-->
ಮಕ್ಕಳ ಜಗಲಿಯ ಸಾಧಕರು

ಮಕ್ಕಳ ಜಗಲಿಯ ಸಾಧಕರು


ಮಕ್ಕಳ ಜಗಲಿಯ ಸಾಧಕರು       

        ಮಕ್ಕಳ ಜಗಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಶಾಲಾ ಪಠ್ಯ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿರುವ ಜಗಲಿಯ ಸಾಧಕರ ಪರಿಚಯ ಇಲ್ಲಿದೆ. 



                 ನಾನು ಶ್ರೀರಕ್ಷಾ ಎಸ್.ಎಚ್. ಪೂಜಾರಿ. ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಣಾಜೆ ಇಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ನನಗೆ 620 ಅಂಕಗಳು ದೊರೆತಿರುವುದು ತುಂಬಾ ಸಂತೋಷವಾಗಿದೆ. ನನ್ನ ಆಸಕ್ತಿಯ ವಿಷಯ ಸಂಗೀತ , ಭರತನಾಟ್ಯ ,ಹಾಗೂ ಚಿತ್ರಕಲೆ. Shriraksha S H Poojary youtube channel ನಲ್ಲಿ ನನ್ನ ಹಾಡುಗಳನ್ನು ಕೇಳಬಹುದು. ಮಕ್ಕಳ ಜಗಲಿಯ ಶೀರ್ಷಿಕೆ ಗೀತೆಯನ್ನು ಹಾಡಿರುವುದು ನನಗೆ ತುಂಬಾ ಸಂತೋಷ. ನಾನು ಪಠ್ಯ ವಿಷಯಗಳ ಜೊತೆ ಪಠ್ಯೇತರ ವಿಷಯಗಳನ್ನು ಪರಿಶ್ರಮ ಪಟ್ಟು ಕಲಿಯುತ್ತಿದ್ದೇನೆ. ಶಾಲಾ ಶಿಕ್ಷಕರು ಮತ್ತು ಮನೇಲಿ ತಂದೆ-ತಾಯಿಯವರ ಪ್ರೋತ್ಸಾಹದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಎಲ್ಲರಿಗೂ ನನ್ನ ಧನ್ಯವಾದಗಳು
........................ ಶ್ರೀರಕ್ಷಾ ಎಸ್ ಎಚ್ ಪೂಜಾರಿ
ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಸ್ಕೂಲ್ 
ಕೊಣಾಜೆ , ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
*******************************************

