸಿದೆ. ನೋಡ ನೋಡುತ್ತ ಬಾಳೆ ಗಿಡ ದೊಡ್ಡದಾಗಿ ಗೊನೆ ಹಾಕಿದಾಗ ನನಿಗೆ ಎಲ್ಲಿಲ್ಲದ ಖುಷಿ. ಮನೆಗೆ ಬಂದವರಿಗೆಲ್ಲಾ ತೋರಿಸುತ್ತಾ ನಾನು ನೆಟ್ಟದು ಎಂದು ಹೆಮ್ಮೆಯಿಂದ ಹೇಳಿದೆ. ಕೊನೆಗೆ ಬಾಳೆಗೊನೆ ಬೆಳೆದಾಗ ಅಪ್ಪ ಅದನ್ನು ಕಡಿದರು ಅದರಲ್ಲಿ ಸಿಕ್ಕಿದ ಹೂವಿನ ಪಲ್ಯ, ಬಾಳೆದಂಡಿನಲ್ಲಿ ಸಾಂಬಾರ್, ಪಲ್ಯ, ಬಾಳೆ ಕಾಯಿಯಲ್ಲಿ ಚಿಪ್ಸ್ ಮತ್ತು ಸ್ವಲ್ಪ ಬಾಳೆ ಕಾಯಿ ಹಣ್ಣು ಮಾಡಿ ಅಪ್ಪ, ಅಮ್ಮ, ತಂಗಿ, ಅಜ್ಜ, ಅಜ್ಜಿ, ದೊಡ್ಡಪ್ಪ ,ದೊಡ್ಡಮ್ಮ, ಅತ್ತೆಯವರೊಂದಿಗೆ ಸೇರಿಕೊಂಡು ತಿಂದಾಗ ಆಗ ನನಗೆ ಆದ ಸಂತೋಷ ಇದೆಯಲ್ಲಾ ಹೇಳಲು ಅಸಾಧ್ಯ.
.............................................. ಸಾನಿಕ ಭಟ್ 
6ನೇ ತರಗತಿ
ರೋಟರಿ ಶಾಲೆ ಸುಳ್ಯ.       
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ     
*******************************************               




