
ಹಸಿರು ಯೋಧರು - 2022 : ಸಂಚಿಕೆ - 1
Wednesday, June 8, 2022
Edit
ಮಕ್ಕಳ ಜಗಲಿಯಲ್ಲಿ
ಹಸಿರು ಯೋಧರು - 2022 : ಸಂಚಿಕೆ - 1
ಜೂನ್ - 5
ವಿಶ್ವ ಪರಿಸರ ದಿನದ ನೆನಪಿನಲ್ಲಿ
ಜಗಲಿಯ ಮಕ್ಕಳು ಗಿಡವನ್ನು ನೆಟ್ಟು , ಬೆಳೆಸಿದ ಅನುಭವದ ಮಾತುಗಳು ಇಲ್ಲಿವೆ....
ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.. ನಾನು ಶ್ರಾವ್ಯ.... ಕಳೆದ ಬಾರಿ ಕೋ ಕೋ ಹಣ್ಣಿನ ಗಿಡ ನೆಟ್ಟಿದೆ. ಅದು ಈಗ ನನ್ನೆತ್ತರಕೆ ಬೆಳೆದು ನಿಂತಿದೆ. ನಾನು ನೆಟ್ಟ ಗಿಡ, ನನ್ನದು ಎಂದಾಗ ಎಲ್ಲವೂ ಹಾಗೇ ತಾನೇ..... ನನ್ನದು ಎನ್ನುವಾಗ ಅದರ ಮೇಲೆ ಇರುವ ಪ್ರೀತಿ, ಕಾಳಜಿ, ಯಾವಾಗಲೂ ಹೆಚ್ಚು.... ಈಗ ಗಿಡ ಬೆಳೆದು ನಿಂತಿರುವದನ್ನು ನೋಡುವಾಗ ಖುಷಿ ಎನಿಸುತ್ತದೆ. ನಾನು ಗಿಡ ನೆಟ್ಟ ಸ್ವಲ್ಪ ದಿನದಾಚೆಗೆಲ್ಲಾ ಜೋರು ಮಳೆಸುರಿಯುತ್ತಿತ್ತು. ಜಾಸ್ತಿ ಮಳೆಯಾದಾಗಲೆಲ್ಲಾ ನಮ್ಮ ತೋಟದ ತುಂಬಾ ನೀರು ನಿಲ್ಲುತ್ತದೆ. ನಾನು ನೆಟ್ಟ ಗಿಡ ಕೊಳೆತು ಹೋಗುತ್ತದೇನೋ ಎಂದುಕೊಂಡಿದ್ದೆ , ಆದರೆ ಹಾಗಾಗಲಿಲ್ಲ. ಎಲೆ ಎಲ್ಲಾ ಉದುರಿತ್ತು, ಆದರೆ ಮತ್ತೆ ಚಿಗುರೊಡೆದು ಎತ್ತರಕೆ ಬೆಳೆದಿದೆ. ನಾನು ಕಾಲೇಜಿಗೆ ಹೋಗುತ್ತಿದ್ದರಿಂದ ದಿನಾ ಗಿಡ ನೋಡಲಾಗುತ್ತಿರಲಿಲ್ಲ. ವಾರದಲ್ಲಿ ಒಂದು ಬಾರಿ ಅಂತು ನೋಡಲು ಹೋಗುತ್ತಿದ್ದೆ. ತುಂಬಾ ಖುಷಿ ಎನಿಸುತ್ತದೆ, ಗಿಡ ನೋಡುವಾಗ ಮತ್ತು ಅದರ ಬಗ್ಗೆ ಹೇಳುವಾಗ. ಕಳೆದ ಬಾರಿಯಂತೆ ಈ ಬಾರಿಯೂ ಪರಿಸರ ದಿನದಂದು ಗಿಡಗಳನ್ನು ನೆಡೋಣ , ಅದರ ಬೆಳವಣಿಗೆಯನ್ನು ನೋಡುತ್ತಾ ಖುಷಿ ಪಡೋಣ. ಪ್ರಕೃತಿಯ ಸಂಪತ್ತಾದ ಗಿಡ-ಮರಗಳನ್ನು ನೆಟ್ಟು, ಬೆಳೆಸಿ - ನಾಡನ್ನು ಉಳಿಸೋಣ. ಧನ್ಯವಾದಗಳು.