    
                ಮಕ್ಕಳ ಜಗಲಿ ಓದುಗರಿಗೆ ಹಾಗೂ ಮಕ್ಕಳಿಗೆ ನನ್ನ ಹೃದಯಪೂರ್ವಕ ವಾದ ನಮಸ್ಕಾರಗಳು. ನನ್ನ ಹೆಸರು ಅನನ್ಯ. ಈಗ ತಾನೆ ಹತ್ತನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ನಾನು ಶುಭಾಶಯಗಳನ್ನು ಕೋರಲು ಇಚ್ಚಿಸುತ್ತೇನೆ. ಬಹುಮುಖ್ಯವಾಗಿ ನಾನು ಈಗ ಸಾಧಿಸಿ ಇರುವಂತಹ, ಈ ಹಂತವನ್ನು ತಲುಪಿರುವುದಕ್ಕೆ ನಾನು ನನ್ನ ಪೋಷಕರಿಗೆ ಬಹಳ ಧನ್ಯವಾದವನ್ನು ತಿಳಿಸಲು ಇಚ್ಛಿಸುತ್ತೇನೆ. ಅವರ ಸಹಕಾರ ಹಾಗೂ ಅವರ ಪ್ರೀತಿಯಿಂದ ನಾನು ಈ ಮಟ್ಟದ ಒಂದು ಸಾಧನೆಯನ್ನು ಮಾಡುವುದು ಸಾಧ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪೋಷಕರೊಂದಿಗೆ ನನ್ನ ಶಿಕ್ಷಕರು ಹಾಗೂ ಎಲ್ಲಾ ಗುರುಗಳಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಇಚ್ಚಿಸುತ್ತೇನೆ. ಅದರೊಂದಿಗೆ "ಮಕ್ಕಳ ಜಗಲಿ"ಯು ಈ ಹಾದಿಯಲ್ಲಿ ನನಗಿಷ್ಟು ಸಹಕಾರ ವಾಗಿದೆ ಎಂದು ಹೇಳಲು ನಾನು ಇಚ್ಚಿಸುತ್ತೇನೆ, 
ಓದುವುದರೊಂದಿಗೆ ಬೇರೆ ಚಟುವಟಿಕೆಗಳು ಸಹ ಬಹು ಮುಖ್ಯವಾದ ಅಂಶಗಳು. ಬೇರೆ ಬೇರೆ ಚಟುವಟಿಕೆಗಳನ್ನು ಹೊಂದಿರುವ ಮಕ್ಕಳ ಜಗಲಿಯು, ವಿದ್ಯಾರ್ಥಿಗಳಿಗೆ ಬಹಳ ಸಹಾಯಕವಾಗಿದೆ. ಮಕ್ಕಳ ಚಿತ್ರಗಳು, ಅಕ್ಕನ ಪತ್ರ ಈ ರೀತಿಯ ಚಟುವಟಿಕೆಗಳು ಮಕ್ಕಳಲ್ಲಿ ಭಾಷಾ ಶೈಲಿಯನ್ನು ಹೆಚ್ಚಿಸುವುದು, ಪತ್ರ ಬರೆಯುವುದನ್ನು ಅಭ್ಯಾಸ ಮಾಡಿಸುವುದು, ಹೀಗೆ ಹಲವಾರು ಉತ್ತಮ ಗುಣಗಳನ್ನು ಹೆಚ್ಚಿಸುತ್ತದೆ. ಓದಿ ಓದಿ ಸಾಕಾದ ಸಮಯದಲ್ಲಿ ಮಕ್ಕಳ ಜಗಲಿಯಲ್ಲಿ ಸ್ವಲ್ಪ ಸಮಯವನ್ನು ಕಳೆದು ನಾನು ವಿಶ್ರಾಂತಿ ಅನುಭವಿಸುತ್ತಿದ್ದೆ. ಮಕ್ಕಳ ಜಗಲಿ ನಿಜವಾಗಿಯೂ ನನ್ನ ಸಂವಹನ ಕೌಶಲ್ಯ, ಭಾಷಾ ಕೌಶಲ್ಯಗಳನ್ನು ಸುಧಾರಿಸಲು ನನಗೆ ಸಾಕಷ್ಟು ಸಹಾಯ ಮಾಡಿದೆ. ನನ್ನನ್ನು ಪ್ರೋತ್ಸಾಹಿಸಿದ ತಾರಾನಾಥ್ ಸರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಮತ್ತು ಈ ವರ್ಷ ಹತ್ತನೇ ತರಗತಿಗೆ ಪ್ರವೇಶಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳೆ, ನಿಮಗೆ ಶುಭವಾಗಲಿ, ಚೆನ್ನಾಗಿ ಓದಿ, ಟೆನ್ಶನ್ ಬೇಡ.. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು! ಮಕ್ಕಳ ಜಗಲಿಯ ಭಾಗವಾಗಿ ಮುಂದುವರಿಯಲು ಇಚ್ಚಿಸುತ್ತೇನೆ. 
................................... ಅನನ್ಯ ಮಲ್ಲೇಸ್ವಾಮಿ
ಕ್ರೈಸ್ತ ದಿ ಕಿಂಗ್ ಕಾನ್ವೆಂಟ್.
ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆ, ಮೈಸೂರು.
*******************************************