      ಮಕ್ಕಳ ಜಗಲಿಯ ಬಳಗಕ್ಕೆ ಆತ್ಮೀಯ ನಮನಗಳು... ನಾನು ಪೂರ್ತಿ.  ಮೊದಲನೆಯದಾಗಿ ಎಲ್ಲಾ ಪರಿಸರದ ಪ್ರೀತಿಪಾತ್ರರಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು... ನಾನು ನನ್ನ ಕಳೆದ ವರ್ಷದ ಹುಟ್ಟು ಹಬ್ಬದಂದು "ಬ್ರಹ್ಮ ಕಮಲ" ಹೂವಿನ ಗಿಡ ನೆಟ್ಟಿದ್ದೆ. ಮೊದಮೊದಲು ನನಗನಿಸುತ್ತಿತ್ತು ಇದು ಎಲೆಯ ರೀತಿ ಇದೆ ಇದು ಚಿಗುರಲು ಬಹಳ ವರ್ಷಗಟ್ಟಲೆ ಆಗಬಹುದೆಂದು. ಆದರೂ ಕೂಡಾ ದಿನಾಲೂ ನೀರು, ಗೊಬ್ಬರ ಮಿಶ್ರಿತ ಮಣ್ಣು ಅದರ ಬುಡಕ್ಕೆ ಹಾಕಿ ಅದನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದೆ. ದಿನ ಕಳೆದಂತೆ ಅದು ನಿಧಾನವಾಗಿ ಚಿಗುರಲಾರಂಭಿಸಿತು. ಒಮ್ಮೆ ನನಗೆ ಆ ಗಿಡದ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು...! ಯಾಕಂದ್ರೆ ಆ ಗಿಡ ಮಾತ್ರ ತುಂಬಾ ದೊಡ್ಡ ಗಾತ್ರದಲ್ಲಿ ಇತ್ತು.. ಆದರೆ ಅದರಲ್ಲಿ "ಹೂ" ಆಗ್ತಾನೆ ಇರ್ಲಿಲ್ಲ.. ಮನೆಯವರೆಲ್ಲರೂ ಆ ಗಿಡ ಇನ್ನು ಹೂ ಬಿಡಲ್ಲ ಅಂತ ಹೇಳ್ತಿದ್ರು..! ಆಗ ನಂಗೆ ತುಂಬಾ ಬೇಸರ ಆಗ್ತಿತ್ತು... ಆದ್ರೆ ನಾನು ಮಾತ್ರ ಆ ಗಿಡ ಯಾವತ್ತಾದರೂ ಒಂದು ದಿನ ಹೂ ಬಿಡುತ್ತೆ ಅಂತ ದೃಢ ಸಂಕಲ್ಪ ಇಟ್ಟಿದ್ದೆ. ದಿನಗಳು ಕಳೆದಂತೆ ಅದರಲ್ಲಿ ಒಂದು ಪುಟ್ಟ ಮೊಗ್ಗು ಹುಟ್ಟಿತು... ನನಗಂತೂ ಬಹಳ ಬಹಳ ಖುಷಿ ಆಯ್ತು.. ಹೀಗೆ ಆ ಮೊಗ್ಗು ದೊಡ್ಡದಾಗುತ್ತಾ ಬಂತು... ನಾನು ರಾತ್ರಿ ಕಿಟಕಿ ಬಳಿ ಎಂದಿನಂತೆ ಓದುತ್ತಾ ಇರುವಾಗ ಕಿಟಕಿ ಹತ್ತಿರ "ಘಮ ಘಮಿಸುವ" ಸುವಾಸನೆ..!!!ಇದೆಲ್ಲಿಂದ ಬಂತು ಎಂದು ಕಿಟಕಿ ಹತ್ತಿರ ಇಣುಕಿ "ಟಾರ್ಚ್ ಲೈಟ್" ಹಾಕಿ ನೋಡಿದಾಗ ನನ್ನ ಗಿಡದಲ್ಲಿ *ಬ್ರಹ್ಮ ಕಮಲ* ಹೂ ಅರಳಿತ್ತು. ನನಗಂತೂ ತುಂಬಾ ತುಂಬಾ ಖುಶಿಯಾಯ್ತು... ಇನ್ನೊಂದು ಖುಷಿಯ ಸಂಗತಿ ಎಂದರೆ ಈ ಬ್ರಹ್ಮ ಕಮಲ ಹೂ ವಿಶ್ವ ಪರಿಸರ ದಿನದಂದು ಅರಳಿರುವುದು...ಇದೊಂದು ಪ್ರಕೃತಿ ಮಾತೆಯ ಪ್ರೀತಿಯ ಕೊಡುಗೆಯೇ ಸರಿ..... ವಂದನೆಗಳು...
................................................... ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕು.
*******************************************


