
ಮಕ್ಕಳ ಕವನಗಳು : ಸಾತ್ವಿಕ್ ಗಣೇಶ್
Sunday, May 8, 2022
Edit
ಮಕ್ಕಳ ಜಗಲಿಯಲ್ಲಿ
ಸಾತ್ವಿಕ್ ಗಣೇಶ್ ಬರೆದಿರುವ
ಮಕ್ಕಳ ಕವನಗಳು
ನಮ್ಮ ದೇಶದ ವೀರರು
---------------------------
ಹೆಮ್ಮೆಯ ದೇಶ
ಭಾರತ ದೇಶ
ನಮ್ಮಯ ನೆಚ್ಚಿನ
ಭಾರತ ದೇಶ
ದೇಶವ ಕಾಯುವ
ವೀರಯೋಧರು
ಪ್ರಾಣವ ಪಣಕಿಟ್ಟು
ಹೋರಾಡುವರು
ನಮ್ಮಯ ಪ್ರಾರ್ಥನೆ
ಸದಾ ಇರಲಿ
ನಮ್ಮ ದೇಶಕ್ಕಾಗಿ ಹೋರಾಡುವ
ವೀರ ಯೋಧರಿಗೆ
........................................ ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮ್ಮ ಶಾಲೆ
-----------------
ನಮ್ಮ ನಡುವೆ ಪುಟ್ಟ ಗ್ರಾಮ
ಅಲ್ಲಿ ನಮ್ಮ ವಿದ್ಯಾ ಧಾಮ
ಕಣ್ಣಿಗೆ ಕಾಣುವ ದೇವರು
ಅಮ್ಮನ ಪ್ರೀತಿ ತೋರುವರು
ನಮ್ಮ ಶಾಲಾ ಶಿಕ್ಷಕರು
ಒಳ್ಳೆಯ ದಾರಿ ತೋರುವರು
ಸ್ನೇಹದಿ ಪಾಠ ಮಾಡುವರು
ನಮ್ಮ ಶಾಲಾ ಶಿಕ್ಷಕರು
ನಾವೂ ಕಲಿತ ಶಾಲೆ ಬಿಟ್ಟರೂ
ನಮಗೆ ಕಲಿಸಿದ ಶಿಸ್ತು,
ಸಮಯಪಾಲನೆ,
ಒಳ್ಳೆಯ ನಡತೆ ಮರೆಯದಿರೀ
ಸ್ನೇಹಿತರೇ
ನಮಗೆ ಒಳ್ಳೆಯ ವಿದ್ಯೆಯ ಕಲಿಸಿದ ಶಾಲೆಯ ಮರೆಯದಿರೀ ಸಹಪಾಠಿಗಳೇ
ಒಳ್ಳೆಯ ಕೀರ್ತಿಯಗಳಿಸಿ
ಒಳ್ಳೆಯ ಹೆಸರನು ಗಳಿಸೋಣ
........................................ ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ನಮ್ಮ ಶಾಲಾ ಅನ್ನದಾತೆಯರು
----------------------------------
ಬೆಳಗಿನ ಸಮಯದಿ
ಬಿಸಿ ಬಿಸಿ ಹಾಲನು
ಕೊಡುವರು ನಮ್ಮಶಾಲಾ
ಮಾತೆಯರು
ಮಧ್ಯಾಹ್ನ ಸಮಯದಿ
ಬಿಸಿ ಬಿಸಿ ಅನ್ನ
ಘಮ ಘಮ ಸಾರು
ಸವಿಯಲು ಪ್ರೀತಿಯ
ತುಂಬಿ ಉಣಬಡಿಸುವರು
ನಮ್ಮ ಶಾಲಾ ಮಾತೆಯರು.
........................................ ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
ಬಣ್ಣದ ಚಿಟ್ಟೆ
-----------------
ನಮ್ಮ ಮನೆಗೆ ಹಾರಿ
ಬಂತು ಬಣ್ಣದ ಚಿಟ್ಟೆ
ಅದಕಾಗಿಯೇ ಬಣ್ಣ
ಬಣ್ಣದ ಹೂ ಗಿಡಗಳ ನೆಟ್ಟೆ
ಕೆಂಪು, ನೀಲಿ, ಹಸಿರು
ಬಿಳಿ ಬಣ್ಣದ ಚಿಟ್ಟೆ
ನಮ್ಮ ಮನೆಗೆ ಹಾರಿ
ಬಂತು ಬಣ್ಣದ ಚಿಟ್ಟೆ
ಅದನು ಹಿಡಿಯಲು ಹೋಗಿ
ನಾನು ಕಾಲು ಜಾರಿ ಬಿದ್ದು ಬಿಟ್ಟೆ
ನಮ್ಮ ಮನೆಗೆ ಹಾರಿ ಬಂತು
ಬಣ್ಣ ಬಣ್ಣದ ಚಿಟ್ಟೆ.
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************