-->
ಮಕ್ಕಳ ಕವನಗಳು : ಧೃತಿ

ಮಕ್ಕಳ ಕವನಗಳು : ಧೃತಿ

ಮಕ್ಕಳ ಜಗಲಿಯಲ್ಲಿ 
ಧೃತಿ ಬರೆದಿರುವ 
ಮಕ್ಕಳ ಕವನಗಳು


                ಪುಟ್ಟಹಕ್ಕಿ
           -----------------
ಆಕಾಶದಲ್ಲಿ ಅತ್ತಿಂದಿತ್ತ ಹಾರುತಲಿ 
ಚಿಲಿಪಿಲಿ ನಾದವ ಮಾಡುತಲಿ
ಮನಸ್ಸು ಬಿಚ್ಚಿ ಹಾರುತಲಿ 
ಮನಸ್ಸಿಗೆ ಮುದವನು ನೀಡುತಲಿ 
         ಆಹಾರ ಹುಡುಕುತ್ತಾ 
         ಕಡ್ಡಿ ಕಡ್ಡಿ ಜೋಡಿಸಿ
         ಗೂಡನ್ನು ಕಟ್ಟುತ್ತಾ
         ಮೇಲಿಂದ ಮೇಲೆ ಹಾರುತ್ತಾ 
ಭೂಮಿಯಲ್ಲಿ ಜನರ
ಭಯದಿ ಬದುಕುವ
ಬಾನಲಿ ಗಿಡುಗನ
ಭಯದಿ ನಡುಗುವ
      ಮಳೆ ಚಳಿ ಗಾಳಿಯನು ಲೆಕ್ಕಿಸದೆ
      ಮಾನವನ ಸಹಾಯವಿಲ್ಲದೆ
      ತನ್ನ ಬುದ್ಧಿಯ ಉಪಯೋಗಿಸಿ
      ತನ್ನ ಜೀವನವ ಸಾಗಿಸಿ 
ಪುಟ್ಟಹಕ್ಕಿ ನಲಿ - ನಲಿದು
ಚಿಲಿಪಿಲಿ ಇಂಪಾಗಿ ಉಲಿದು
ಸಂತಸದಿ ಜೊತೆಯಲಿ ಬದುಕಿತು
ಸಂಭ್ರಮದಿ ಸಂಸಾರ ಸಾಗಿತು
........................................................ ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
******************************************

                     ಅಮ್ಮ 
                   ------------
ನನ್ನ  ಪರಿಚಯಿಸಿದ ಜೀವವೇ ಅಮ್ಮ 
ಸಾರ್ಥಕವಾಯಿತು ಈ ನನ್ನ ಜನ್ಮ
ಪ್ರೀತಿಯಿಂದ ಮಾಡುವರು ಮುದ್ದು
ಹೇಳುವರು ತಿನ್ನಬೇಡ ಎಂದು ಕದ್ದು
      ಅಮ್ಮನ ಮಡಿಲು ಪ್ರೀತಿಯ ಕಡಲು
      ಕೊಟ್ಟಷ್ಟು ಮುಗಿಯದ ಮಮತೆಯ ಒಡಲು
      ಹೆತ್ತು ಹೊತ್ತು ಸಾಕಿದ ತಾಯಿ
      ನಮ್ಮನ್ನೆಲ್ಲಾ ಬೆಳೆಸಿದ ಕರುಣಾಮಯಿ 
ಸರಿ ತಪ್ಪುಗಳನ್ನು ತಿದ್ದಿತೀಡಿ
ಬಿದ್ದಾಗ ಎತ್ತಿ ಮುದ್ದು ಮಾಡಿ
ಅತ್ತಾಗ ಸಮಾಧಾನಪಡಿಸಿ
ಭಯವಾದಾಗ ಧೈರ್ಯ ತುಂಬಿಸಿ
      ಅವಳು ಸಹನೆಯ ಮೂರ್ತಿ
      ತರುವಳು ಬಾಳಿಗೆ ಕೀರ್ತಿ
      ತಾಯಿಯ ಮನಸ್ಸು ಸುಮ
      ಇವಳಿಗೆ ಯಾರು ಸಮ
ಕಾಲವ ನೀಡಿ  ಹರ್ಷಿಸುತ್ತಾ
ಕಾಲವ ನೀವಿ ನಲಿಸುತ್ತಾ
ಹತ್ತುಹಲವು ತಪ್ಪ ಕ್ಷಮಿಸಿ
ನೋವನ್ನೆಲ್ಲ ತಾನೇ ಸಹಿಸಿ
      ನಗಿಸುವಳು ಕಣ್ಣ ಮುಂದೆ
      ಆದರೆ ನೋವಿದೆ ಅದರ ಹಿಂದೆ
      ಕಾಯುವಳು ರಾತ್ರಿ-ಹಗಲು
      ಅವಳ ಪ್ರೀತಿಯ ಮಗಳು
........................................................ ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು  ದಕ್ಷಿಣ ಕನ್ನಡ ಜಿಲ್ಲೆ 
******************************************

Ads on article

Advertise in articles 1

advertising articles 2

Advertise under the article