-->
ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ : ಸಂಚಿಕೆ - 2

ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ : ಸಂಚಿಕೆ - 2

ಜೂನ್ -21
ವಿಶ್ವ ಯೋಗ ದಿನಾಚರಣೆ - 2022 
ಜಗಲಿ ಮಕ್ಕಳ ವರದಿ
ಸಂಚಿಕೆ - 2

        ತಮ್ಮ ಶಾಲೆಗಳಲ್ಲಿ ಜರುಗಿದ ಯೋಗ ದಿನಾಚರಣೆ ಕುರಿತು ಜಗಲಿಯ ಮಕ್ಕಳು ಬರೆದು ಕಳಿಸಿರುವ ವರದಿಗಳು ಇಲ್ಲಿವೆ..... ಜಗಲಿಯ ಮಕ್ಕಳಲ್ಲಿ ಕಾರ್ಯಕ್ರಮದ ವರದಿಯನ್ನು ಮಾಡುವ ಮತ್ತು ಬರೆಯುವ ಕೌಶಲ್ಯವನ್ನು ಮೂಡಿಸುವ ಪ್ರಯತ್ನ ಇದಾಗಿದೆ....



        ನಾನು ಸಿಂಚನಾ ಹೆಗ್ಡೆ. ಉತ್ತಮ ಆರೋಗ್ಯಯುತವಾದ ದೇಹ, ಮನಸುಗಳನ್ನು ಗಳಿಸಿಕೊಳ್ಳಲು ನಮಗಿರುವ ಅತ್ಯುತ್ತಮ ಸಾಧನವೆಂದರೆ ಯೋಗ, ಪ್ರಾಣಾಯಾಮ , ಧ್ಯಾನ , ಇಂತಹ ಯೋಗ ಸಾಧನೆಯನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಆರೋಗ್ಯಕರ ಜೀವನಶೈಲಿ ರೂಪುಗೊಳ್ಳುತ್ತದೆ. ಆದ ಕಾರಣ ಯೋಗಕ್ಕಾಗಿ ಒಂದು ದಿನವನ್ನು ಮೀಸಲಿಟ್ಟು, ಅದರ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬರು ಯೋಗವನ್ನು ತಮ್ಮ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಲಿ ಎಂಬ ಸದುದ್ಧೇಶದಿಂದ ಯೋಗ ದಿನಾಚರಣೆಯನ್ನು ಆಚರಿಸಲು ಕರೆನೀಡಲಾಗಿದೆ. ಇಂದು ನಮ್ಮ ಪ್ರೌಢಶಾಲೆಯಲ್ಲಿಯೂ ಕೂಡ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯಾಧ್ಯಾಪಕರಾದ ಶ್ರೀ ಎಸ್. ಎಸ್. ಪಮ್ಮಾರ ಮತ್ತು ಸಹ ಶಿಕ್ಷಕರಾದ ಶ್ರೀ ಜನಾರ್ದನ ಸಿ ಹಾಗೂ ಶ್ರೀಮತಿ ವಾಣಿ ಹೆಗಡೆ ಇವರು ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವದ ಕುರಿತು ತಿಳಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ನಾವೆಲ್ಲಾ ಯೋಗಾಸನ, ಪ್ರಾಣಾಯಾಮಗಳನ್ನು ಮಾಡಿದೆವು. ಪ್ರತಿನಿತ್ಯವು ಇವುಗಳನ್ನು ಕ್ರಮಬದ್ಧವಾಗಿ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಯಿತು. ಯೋಗದಿನ ಒಂದು ಸುಯೋಗದ ನೆನಪಾಗಿ ಉಳಿಯುವಂತೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು.
.......................................... ಸಿಂಚನ ಎಂ ಹೆಗಡೆ 
9ನೇ ತರಗತಿ
ಎಂ.ಜಿ.ಸಿ.ಎಂ. ಪ್ರೌಢಶಾಲೆ ಬಿದ್ರಕಾನ 
ಸಿದ್ದಾಪುರ , ಉತ್ತರ ಕನ್ನಡ..
*******************************************