ದ್ವಿತೀಯ ಪಿ.ಯು.ಸಿ.
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ಜೈ ಶ್ರೀ ರಾಮ್..... ಮಕ್ಕಳ ಜಗಲಿಗೆ ನಮಸ್ಕಾರಗಳು..... ನಾನು ತೃಪ್ತಿ ..... ಕಳೆದ ವರ್ಷ ಪರಿಸರ ದಿನದಂದು ನನ್ನ ಮನೆಯಲ್ಲಿ ಚೆರ್ರಿ, ಪೇರಳೆ, ಬಿಲ್ವಪತ್ರೆ ಗಿಡಗಳನ್ನು ನೆಟ್ಟಿದ್ದೆನು. ಅದಕ್ಕೆ ಅಪ್ಪ, ಅಮ್ಮ, ಅಜ್ಜಿ ಸಹಾಯ ಮಾಡಿದ್ದರು. ಮತ್ತು ಅದಕ್ಕೆ ನೀರು ಒಣಗಿದ ಎಲೆಗಳನ್ನು ಹಾಕುತಿದ್ದೆನು. ಆದರೆ ಈಗ ಚೆರ್ರಿ ಗಿಡದಲ್ಲಿ ಚೆರ್ರಿ ಹಣ್ಣು ಆಗಿದೆ. ಅದರಲ್ಲಿ ಮೊದಲು ಹೂವು ಆಗಿತ್ತು. ದಿನಾ ಶಾಲೆಗೆ ಹೊರಡುವ ಸಮಯ ನೋಡುತ್ತಾ ಇದ್ದೆ. ಒಂದು ದಿನ ಸಣ್ಣ ಹಸಿರು ಬಣ್ಣದ ಕಾಯಿ ಆಗಿತ್ತು. ದಿನದಿಂದ ದಿನಕ್ಕೆ ಕಾಯಿ ದೊಡ್ಡದಾಗುತ್ತಿತ್ತು. ಒಂದು ದಿನ ಸ್ವಲ್ಪ ಕೆಂಪಾದ ಹಣ್ಣಾಗಿತ್ತು. ಹಣ್ಣು ಆದ ದಿನ ಅಮ್ಮ ನನಗೆ ತೋರಿಸಿ ಹೇಳಿದರು. ಮೊದಲ ಹಣ್ಣು ನೋಡಿ ತುಂಬಾ ಖುಷಿ ಆಗಿತ್ತು. ಒಂದೇ ಹಣ್ಣನ್ನು ನಾವೆಲ್ಲರೂ ರುಚಿ ನೋಡಿದೆವು. ತುಂಬಾ ಸಿಹಿಯಾಗಿತ್ತು. ನಂತರ ಒಂದೊಂದೇ ಹಣ್ಣು ಆಗುತ್ತಿದೆ. ನಾವು ಗಿಡವನ್ನು ಮಾರ್ಗದ ಬದಿಯಲ್ಲಿ ನೆಟ್ಟಿದ್ದೇವೆ. ದಾರಿಗೆ ನೆರಳು ಆಗುತ್ತದೆ. ಹಣ್ಣಿಗೆ ಹಣ್ಣು ಆಗುತ್ತದೆ. ಬೇಕಾದವರು ಕಿತ್ತು ತಿನ್ನಬಹುದು ಎನ್ನುವ ಉದ್ದೇಶದಿಂದ. ತುಂಬಾ ಖುಷಿಯಾಗುತ್ತದೆ ಗಿಡವನ್ನು ನೋಡುವಾಗ.