                ನನ್ನ ಹೆಸರು ಸಮ್ಯತಾ ಆಚಾರ್ಯ. ನಾನು ಈಗಾಗಲೇ ನನ್ನ 10ನೇ ತರಗತಿಯ ವ್ಯಾಸಂಗವನ್ನು ಶ್ರೀ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಪಾದತಳದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿರುತ್ತೇನೆ. ನಾನು ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ಕ್ಕೆ 599 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತೇನೆ. ಯಶಸ್ಸಿಗೆ ಕಾರಣ ನನ್ನ ಗೌರವಾನ್ವಿತ ಮುಖ್ಯಶಿಕ್ಷಕರು ಶ್ರೀ ರಾಧಾಕೃಷ್ಣ ಭಟ್.ಕೆ ಹಾಗೂ ನನ್ನೆಲ್ಲಾ ಪ್ರೀತಿಯ ಶಿಕ್ಷಕ ವೃಂದದವರು. ನನ್ನೆಲ್ಲಾ ಶಿಕ್ಷಕರು ನನ್ನ ಓದಿನಲ್ಲಿ ಪ್ರೋತ್ಸಾಹ ನೀಡಿದ್ದನ್ನು ನಾನೆಂದು ಮರೆಯಲಾರೆ. ಅಲ್ಲದೆ ನನ್ನ ಅಪ್ಪ, ಅಮ್ಮ ಹಾಗೂ ತಂಗಿ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಅವರಿಗೆ ಯಾವತ್ತೂ ಚಿರಋಣಿಯಾಗಿದ್ದೇನೆ. ನಾನು ಬೆಳಗಿನ ಜಾವ 4:30 ಕ್ಕೆ ಓದುತ್ತಿದ್ದೆ ಹಾಗೂ ಸಂಜೆ 10 ಗಂಟೆಯವರೆಗೂ ಓದುತ್ತಿದ್ದೆ. ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಅಪ್ಪ ಅಮ್ಮನವರ ಸಲಹೆ-ಸೂಚನೆಗಳನ್ನು ಪಾಲಿಸಿದ್ದರಿಂದ ನಾನು ಈ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಹವ್ಯಾಸಿ ಕ್ಷೇತ್ರ ಚಿತ್ರಕಲೆ. ನನ್ನ ಚಿತ್ರ ಕಲೆಯನ್ನು ಪ್ರೋತ್ಸಾಹಿಸಿ, ಹೈಯರ್ ಗ್ರೇಡ್ ಪರೀಕ್ಷೆಯನ್ನು ಬರೆಯಲು ಸಹಕರಿಸಿದ ನಮ್ಮ ಚಿತ್ರಕಲಾ ಶಿಕ್ಷಕರಾದ ಶ್ರೀ ಮುರಳೀಧರ ಆಚಾರಿ ಇವರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ನಾನು ಬಿಡಿಸಿದ ಚಿತ್ರಗಳನ್ನು ಮಕ್ಕಳ ಜಗಲಿಯಲ್ಲಿ ಬಿತ್ತರಿಸಿದ ನಿಮಗೂ ತುಂಬು ಹೃದಯದ ಧನ್ಯವಾದಗಳು. ನನ್ನ ಶಾಲೆ, ಶಿಕ್ಷಣ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ಹಾಗೂ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.ಬೊಮ್ಮಾಯಿ ಅವರ ಚಿತ್ರಗಳನ್ನು ಬಿಡಿಸಿ ಅವರಿಗೆ ಕೊಡುವ ಮೂಲಕ ಅವರನ್ನು ಭೇಟಿ ಮಾಡುವ ಅವಕಾಶವನ್ನೂ ಕೂಡ ಕಲ್ಪಿಸಿತು. ನಾನು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಪಡುತ್ತೇನೆ.
................................... ಸಮ್ಯತಾ ಆಚಾರ್ಯ 
ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ , ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************