    ಎಲ್ಲರಿಗೂ ನಮಸ್ಕಾರ , ನಾನು ಧನ್ವಿ ರೈ ಪಾಣಾಜೆ...... ನಮ್ಮದು ಕರಾವಳಿಯ ಹಳ್ಳಿ ಪ್ರದೇಶ. ನಮ್ಮ ಜೀವನದ ಅನಿವಾರ್ಯತೆ ಗೋಸ್ಕರ ನಾವು ತೆಂಗು, ಕಂಗು, ಬಾಳೆ, ಮೊದಲಾದವುಗಳನ್ನು ಬೆಳೆಸುತ್ತಿದ್ದೇವೆ. ಇವು ನಮ್ಮ ಜೀವನಾಧಾರವಾಗಿದೆ. 
    ನಾವು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನೆಟ್ಟ ಕಂಗಿನ ಸಸಿಗಳು ಇವು. ಅದಕ್ಕೆ ಸರಿಯಾದ ಸಮಯಕ್ಕೆ ನೀರುಣಿಸಿ, ಅದಕ್ಕೆ ಬೇಕಾದ ಹಟ್ಟಿ ಗೊಬ್ಬರ, ರಾಸಾಯನಿಕ ಗೊಬ್ಬರ ವನ್ನು ಕಾಲ ಕಾಲಕ್ಕೆ ಎಲ್ಲರೂ ಸೇರಿ ನೀಡುತ್ತಿದ್ದೇವೆ.
   ಸಾಧಾರಣವಾಗಿ ಕಂಗಿನ ಸಸಿಗಳು 3 ರಿಂದ 4 ವರ್ಷಗಳಲ್ಲಿ ಫಸಲು ಕೊಡುತ್ತದೆ. ಇದನ್ನು ನಾವು ಶ್ರಮಪಟ್ಟು ಮಾಡಿದರೆ ಅದರ ಬೆಳವಣಿಗೆ ಚೆನ್ನಾಗಿ ಬಂದು, ಫಸಲು ಚೆನ್ನಾಗಿ ಬರುತ್ತದೆ. 
      ಒಟ್ಟಾರೆ ಯಾಗಿ ಹೇಳುವುದಾದರೆ ಗಿಡ ಮರಗಳನ್ನೆಲ್ಲ ಬೆಳೆಸುವುದಕ್ಕೆ ನಾವು ಪ್ರಾಮುಖ್ಯತೆಯನ್ನು ನೀಡಬೇಕು. ಯಾವುದೇ ಗಿಡ ಮರ ವಾಗಿ ಬೆಳೆದಾಗ, ಅದರದ್ದೇ ಆದ ವಿಶೇಷತೆ ಯನ್ನು ಮನುಜನಿಗೆ ಪರಿಚಯಿಸುತ್ತದೆ.
*ಗಿಡ ಮರ ನೆಡಿ, ಆರೋಗ್ಯಕರ ಜೀವನ ರೆಡಿ*
   ವಂದನೆಗಳು 
........................................... ಧನ್ವಿ ರೈ ಕೋಟೆ 
7ನೇ ತರಗತಿ 
ವಿವೇಕ ಹಿರಿಯ ಪ್ರಾಥಮಿಕ ಶಾಲೆ 
ಪಾಣಾಜೆ ಪುತ್ತೂರು , 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


     ನಾನು ಬಿಂದುಶ್ರೀ. ಜೂನ್ 5ರಂದು ವಿಶ್ವ ಪರಿಸರ ದಿನ. ಆ ದಿನ ಗಿಡಗಳನ್ನು ನೆಟ್ಟು ಅಷ್ಟೇ ಅಲ್ಲ ಪ್ರತಿ ದಿನ ಅದರ ಪಾಲನ, ಪೋಷಣೆ ಮಾಡಬೇಕು. ನಾನು 2ನೇ ತರಗತಿಯಲ್ಲಿ ಇರುವಾಗ ಒಂದು ಗಿಡ ನೆಟ್ಟಿದ್ದೆ. ಆ ಗಿಡ ಈಗ ಮರವಾಗಿ ನಮಗೆ ನೆರಳು ಕೊಡುತ್ತಾ ಇದೆ. ಹಾಗೂ ಹಕ್ಕಿಗಳಿಗೂ ವಾಸಸ್ಥಾನವಾಗಿದೆ. ಅದನ್ನು ನೋಡಿದಾಗ ನನಗೆ ಬಾಲ್ಯದಲ್ಲಿ ಇದ್ದ ನೆನಪುಗಳು ಕಣ್ಣ ಮುಂದೆ ಬರುತ್ತವೆ. ನಾನು ನನ್ನ ಗೆಳಯರ ಜೊತೆ ಸೇರಿ ಶಾಲೆಯಲ್ಲಿ ಗಿಡಗಳನ್ನು ನೆಟ್ಟಿದ್ದೇನೆ. ಹೀಗೆ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ವನ್ನು ಹಚ್ಚ ಹರಿಸಿನಿಂದ ಕಂಗೊಳಿಸುವಂತೆ ಮಾಡೋಣ.
............................................. ಕೆ ಬಿಂದುಶ್ರೀ   
ಪ್ರಥಮ ಪಿಯುಸಿ
ವಿವೇಕಾನಂದ ಕಾಲೇಜು ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