6ನೇ ದಧೀಚಿ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನಾನು ನಿಭಾ..... ಕಳೆದ ವರ್ಷ ಪರಿಸರ ದಿನದಂದು ನಾನು ನೆಟ್ಟಿದ್ದು ಕರಿಬೇವಿನ ಗಿಡ. ಈ ಗಿಡದಲ್ಲಿ ಅನೇಕ ಔಷಧಿಯ ಗುಣಗಳು ಇವೆ. ಇದಕ್ಕೆ ನಾನು ದಿನಾ ನೀರು ಹಾಕುತ್ತಿದ್ದೆ. ಈ ಗಿಡ ಮಾತ್ರವಲ್ಲ ಹಲವಾರು ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಮತ್ತು ಗೊಬ್ಬರವನ್ನು ಹಾಕುತ್ತೇನೆ. ನಾವು ಆದಷ್ಟು ಸಾವಯವ ಗೊಬ್ಬರವನ್ನು ಹೆಚ್ಚು ಬಳಸೋಣ. ಹಾಗೇ ಒಂದು ದಿನ ಗಿಡದ ನೆಡುವುದು ಮಾತ್ರವಲ್ಲ ಆ ಗಿಡಕ್ಕೆ ಸರಿಯಾದ ಪೋಷಕಾಂಶ ದೊರಕಿಸಿ ಕೊಡಬೇಕು. ಹೀಗೆ ನಾವು ದಿನವೂ ಪರಿಸರ ದಿನವನ್ನು ಆಚರಿಸಬೇಕು. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು , ಕೊಂಬೆಟ್ಟು,
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನಾನು ವೈಷ್ಣವಿ ಕಾಮತ್.... ಜೂನ್ - 5 , ವಿಶ್ವ ಪರಿಸರ ದಿನ. ಪರಿಸರ ದಿನವನ್ನು ನಾವು ಒಂದಾದರೂ ಗಿಡ ನೆಟ್ಟು ಸಂಭ್ರಮದಿಂದ ಆಚರಿಸಬೇಕು. ನಾನು ಕಳೆದ ವರ್ಷ 2021ರಲ್ಲಿ ಒಂದು ಗಿಡ ನೆಟ್ಟಿದ್ದೆ. ಅದು ಈಗ ಸ್ವಲ್ಪ ದೊಡ್ಡದಾಗಿ ಬೆಳೆದಿದೆ. ಅದಕ್ಕೆ ನಾನು ದಿನಾಲು ನೀರುಣಿಸುತ್ತಿದ್ದೇನೆ. ಅದರ ಬುಡಕ್ಕೆ ಸುಡು ಮಣ್ಣು ಮತ್ತು ಆಡಿನ ಹಿಕ್ಕೆ ತಂದು ಹಾಕಿದ್ದೇನೆ. ಈಗ ಅದು ಸ್ವಲ್ಪ ಸ್ವಲ್ಪವೇ ಬೆಳೆಯುತ್ತಿದೆ. ಬೆಳೆದ ಗಿಡ ಚೆನ್ನಾಗಿದೆ. ಅದನ್ನು ನಾನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಎಲ್ಲರೂ ಹೀಗೆ ಗಿಡ ನೆಟ್ಟು ಬೆಳೆಸಿದರೆ ಪರಿಸರವು ಅಂದವಾಗಿರುತ್ತದೆ.
'ಕಾಡು ಬೆಳೆಸಿ, ನಾಡು ಉಳಿಸಿ', ' ಮನೆಗೊಂದು ಮರ, ಊರಿಗೊಂದು ವನ' ಎಂಬ ಮಾತಿನಂತೆ ನಾವೆಲ್ಲರೂ ನಮ್ಮ ಪರಿಸರಕ್ಕಾಗಿ ಸ್ವಲ್ಪವಾದರೂ ಅಳಿಲು ಸೇವೆಯನ್ನು ಮಾಡೋಣ , ಧನ್ಯವಾದಗಳೊಂದಿಗೆ
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ.
ಬಂಟ್ವಾಳ ತಾಲೂಕು , ದ.ಕ ಜಿಲ್ಲೆ.
