
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 1
Sunday, May 8, 2022
Edit
ವಿಶ್ವ ತಾಯಂದಿರ ದಿನ - ಜಗಲಿಯ ಮಕ್ಕಳ ಮಾತುಗಳು : ಸಂಚಿಕೆ - 1
ಮೇ -08 ರಂದು * ವಿಶ್ವ ತಾಯಂದಿರ ದಿನ *
ಜಗಲಿಯ ಮಕ್ಕಳು - ತಮ್ಮ ಅಮ್ಮನನ್ನು ಖುಷಿ ಪಡಿಸಿದ ವಿಶೇಷ ಸಂದರ್ಭಗಳನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ.... ತಮ್ಮ ಮುದ್ದಿನ ಅಮ್ಮನ ಪ್ರೀತಿಯ ಬಗ್ಗೆ ಮುದ್ದುಮುದ್ದಾದ ಮಾತುಗಳಲ್ಲಿ ಪ್ರಕಟವಾಗಿದೆ......
ನನ್ನ ಅಮ್ಮ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಪ್ರತಿದಿನವೂ ನಮ್ಮ ಜೊತೆ ಖುಷಿಪಡುತ್ತಾರೆ. ಅಮ್ಮ ಮನೆಯಿಂದ ಹೊರಗಡೆ ಹೋದಾಗ ನಾನು ಮತ್ತು ನನ್ನ ತಂಗಿ ಜೊತೆ ಸೇರಿಕೊಂಡು ಮನೆಯನ್ನು ಸ್ವಚ್ಛಗೊಳಿಸಿ, ವಸ್ತುಗಳನ್ನು ಅದರ ಸ್ಥಳದಲ್ಲೇ ಜೋಡಿಸಿಡುತ್ತೇವೆ. ಅಮ್ಮ ಬಂದಾಗ ನಮ್ಮ ಕೆಲಸವನ್ನು ತುಂಬಾ ಮೆಚ್ಚಿಕೊಳ್ಳುತ್ತಾರೆ. ನಾನು ಕೀಬೋರ್ಡ್ ನುಡಿಸುವಾಗ ಮತ್ತು ಹಾಡುವಾಗ ಅಮ್ಮ ತುಂಬಾ ಮೆಚ್ಚಿಕೊಳ್ಳುತ್ತಾರೆ. ಅಮ್ಮ ಶಾಲೆಗೆ ಹೋದಾಗ, ನಾನು ಒಮ್ಮೆ ನನ್ನ ಕನ್ನಡ ಪಾಠಪುಸ್ತಕದಲ್ಲಿದ್ದ ಸಂಭಾಷಣೆಯನ್ನು ಓದಿ , ರೆಕಾರ್ಡ್ ಮಾಡಿ ಅಮ್ಮನಿಗೆ ಕಳಿಸಿದ್ದೆ. ಓದಿದ ರೀತಿ ತುಂಬಾ ಚೆನ್ನಾಗಿತ್ತೆಂದು ಅಮ್ಮ ಸಂತೋಷಪಟ್ಟರು. ನನ್ನ ತಂಗಿ ಚಿತ್ರಗಳನ್ನು ಬಿಡಿಸುತ್ತಾ, ಅಮ್ಮನಿಗೆ ಅವಳದ್ದೇ ಆಲೋಚನೆಗಳ ಕ್ರಾಫ್ಟ್ ಗಳನ್ನು ಆಗಾಗ ಮಾಡಿ Surprise ಕೊಡ್ತಾಳೆ. ಅವಳು ಸಣ್ಣವಳು... ನೆಲ ಒರೆಸುವುದು, ಕಸ ಗುಡಿಸುವುದು ಹೀಗೆ ಅಮ್ಮನ ಕೆಲಸಗಳಿಗೆ ಸಹಾಯ ಮಾಡ್ತಾಳೆ.
ಅಮ್ಮ ನಮ್ಮ ಎಲ್ಲಾ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಳ್ಳುತ್ತಾ, ತಪ್ಪುಗಳನ್ನು ಆಗಲೇ ತಿದ್ದುತ್ತಾರೆ. ಎಲ್ಲ ಅಮ್ಮಂದಿರಿಗೂ ಈ ದಿನದ ಶುಭಾಶಯಗಳು..............
