-->
ಪ್ರೀತಿಯ ಪುಸ್ತಕ : ಸಂಚಿಕೆ - 10

ಪ್ರೀತಿಯ ಪುಸ್ತಕ : ಸಂಚಿಕೆ - 10

ಪ್ರೀತಿಯ ಪುಸ್ತಕ
ಸಂಚಿಕೆ - 10

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

                          ನವಿಲೂರ ಸಂತೆ 
           ಪ್ರೀತಿಯ ಮಕ್ಕಳೇ....... ನೀವು ಸಂತೆಗೆ ಹೋಗಿರುತ್ತೀರಲ್ಲಾ.. ನಿಮ್ಮ ಮನಸ್ಸಿನಲ್ಲಿ ಅದರದ್ದು ಒಂದು ಚಿತ್ರ ಇರಬಹುದು. ಅಂತಹ ಒಂದು ಸಂತೆಯ ಚಿತ್ರಣ ನವಿಲೂರ ಸಂತೆಯಲ್ಲಿ ನೀವು ನೋಡಬಹುದು. ಅತಿ ಕಡಿಮೆ ಬರಹ ಇದೆ. ಚಿತ್ರಗಳೇ ಮಾತಾಡುತ್ತವೆ. ಕೊನೆಯ ಪುಟದಲ್ಲಿ ನೀವು ನೋಡಿದ ಸಂತೆಯ ಚಿತ್ರ ಮಾಡುವುದಕ್ಕೂ ಒಂದು ಪುಟ ಇದೆ. ಸಂತೆಯಲ್ಲಿ ಸಮಾಜದ ಬಹಳ ಹಿನ್ನೆಲೆಯ ಜನರನ್ನು ನೋಡುತ್ತೇವೆ. ದಿನನಿತ್ಯದ ಪದಾರ್ಥಗಳನ್ನೂ ನೋಡುತ್ತೇವೆ. ಬಹಳ ಲವಲವಿಕೆಯ ಜಾಗ ಅದು. ಎಂತಹಾ ದೊಡ್ಡ ದೊಡ್ಡ ಮಾಲುಗಳು ಬಂದಿವೆ, ಆದರೆ ಸಂತೆಯ ವಾತಾವರಣದ ಚಂದವೇ ಬೇರೆ. ನನಗೆ ಈಗಲೂ ಚಿಕ್ಕವಳಿದ್ದಾಗ ಸಂತೆ ತಿರುಗಾಡಿದ ನೆನಪಿದೆ. ಈಗಲೂ ಬೇರೆ ಊರಿಗೆ ಕೆಲಸದ ಮೇಲೆ ಹೋದಾಗ, ಸಂತೆ ಸುತ್ತುವ ಅವಕಾಶ ಬಿಡುವುದಿಲ್ಲ. ಆಯಾಯ ಊರಿನ ವಿಶೇಷತೆಗಳು ಸಂತೆಯಲ್ಲಿ ಕಾಣಸಿಗುತ್ತವೆ. 
        ಲೇಖಕಿ ವನಿತಾ ಅವರು ಕನ್ನಡದಲ್ಲಿ ಸಾಕಷ್ಟು ಮಕ್ಕಳ ಪುಸ್ತಕಗಳ ಹುಡುಕಾಟದಲ್ಲಿ ಇದ್ದಾಗ, ನಮ್ಮ ಸ್ಥಳೀಯ ಭಾಷೆಯಲ್ಲಿ ಮಕ್ಕಳಿಗಾಗಿ ಪುಸ್ತಕ ಬೇಕು ಅನಿಸಿತು. ಅಂತೆಯೇ ಈ ‘ಎಲ್ಲರ ಪುಸ್ತಕ’ ಪ್ರಕಾಶನ ಹುಟ್ಟಿಕೊಂಡಿತು. ಈ ಪುಸ್ತಕಕ್ಕೆ ಅನೇಕರು ಹಣದ ನೆರವು ನೀಡಿ ಹೊರತಂದಿದ್ದಾರೆ. ಒಳ್ಳೆಯ ಪ್ರಯತ್ನ ಅಲ್ಲವೇ...? ನೀವೂ ಓದಿ ನೋಡಿ. ಸಂತೆಗೆ ಹೋಗಿಲ್ಲದೇ ಇದ್ದರೆ ಹೋಗಿ, ಸಂತೆಯ ಚಿತ್ರ ಮಾಡಿ.
ಲೇಖಕರು: ವನಿತಾ ಅಣ್ಣಯ್ಯ ಯಾಜಿ.
ಪ್ರಕಾಶಕರು: ಎಲ್ಲರ ಪುಸ್ತಕ
ಫೋನ್ : 9141184535
ಬೆಲೆ: ರೂ.65
ಮೂರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. 
........................................ ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************

Ads on article

Advertise in articles 1

advertising articles 2

Advertise under the article