             ನಾನು ಮಾನ್ಯ , ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಶಾಲೆಯ ವಿದ್ಯಾರ್ಥಿನಿ. ನಾನು ದಿನಾಲು ಬೆಳಗ್ಗೆ ಬೇಗ ಎದ್ದು ಪರೀಕ್ಷೆಗೆ ಅಭ್ಯಾಸ ನಡೆಸುತ್ತಿದ್ದೆ. ನನಗೆ ಕಷ್ಟವಾಗುತ್ತಿದ್ದ ವಿಷಯವನ್ನು ಇನ್ನು ಹೆಚ್ಚಾಗಿ ಅಭ್ಯಾಸ ನಡೆಸುತ್ತಿದ್ದೆ. ನನಗೆ ನನ್ನ ಶಾಲೆಯ ಶಿಕ್ಷಕರು ಒಳ್ಳೆಯ ಪ್ರೋತ್ಸಾಹ ಕೊಡುತ್ತಿದ್ದರು. ಮಕ್ಕಳ ಜಗಲಿಯಲ್ಲಿ ಚಿತ್ರ ಮಾಡುತ್ತಿದ್ದೆ ಹಾಗೂ ಕಥೆಗಳಿಗೂ ಚಿತ್ರ ಮಾಡುತ್ತಿದ್ದೆ. ಇಲ್ಲಿ ಬರುತ್ತಿರುವ ಸ್ಪೂರ್ತಿಯ ಮಾತುಗಳು ನನಗೆ ಓದಲು ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿತ್ತು.
................................................ ಮಾನ್ಯ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

      

                  ಎಲ್ಲರಿಗೂ ಆತ್ಮೀಯ ಶುಭ ನಮನಗಳು.... ನಾನು ಪ್ರಿಯ. "ಮಕ್ಕಳ ಜಗಲಿ" ಎಂಬ ವೇದಿಕೆಯಲ್ಲಿ ನಾನೂ ಒಬ್ಬಳಾಗಿದ್ದೇನೆ, ಎಂಬುವುದು ತುಂಬಾ ಸಂತಸದ ವಿಷಯ. ಏಕೆಂದರೆ ಮಕ್ಕಳ ಜಗಲಿ ಯಲ್ಲಿ ಹಲವಾರು ಗಣ್ಯರ ಬಗ್ಗೆ ಹಾಗೂ ಅವರ ಸಮಗ್ರ ಸಾಹಿತ್ಯ ಸಂಪುಟ ಗಳ ಬಗ್ಗೆ , ತಿಳಿದುಕೊಳ್ಳಲು ತುಂಬಾ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಮಕ್ಕಳ ಕಥೆ , ಕವನ , ಹಾಗೂ ಚಿತ್ರಗಳು ತುಂಬಾ ಮುದ ನೀಡುತ್ತದೆ. ಅದರಲ್ಲೂ ವಾರದ ಕೊನೆಯಲ್ಲಿ "ಅಕ್ಕನ ಪತ್ರ"ದ ಬರಹವು ದಿನ - ದಿನ ಹೊಸತೊಂದನ್ನು ಸೃಷ್ಟಿಸುತ್ತದೆ. ನನಗನಿಸುವ ಪ್ರಕಾರ , "ಮಕ್ಕಳ ಜಗಲಿ" ಯಲ್ಲಿ ಯಾವಾಗಲೂ ಮಕ್ಕಳ ಕಲಿಕೆಗೆ ಆದ್ಯತೆ ನೀಡುವ ಹೊಸ ತೊಂದು ಇದ್ದೆ ಇರುತ್ತದೆ. ಇದು ನನಗಿಷ್ಟದ ಸಂಗತಿ. ಅದೇ ರೀತಿ ನಮ್ಮ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಉತ್ತಮ ಅಂಕ ಗಳಿಗಾಗಿ ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ವಂದನೆಗಳನ್ನು ಅರ್ಪಿಸುತ್ತೇನೆ. ಅದೇ ರೀತಿ ಮನೆಯಲ್ಲಿ ಅಮ್ಮ , ಅಪ್ಪ , ತಂಗಿ ಎಲ್ಲರೂ ನನ್ನ ಓದಿನ ಬಗ್ಗೆ ಹೆಚ್ಚು ಕಾಳಜಿ ಹಾಗೂ ಪ್ರೋತ್ಸಾಹ ನೀಡುತ್ತಾರೆ. ಇವರೆಲ್ಲರಿಗೂ ನನ್ನ ಪ್ರೀತಿಯ ವಂದನೆಗಳನ್ನು ತಿಳಿಸುತ್ತೇನೆ. ಹಾಗೂ ನನ್ನ ಅನಿಸಿಕೆಯನ್ನು ಹೇಳಲು ಅವಕಾಶ ನೀಡಿದ್ದಕ್ಕಾಗಿ "ಮಕ್ಕಳ ಜಗಲಿ" ಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. ಧನ್ಯವಾದಗಳು.........
..................................................... ಪ್ರಿಯ 
ಸರಕಾರಿ ಪ್ರೌಢ ಶಾಲೆ ನಾರಾವಿ.
ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು
********************************************