 

         ನಾನು ರೇಷ್ಮಾ 10ನೇ ತರಗತಿ..... ಮಾದರಿ ಸರಕಾರಿ ಪ್ರೌಢ ಶಾಲೆ ವಿಟೢ ದಲ್ಲಿ ನಡೆದ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳೂ , ಶಿಕ್ಷಕರು , ಎಸ್. ಡಿ.ಎಂ.ಸಿ ಅಧ್ಯಕ್ಷರು ಭಾಗವಹಿಸಿದ್ದರು. ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳಿಂದ ಆಶಯಗೀತೆ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಾಯ ಪೈ ಸರ್ ಅವರು ವಹಿಸಿಕೊಂಡಿದ್ದರು. ಭಾರತೀಯರಾದ ನಮಗೆಲ್ಲರಿಗೂ ಯೋಗ ದಿನವು ಅತ್ಯಂತ ಮಹತ್ವವಾದದು. ಎಲ್ಲರೂ ಸಡಗರದಿಂದ ಆಚರಿಸುವ ಸುದಿನ. ಈ ದಿನವನ್ನು ನಾವೆಲ್ಲಾರೂ ಸಂತಸದಿಂದ ಆಚರಿಸಬೇಕು. ಆಗ ನಮಗೆ ಯಾವುದೇ ತೊಂದರೆ ಬರುವುದಿಲ್ಲ ಆರೋಗ್ಯಕ್ಕೂ ಒಳ್ಳೆಯದು" ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳು ಹೇಳಿದರು. ಅನಂತರ ಮುಖ್ಯ ಶಿಕ್ಷಕರು ಯೋಗ ದಿನದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಯೋಗದ ಬಗ್ಗೆ ಪ್ರಮಾಣ ಮಾಡಲಾಯಿತು. ಅಧ್ಯಕ್ಷರಿಂದ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ವಿದ್ಯಾಶಂಕರ್ ಸರ್ ಅವರು ಯೋಗ ಮಾಡುವುದನ್ನು ಹೇಳಿಕೊಟ್ಟರು. ಆದಮೇಲೆ ಶಿಕ್ಷಕ ಸದಾಶಿವ ಸರ್ ಅವರು ಸ್ವಾಗತಿಸಿದರು. ಶಿಕ್ಷಕ ನಿರಂಜನ್ ಸರ್ ಅವರು ವಂದಿಸಿದರು. ಅನಂತರ ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು...
....................................................... ರೇಷ್ಮಾ 
10ನೇ ತರಗತಿ 
ದ.ಕ.ಜಿ.ಪಂ. ಮಾದರಿ ಪ್ರೌಢ ಶಾಲೆ ವಿಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