********************************************
ನಾನು ಫಾತಿಮತ್ ಅಝ್ಮೀನ... ಕಳೆದ ವರ್ಷ ಪಪ್ಪಾಯಿ ಗಿಡ ನೆಡುವುದರೊಂದಿಗೆ ಪರಿಸರ ದಿನವನ್ನು ಆಚರಿಸಿದ್ದೇನೆ. ನಾನು ನೆಟ್ಟ ಪಪ್ಪಾಯಿ ಗಿಡವನ್ನು ಚೆನ್ನಾಗಿ ನೀರು , ಗೊಬ್ಬರ ಹಾಕಿ ಸಾಕಿ ಬೆಳೆಸಿದ್ದೇನೆ. ಆದ್ದರಿಂದ ಈಗಾಗಲೇ ಅದು ನನಗೆ ಒಳ್ಳೆಯ ಫಸಲನ್ನು ನೀಡಿದೆ. ನಾನು ನೆಟ್ಟ ಪಪ್ಪಾಯಿ ಗಿಡದಲ್ಲಿ ಹೂ ಬಿಟ್ಟು ಕಾಯಿಗಳಾಗಿ, ಹಣ್ಣುಗಳಾಗಿದೆ. ಹಣ್ಣುಗಳು ತಿನ್ನಲು ಬಹಳ ರುಚಿಯಾಗಿದೆ. ಅದರಲ್ಲಿರುವ ಕೆಲವು ಹಣ್ಣುಗಳನ್ನು ಕಾಗೆ, ಗಿಳಿ ಮುಂತಾದ ಪಕ್ಷಿಗಳು ತಿನ್ನುತ್ತವೆ. ನಾನು ನೆಟ್ಟ ಗಿಡವು ನನಗೆ ಫಸಲು ನೀಡಿದ್ದು ತುಂಬಾ ಸಂತೋಷದ ವಿಷಯ..
7 ನೇ ತರಗತಿ
ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನನ್ನ ಹೆಸರು ಗಾಯತ್ರಿ , ತಂಗಿ ಶ್ರೀನಿಧಿ ..... 2021ರಲ್ಲಿ ನಾನು ನೆಟ್ಟ ಮಾವಿನ ಚಿಕ್ಕ ಗಿಡ. ಮತ್ತು ತಂಗಿ ನೆಟ್ಟಿದ್ದು ಅಡಿಕೆ ಸಸಿ. ಅದರ ಬುಡಕ್ಕೆ ಸ್ವಲ್ಪ ಒಣ ಕಸ ಮತ್ತು ವಾರಕ್ಕೊಂದು ಬಾರಿ ನೀರು ಹಾಕುತ್ತಿದ್ದೆವು. ಈ ವರ್ಷ ಇಷ್ಟ್ಟು ದೊಡ್ಡ ದಾಗಿದೆ.....
4ನೇ ತರಗತಿ
ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಶ್ರೀನಿಧಿ 1ನೇ ತರಗತಿ
ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ನಮಸ್ತೇ ನಾನು ಭವಿತ್ ಕುಲಾಲ್. ಜೂನ್ 5ರಂದು ಪರಿಸರ ದಿನದಲ್ಲಿ ಸಪೋಟ ಗಿಡ ಒಂದನ್ನು ನೆಟ್ಟಿದ್ದೇನೆ. ನನಗೆ ತುಂಬಾ ಖುಷಿ ಆಗುತ್ತಿದೆ. ನಾನು ನನ್ನ ಹುಟ್ಟಿದ ದಿನದಂದು ಸಾಗುವಣಿ ಗಿಡ ನೆಟ್ಟಿದ್ದೇನೆ. ನಾನು ಗಿಡ, ಮರಗಳನ್ನು, ಪರಸರವನ್ನು ಪ್ರೀತಿಸುತ್ತೇನೆ. ನಾನು ಗಿಡ ನೆಟ್ಟ ನಂತರ ಅದಕ್ಕೆ ನೀರು ಹಾಕಿದ್ದೇನೆ. ಇನ್ನು ನಾನು ಗಿಡವನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಗಿಡ ಸ್ಪಲ್ಪ ಚಿಗುರಿ ಮೇಲೆ ಬಂದ ನಂತರ ಗೊಬ್ಬರ ಹಾಕಿ ಪೋಷಿಸುತ್ತೇನೆ. ನಾನು ನೆಟ್ಟ ಸಪೋಟ ಗಿಡ ದೊಡ್ಡದಾಗಿ ಮರ ಆಗಬೇಕೆಂದು ನನ್ನ ಆಸೆ. ಧನ್ಯವಾದಗಳು.
7ನೇ ತರಗತಿ
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
********************************************