ಮಕ್ಕಳ ಕವನ : ಡಿ. ಎಲ್. ಮಧುರ
Sunday, May 8, 2022
Edit
ಮಕ್ಕಳ ಜಗಲಿಯಲ್ಲಿ
ಡಿ. ಎಲ್. ಮಧುರ ಬರೆದಿರುವ
ಮಕ್ಕಳ ಕವನ
ಓ ನವಿಲೇ
--------------
ನವಿಲೇ ನವಿಲೇ ಓ
ಪಂಚರಂಗಿ ನವಿಲೇ.....
ನಿನ್ನ ಧ್ವನಿಯ ಕೇಳಿ
ತನ್ಮಯನಾದೆ ನಾನು
ನಿನ್ನ ಗರಿಯನ್ನು ಬಿಡಿಸುವ
ಚಿತ್ತಾರದ ಅಂದವನ್ನು
ನೋಡಿ ಬೆರಗಾದೆ ನಾನು
ನವಿಲೇ ನವಿಲೇ ಓ
ಹೆಣ್ಣವಿಲೇ....
ನಿನ್ನ ಆ ಸೌಂದರ್ಯವನ್ನು
ನೋಡಿ ಮೂಕವಿಸ್ಮಿತನಾದೆ ನಾನು
ಬಾ ಬಾ ನವಿಲೇ ನನ್ನೆಡೆಗೆ.....
ನಿನ್ನ ಅಂದವನ್ನು ನೋಡುವ
ಆಸೆ ನನಗೆ.....
8ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ರಾಮಕುಂಜ
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************