      ಮಕ್ಕಳ ಜಗಲಿ ಗೆ ವಂದನೆಗಳನ್ನು ಸಲ್ಲಿಸುವ ನಾನು ನಿಮ್ಮ ಧನ್ವಿ ರೈ ಪಾಣಾಜೆ...... 2015 ರಿಂದ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಯನ್ನು ಆಚರಿಸುತ್ತಾ ಬರುತ್ತೇವೆ. ಈ ಯೋಗ ದಿನಾಚರಣೆ ಯನ್ನು ನಾವು ನಮ್ಮ ಶಾಲೆ ಯಲ್ಲೂ ಆಚರಿಸಿದ್ದೇವೆ. ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ಯವರ ಮಾರ್ಗದರ್ಶನ ದಂತೆ , ಶಾಲೆಯಲ್ಲಿ ಬಹಳ ಅಚ್ಚುಕಟ್ಟಾಗಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅಧ್ಯಾಪಿಕೆಯರೂ ಸೇರಿ ಯೋಗವನ್ನು ಮಾಡಿದೆವು. ಇದೊಂದು ಉತ್ತಮ ರೀತಿಯಲ್ಲಿ ಉಲ್ಲಾಸದ ವಾತಾವರಣವನ್ನು ನಿರ್ಮಾಣ ಮಾಡಿತು. ಎಲ್ಲಾ ಮಕ್ಕಳು ಭಾಗವಹಿಸುವುದರ ಮೂಲಕ ನಮ್ಮ ಶರೀರಕ್ಕೆ , ಆರೋಗ್ಯಕರ ಜೀವನಕ್ಕೆ , ಮಕ್ಕಳ ಬೆಳವಣಿಗೆಗೆ , ಮಾನಸಿಕ ಸಮತೋಲನಕ್ಕೆ , ಬೌದ್ಧಿಕ ವಿಕಾಸಕ್ಕೆ ಇದೊಂದು ಉತ್ತಮವಾದ ಅಭ್ಯಾಸವಾಗಿದೆ ಎಂಬುದನ್ನು ಶಾಲೆಯಲ್ಲಿ ವಿವರಿಸಿದರು. ಯೋಗಾಭ್ಯಾಸವು ಎಲ್ಲಾ ಪ್ರಾಯದವರಿಗೂ ಮಾಡುವಂತದ್ದು. ಆದುದರಿಂದ ಸ್ವಸ್ಥ ಸಮಾಜ ನಿರ್ಮಾಣ ವಾಗಬೇಕಾದರೆ ಎಲ್ಲರೂ ಯೋಗಾಭ್ಯಾಸ ಮಾಡಿ ಆರೋಗ್ಯ ವಂತ ಸಮಾಜ ವನ್ನು ಕಾಣಬಹುದು.
*ಯೋಗಾಭ್ಯಾಸವೇ ಯೋಗ್ಯ ಆರೋಗ್ಯವೇ ಭಾಗ್ಯ* ಇದು ನನ್ನ ಅನಿಸಿಕೆ. ವಂದನೆಗಳು.
......................................... ಧನ್ವಿ ರೈ ಕೋಟೆ 
7ನೇ ತರಗತಿ 
ವಿವೇಕ ಹಿರಿಯ ಪ್ರಾಥಮಿಕ ಶಾಲೆ 
ಪಾಣಾಜೆ , ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



     ನನ್ನ ಹೆಸರು ಗೀತಾಲಕ್ಷ್ಮಿ. 9ನೇ ತರಗತಿ. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನಮ್ಮ ಶಾಲೆಯಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಿದ್ದರು. ನಮ್ಮ ಶಾಲೆಯ ಅಧ್ಯಾಪಕರು ಯೋಗ ತರಬೇತಿ ನೀಡುವ ಶಿಕ್ಷಕರನ್ನು ಶಾಲೆಗೆ ಕರೆಸಿದ್ದರು. ಇಂದು ಯೋಗ ಶಿಕ್ಷಕರು ನಮಗೆಲ್ಲರಿಗೂ ತುಂಬಾ ಚೆನ್ನಾಗಿ ಕೆಲವು ಆಸನಗಳನ್ನು ಮತ್ತು ಪ್ರಾಣಾಯಾಮಗಳನ್ನು ಕಲಿಸಿದರು. ನಾವು ವಿದ್ಯಾರ್ಥಿಗಳೆಲ್ಲರೂ ತುಂಬಾ ಖುಷಿ ಖುಷಿಯಿಂದ ಯೋಗಗಳನ್ನು ಮಾಡಿದೆವು. ಯೋಗದಲ್ಲಿ ಯೋಗ ಶಿಕ್ಷಕರು ಕಲಿಸಿದ ಪ್ರಾಣಾಯಾಮ ಹಾಗೂ ಯೋಗದಿಂದ ನನಗೆ ಉಲ್ಲಾಸವಾಯಿತು. ಮನಸ್ಸಿಗೆ ತುಂಬಾ ಸಂತೋಷವಾಯಿತು. ಇಂದು ನಮಗೆಲ್ಲರಿಗೂ ತುಂಬಾ ಸಂತೋಷವಾಯಿತು. ನಾವೆಲ್ಲರೂ ದಿನಾ ಯೋಗ ಮಾಡೋಣ. ರೋಗಗಳಿಂದ ದೂರ ಇರೋಣ. ಧನ್ಯವಾದಗಳು.
................................................. ಗೀತಾಲಕ್ಷ್ಮಿ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮುರುವ ಮಾಣಿಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