ಅನ್ವೇಷ್ ಅಂಬೆಕಲ್ಲು 7ನೆಯ ತರಗತಿ ಮತ್ತು
ಕ್ಷಿತಿ ಹಿಮಾನಿ 2ನೆಯ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ , ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು... ನಾನು ವೈಶಾಲಿ........ ತಾಯಿಯ ಜೊತೆ ಕಳೆದ ಪ್ರತಿಕ್ಷಣವು ಅದ್ಭುತವಾದ ಕ್ಷಣವಾಗುತ್ತದೆ. ತಾಯಿಯು ಕೊಟ್ಟ ಪ್ರೀತಿ ಈ ಪ್ರಪಂಚದಲ್ಲಿ ಯಾರೂ ಕೊಡಲಾರರು. ತಾಯಿಯ ಋಣವನ್ನು ಎಷ್ಟು ಬಾರಿ ಜನಿಸಿದರೂ ತೀರಿಸಲಾಗದು. ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾಠಗಳನ್ನು ಕಲಿಸುವ ಗುರು ತಾಯಿ. ನಮ್ಮಭಾರತೀಯ ಸಮಾಜವು ಮಾತೃ ದೇವೋಭವ, ಪಿತೃದೇವೋಭವ ಮತ್ತು ಆಚಾರ್ಯ ದೇವೋಭವ ಎಂದು ತಾಯಿಗೆ ಮೊದಲ ಆದ್ಯತೆ ನೀಡಿದೆ. ನನ್ನ ತಾಯಿ ನನ್ನ ಆತ್ಮೀಯ ಸ್ನೇಹಿತೆ, ನನ್ನ ಗುರು, ನನ್ನ ಶಕ್ತಿ, ನನಗೆ ಅಮ್ಮನೇ ಎಲ್ಲಾ. ನನ್ನ ಮೊದಲ ದೇವರು ನನ್ನ ತಾಯಿ. ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ತಾಯಿಯನ್ನು ಸೃಷ್ಟಿಸಿದ ಎಂಬುದು ಬರೀ ಮಾತಲ್ಲ, ಅದು ನಿಜ ಕೂಡಾ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ. ನಾನು ಬೇಸರದಲ್ಲಿದ್ದಾಗ ಖುಷಿ ಪಡಿಸುವುದು ಅಮ್ಮ. ಮಗುವಿನ ತೊದಲು ನುಡಿಯೇ ಅಮ್ಮ . ತಾನು ಅರೆಹೊಟ್ಟೆಯಲ್ಲಿದ್ದರೂ ಮಕ್ಕಳು ಹಸಿದಿರಬಾರದು ಎಂದು ಕಷ್ಟಪಡುವವರು ಅಮ್ಮ. ಏನಾದರೂ ಕಷ್ಟ ಬಂದರೆ ಅದಕ್ಕೆ ಒಂದು ದಾರಿ ತೋರಿಸಿ ಪ್ರೀತಿಯಿಂದ ಹೇಳುವರು. ಎಲ್ಲರ ಬದುಕಿನ ಅಣು ಅಣು ಕೂಡಾ ಅಮ್ಮ ಕೊಟ್ಟ ಭಿಕ್ಷೆ. ಅಮ್ಮನ ಮಮತೆಯ ಆಳ, ಅಗಲವನ್ನು ಅಳೆಯಲು ಯಾರಿಂದಲೂ ಸಾಧ್ಯವೇ ಇಲ್ಲ . ಬರೀ ಒಂದೆರಡು ಪದಗಳಲ್ಲಿ ತಾಯಿಯನ್ನು ಬಣ್ಣಿಸುವುದು ಕೂಡಾ ಸಾಧ್ಯವಿರುವ ಮಾತಲ್ಲ. ತಾಯಿ ನಮ್ಮನ್ನು ಒಂಭತ್ತು ತಿಂಗಳು ಗರ್ಭದಲ್ಲಿ ಇಟ್ಟು ಹೆತ್ತು, ಹೊತ್ತು , ಸಾಕಿ - ಸಲಗಿ ನನ್ನನ್ನು ಜಗತ್ತಿಗೆ ತೋರಿಸಿಕೊಟ್ಟ ನನ್ನ ತಾಯಿಗೆ ಯಾವಗಲೂ ನಾನು ಚಿರ ಋಣಿ ಯಾಗಿರುತ್ತೇನೆ.
10ನೇ ತರಗತಿ
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ
ಸರಕಾರಿ ಪ್ರೌಢಶಾಲೆ , ಶಂಭೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು... ನಾನು ಸೌಭಾಗ್ಯ ಪಿ ........ ನನ್ನ ಅಮ್ಮನಿಗೆ ನಾನು ಪ್ರಶಸ್ತಿ ಪಡೆದಾಗ, ಪರಿಕ್ಷೆಗೆ ಉತ್ತಮ ಅಂಕಗಳು ಬಂದಾಗ ಖುಷಿಯಗುತ್ತದೆ. ನನಗೆ ನನ್ನ ಅಮ್ಮ ಎಂದರೆ ತುಂಬಾ ಇಷ್ಟ. ನಮ್ಮ ಅಮ್ಮ ನಮ್ಮನು ಹೆತ್ತು, ಸಾಕಿ ಮತ್ತು ಬೆಳೆಸಿದ್ದಾರೆ. ನನಗೆ ಜ್ವರ ಬಂದಾಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ನನ್ನ ಅಮ್ಮ ಎಂದರೆ ತುಂಬಾ ಇಷ್ಟ.