         ನಮಸ್ಕಾರ, ನಾನು ಅನುಲಕ್ಷ್ಮಿ 10 ನೇ ತರಗತಿಯ ವ್ಯಾಸಂಗವನ್ನು ಮುಗಿಸಿ ಫಲಿತಾಂಶ ದ ಪ್ರಕಟಣೆಯು ಕೂಡ ಆಯಿತು. ಇದರಲ್ಲಿ ಉತ್ತಮ ಅಂಕಗಳು ಬರಬೇಕಾದರೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಇವರೆಲ್ಲರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹಾಗಯೇ ನನ್ನ ಗೆಳತಿಯರು ಕೂಡ ತುಂಬಾ ರೀತಿಯಲ್ಲಿ ಸಹಾಯ ‌ಮಾಡಿದ್ದಾರೆ. ಅದೇ ರೀತಿ ಮಕ್ಕಳ ಜಗಲಿಯು ಕೂಡ ಉತ್ತಮ ರೀತಿಯಲ್ಲಿ ಸಹಾಯಕವಾಗಿದೆ. ಅಂದರೆ ನಾನು ಇದರಲ್ಲಿ ಕವನಗಳನ್ನು ಬರೆಯುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸಲು ಸಹಾಯವಾಯಿತು. ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ಉಪಯುಕ್ತವಾಯಿತು. ನನ್ನ ವಿದ್ಯಾಭ್ಯಾಸಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ಈ ಮೂಲಕ ಕೃತಜ್ಞತೆಯನ್ನು ತಿಳಿಸಲು ಬಯಸುತ್ತೇನೆ.
..................................................... ಅನುಲಕ್ಷ್ಮಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



ಮಕ್ಕಳ ಜಗಲಿಯಲ್ಲಿ ಭಾಗಿಯಾಗಿರುವ ಆತ್ಮೀಯ ವಿದ್ಯಾರ್ಥಿಗಳೇ.... ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿಯ ಪರವಾಗಿ ವಿಶೇಷವಾದ ಅಭಿನಂದನೆಗಳು.....
          ಇಲ್ಲಿ ನಮ್ಮ ಜೊತೆ ಹಂಚಿಕೊಳ್ಳುವ ನಿಮ್ಮ ಮಾತುಗಳು ಎಲ್ಲರಿಗೂ ಸ್ಪೂರ್ತಿಯಾಗಬಹುದು.. ನೀವು ಓದಿದ ಶಾಲೆಯ ಬಗ್ಗೆ , ಓದಿದ ರೀತಿ ಹಾಗೂ ನಿಮ್ಮ ಶಾಲೆಯಲ್ಲಿ ನಿಮಗೆ ಸಿಕ್ಕಂತಹ ಪ್ರೋತ್ಸಾಹ ಇಷ್ಟ ವಾದಂತಹ ವಿಷಯಗಳು ... ಈ ಬಗ್ಗೆ ತಮ್ಮ ಅನಿಸಿಕೆಯನ್ನು ಮಕ್ಕಳ ಜಗಲಿಯ ಜೊತೆ ಹಂಚಿಕೊಳ್ಳಿ... ಹಾಗೂ ಮಕ್ಕಳ ಜಗಲಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನೀವು ಮಕ್ಕಳ ಜಗಲಿಯ ಕುರಿತಾಗಿ ಅನಿಸಿಕೆ.. ತಮ್ಮ ಭಾವಚಿತ್ರ ಹಾಗೂ ತಮ್ಮ ವಿವರದೊಂದಿಗೆ ಆದಷ್ಟು ಬೇಗ ಬರೆದು ವಾಟ್ಸಪ್ ಮೂಲಕ 9844820979 ಗೆ ಕಳಿಸಿ.....

Ads on article

Advertise in articles 1

advertising articles 2

Advertise under the article