         ನಾನು ಲಿಜಿತಾ...... ನಮ್ಮ ಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ. ನಮ್ಮ ಸರಕಾರಿ ಪ್ರೌಢಶಾಲೆ ಮಾಣಿಲ ಮುರುವದಲ್ಲಿ ನಡೆದ ಯೋಗ ದಿನಾಚರಣೆಯು ಬಹಳ ಚೆನ್ನಾಗಿ ನಡೆಯಿತು. ಇಂದು ನಮಗೆ ಹಲವು ಯೋಗಗಳನ್ನು ಕಲಿಸಿದರು. ಮೊದಲಿಗೆ ಯೋಗ ಪ್ರಾರ್ಥನೆ ಮಾಡಿ ನಂತರ , ಮತ್ಸ್ಯ ಆಸನ, ತ್ರಿಕೋನಾಸನ ಇತ್ಯಾದಿ ಯೋಗಗಳನ್ನು ಕಲಿಸಿಕೊಟ್ಟರು. ಕೊನೆಗೆ ನಮಗೆ ಧ್ಯಾನ ಮಾಡಿಸಿದರು. ಶಾಲಾ ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದವರು ಉಪಸ್ಥಿತಿ ಇದ್ದರು. 
................................................. ಲಿಜಿತಾ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



        ನಮಸ್ತೆ ಎಲ್ಲರಿಗೂ.... ನಾವು ಸ್ವರ.ಎಂ.ವಿ ಮತ್ತು ಪೂರ್ವ ಎಂ.ವಿ. ನಮ್ಮ ಶಾಲೆ ಬಂಟ್ವಾಳ ತಾಲೂಕಿನ ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು. ನಾವು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದೆವು. ಒಂದನೇ ತರತಿಯಿಂದ ಏಳನೇ ತರತಿಯವರೆಗಿನ ಮಕ್ಕಳು ಅಕ್ಕಂದಿರು ಯೋಗ ಮಾಡಿದೆವು. ನಮ್ಮ ಶಿಕ್ಷಕರು ನಮ್ಮ ಜೊತೆಗಿದ್ದು ನಮಗೆ ಸಹಕರಿಸಿದರು ಮತ್ತು ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ನಮ್ಮಲ್ಲಿ ಕೇಳಿದರು. ಯೋಗದಿಂದ ಏಕಾಗ್ರತೆ, ಆರೋಗ್ಯಕ್ಕೆ ಒಳ್ಳೆಯದು, ದೇಹಕ್ಕೆ ಶಕ್ತಿ ಬರುತ್ತದೆ ಎಂದು ಹೇಳಿದೆವು. ಇದನ್ನು ದಿನಾಲೂ ಮನೆಯಲ್ಲಿ ಮಾಡಿ ಎಂದು ಟೀಚರ್ ಹೇಳಿದರು. ಪ್ರಾಣಾಯಾಮ, ವಜ್ರಾಸನ, ಪದ್ಮಾಸನ, ವೃಕ್ಷಾಸನ, ಭುಜಂಗಾಸನ, ಶವಾಸನ ಮಾಡಿಸಿದರು. ನಾವೆಲ್ಲರೂ ಮಾಡಿದೆವು. ತುಂಬಾ ಖುಷಿಯಾಯಿತು.
........................ ಪೂರ್ವ ಎಂ.ವಿ. 2ನೇ ತರಗತಿ 
........................ ಸ್ವರ ಎಂ.ವಿ. 4ನೇ ತರಗತಿ
ಇನ್ಫ್ಯಾಂಟ್ ಜೀಸಸ್ ಹೈಯರ್ 
ಪ್ರೈಮರಿ ಸ್ಕೂಲ್ , ಮೊಡಂಕಾಪು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ  
******************************************



Ads on article

Advertise in articles 1

advertising articles 2

Advertise under the article