      ನಾನು ಕಾರುಣ್ಯ ಎನ್. ಕಳೆದ ವರ್ಷ ಮಕ್ಕಳ ಜಗಲಿಯ ಹಸಿರು ಯೋಧರು ಎಂಬ ವಿಶ್ವ ಪರಿಸರ ದಿನವನ್ನು ನಾನು ಕಹಿಬೇವಿನ ಗಿಡವನ್ನು ನೆಡುವುದರೊಂದಿಗೆ ಅದನ್ನು ಸಾಕಿ ಸಲಹಿ ನೀರನ್ನು ಹಾಕುತ್ತಾ ಇದ್ದೇನೆ. ಅದು ಹೆಮ್ಮರವಾಗುವಂತೆ ಸಾಕುತ್ತಿದ್ದೇನೆ. ಪ್ರತಿವರ್ಷವೂ ಗಿಡ ನೆಡುವ ಮೂಲಕ ನಮ್ಮೆಲ್ಲರ ಉಸಿರಿಗಾಗಿ ಪರಿಸರವನ್ನು ರಕ್ಷಿಸೋಣ. 
.............................................ಕಾರುಣ್ಯ ಎನ್ 
4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



     ನಾನು ಶ್ರೇಯಾ.... ನಾನು ಒಂದು ಸಣ್ಣ ಗುಲಾಬಿ ಗಿಡವನ್ನು ನೆಟ್ಟಿದ್ದೆ. ಅದಕ್ಕೆ ದಿನಾಲೂ ನೀರನ್ನು ಹಾಕಿ ಸಾಕಿ ಸಲಹುತ್ತಿದ್ದೆ. ನಮ್ಮ ತೋಟಕ್ಕೆ ಗೊಬ್ಬರ ಹಾಕುವಾಗ ನಾನು ನನ್ನ ಗಿಡಕ್ಕೆ ಹಾಕುತ್ತಿದ್ದೆ. ತಾಯಿ ಸಣ್ಣ ಮಗುವನ್ನು ಹೇಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾಳೆ ಹಾಗೆಯೇ ನಾವು ಪ್ರೀತಿಯಿಂದ ಗಿಡವನ್ನು ಪೋಷಿಸಬೇಕು. ಹಾಗೆಯೇ ಗಿಡವನ್ನು ಸಾಕಿ ನನ್ನ ಗಿಡ ಈಗ ಸುಂದರವಾದ ಹೂವುಗಳನ್ನು ಬಿಟ್ಟಿದೆ. ಆ ಹೂವುಗಳನ್ನು ನೋಡಿ ನನಗೆ ತುಂಬಾ ಖುಷಿಯಾಯಿತು. ಆ ಗಿಡವನ್ನು ನಾನು ಇಷ್ಟು ದಿವಸ ಸಾಕಿದಕ್ಕೆ ಸಾರ್ಥಕವಾಯಿತೆನಿಸಿತು. ನಾವು ನಮ್ಮ ಕೈಯಲ್ಲಿ ಆದಷ್ಟು ಗಿಡವನ್ನು ನೆಟ್ಟರೆ ನಮ್ಮ ಪರಿಸರವು ಸದಾ ಹಸಿರಿನಿಂದ ಕಂಗೊಳಿಸುತ್ತದೆ. ನಮ್ಮ ಈ ಸುಂದರವಾದ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮ ಕೈಯಲ್ಲಿದೆ.
................................................... ಶ್ರೇಯ 
10ನೇ ತರಗತಿ 
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
****************************************

Ads on article

Advertise in articles 1

advertising articles 2

Advertise under the article