-->
ಪ್ರೀತಿಯ ಪುಸ್ತಕ : ಸಂಚಿಕೆ - 12

ಪ್ರೀತಿಯ ಪುಸ್ತಕ : ಸಂಚಿಕೆ - 12

ಪ್ರೀತಿಯ ಪುಸ್ತಕ
ಸಂಚಿಕೆ - 12

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

                               ಕೊಕ್ಕರೆಗಳ ರಕ್ಷಣೆಗೆ ಲಾಮಾ ಸೇನೆ
      ಪ್ರೀತಿಯ ಮಕ್ಕಳೇ...... ನಿಮಗೆ ಸಾಹಸದ ಕತೆಗಳು ಇಷ್ಟವಾಗುತ್ತದಲ್ಲವೇ. ಅಂತಹ ಒಂದು ಕತೆ ಇದು. ಅರುಣಾಚಲ ಪ್ರದೇಶದ ಮೂವರು ಎಳೆಯರ ಸಾಹಸದ ಕತೆ ಇದು. ಅವರ ಊರಿಗೆ ವಲಸೆ ಬರುತ್ತಿದ್ದ ಕಪ್ಪು ಕೊರಳಿನ ಕೊಕ್ಕರೆಗಳಿಗೆ ಅಪಾಯ ಬಂದಿರುತ್ತದೆ. ಅಣೆಕಟ್ಟು ಕಟ್ಟುವ ಕಾರಣಕ್ಕೆ ಕೊಕ್ಕರೆಗಳ ಇಳಿದಾಣ ನಾಶವಾಗುವ ಸೂಚನೆ ಕಂಡು ಬರುತ್ತದೆ. ಅದನ್ನು ಈ ಮೂವರು ಹೇಗೆ ಬಚಾವ್ ಮಾಡುತ್ತಾರೆ, ಏನು ಸಂಕಷ್ಟ ಎದುರಿಸುತ್ತಾರೆ, ಎಂದು ವಿವರಿಸುವ 24 ಗಂಟೆಗಳ ಕಥೆ ಇದು. ಪುಟ್ಟ ಪುಸ್ತಕ, ಸಾಕಷ್ಟು ಚಿತ್ರಗಳೂ ಇವೆ. ಗುಡ್ಡಗಾಡು ಪ್ರದೇಶದ ಚಿತ್ರಣ ಕಾಣುತ್ತದೆ.   
         ಅರುಣಾಚಲ ಪ್ರದೇಶದಲ್ಲಿ ಚಳಿಗಾಲದಲ್ಲಿ ವಲಸೆ ಬರುವಂಥ ಕಪ್ಪು ಕೊರಳಿನ ಕೊಕ್ಕರೆಯ ವಿವಿಧ ರೀತಿಯ ರಕ್ಷಣೆಗೆ ತವಾಂಗ್ ನ ಬೌದ್ಧ ಸನ್ಯಾಸಿಗಳು ಮತ್ತು ಇತರ ಜನರು ಹೋರಾಟ ಮಾಡಿದರು. ಆ ಹೋರಾಟವೇ ಈ ಕತೆಗೆ ಮೂಲ ಪ್ರೇರಣೆ. ಆದರೆ ಇದು ಒಂದು ಕಾಲ್ಪನಿಕ ಕಥೆ. ಪರಿಸರ ಕಾಳಜಿ ಹುಟ್ಟಿಸುವ ನಿಟ್ಟಿನಲ್ಲಿ ಈ ಪುಸ್ತಕ ಅನೇಕರ ಶ್ರಮದೊಂದಿಗೆ ಹೊರಬಂದಿದೆ. ಓದಿ ನೋಡಿ ಮತ್ತೆ ಹೇಳಿ.....
ಲೇಖಕರು: ನೀರಜ್ ವಾಘೋಲಿಕರ್ 
ಅನುವಾದ: ನಾಗೇಶ ಹೆಗಡೆ
ಚಿತ್ರಗಳು: ನಿಲುಫರ್ ವಾಡಿಯಾ 
ಪ್ರಕಾಶಕರು: ಅಂಕಿತ ಪುಸ್ತಕ   
ಬೆಲೆ: ರೂ.130
ಐದು, ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು. ಸದ್ಯ ಪುಸ್ತಕದ ಅಂಗಡಿಗಳಲ್ಲಿ ಈ ಪುಸ್ತಕ ಸಿಗುತ್ತದೆ. 
............................... ವಾಣಿ ಪೆರಿಯೋಡಿ, 
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

     

Ads on article

Advertise in articles 1

advertising articles 2

Advertise under the article