6ನೇ ತರಗತಿ
ಪಾಪ್ಯುಲರ್ ಬಂಟ್ಸ್ ಇಂಗ್ಲೀಷ್ ಮೀಡಿಯಂ
ಹೈಸ್ಕೂಲ್ , ಬಜ್ಪೆ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
**********************************************
ನಾನು ರಂಜಿತಾ ಶೇತಸನದಿ ಅಮ್ಮನನ್ನು ಖುಷಿ ಪಡಿಸಿದ ಸಂದರ್ಭ............
ತಾಯಿಯೆ ಮೊದಲ ಜನನಿ ಎಂದ ಹಾಗೆ ನವ ಮಾಸದಿ ತಾ ನೊಂದು ನನಗೆ ಜೀವ ಕೊಟ್ಟ ನನ್ನ ತಾಯಿಗೆ ಎಂದೆಂದಿಗೂ ನಾ ಅಭಾರಿ. ನನ್ನ ತಾಯಿಯನ್ನು ಖುಷಿ ಪಡಿಸಿದ ಸಂದರ್ಭವೆಂದರೆ ನಾನು ಮಾಡುವ ಎಲ್ಲಾ ಸಣ್ಣ, ಪುಟ್ಟ ಕೆಲಸಗಳಿಗೆ ಅವಳು ಅಡಿಪಾಯ ಹಾಕಿ ಕೊಟ್ಟಾಗ ನಾನು ಅದನ್ನ ಸರಿಯಾಗಿ ನಿಭಾಯಿಸಿ ಅವಳಿಗೆ ಹೇಳಿದಾಗ ಖುಷಿ ಪಡುತ್ತಾಳೆ. ನಾನು ಸದಾ ಕಾಲ ಸಂತೋಷದಿಂದ ಇದ್ದೇನೆ ಎಂದು ತಿಳಿದಾಗ ಅವಳು ಸಹ ಖುಷಿಯಾಗಿರುತ್ತಾಳೆ. ನನ್ನೆಲ್ಲಾ ನಲಿವುಗಳನ್ನು ಅವಳೊಂದಿಗೆ ಹಂಚಿಕೊಂಡಾಗ ಅವಳು ನನ್ನ ನಲಿವಿನಲ್ಲೇ ನಲಿಯುತ್ತಾಳೆ. ನನ್ನೆಲ್ಲಾ ದುಃಖದ ವಿಷಯಗಳನ್ನು ಅವಳೊಂದಿಗೆ ಹಂಚಿಕೊಂಡಾಗ ಅವಳು ಸಹ ದುಃಖಪಡುತ್ತಾಳೆ, ಅದು ನನಗೆ ಅತ್ಯಂತ ಬೇಸರದ ಸಂಗತಿಯಾಗಿದೆ. ಯಾವುದೇ ಒಂದು ವಿಷಯ ಅಥವಾ ಕೆಲಸದಲ್ಲಿ ಸೋಲನ್ನಪ್ಪಿದಾಗ ನನ್ನ ತಾಯಿ ಎಂದಿಗೂ ನನ್ನನ್ನು ತಿರಸ್ಕರಿಸಲಿಲ್ಲ..... ಬದಲಿಗೆ ನನ್ನ ಬೆನ್ನೆಲುಬಾಗಿ ನಿಂತು ನನ್ನ ಜಯಕ್ಕೆ ಹೆಸರಾದ ಹಲವಾರು ಸಂಗತಿಗಳಿವೆ. ಇಂತಹ ವಿಷಯಗಳು ನನಗೂ ಮತ್ತು ನನ್ನ ತಾಯಿಗೂ ಖುಷಿ ಕೊಟ್ಟಿದೆ ಎಂದು ಹೇಳಬಯಸುತ್ತೇನೆ. ನನ್ನ ನಲಿವಿಗೆ ಹೆಸರಾದ ನನ್ನ ತಾಯಿಗೆ ಹಲವಾರು ವಿಷಯಗಳಿಂದ ನಾನು ಆಕೆಯ ಮನಸ್ಸಿಗೆ ನೋವನ್ನು ಮಾಡಿರಬಹುದು ಆ ಕಾರಣದಿಂದ ನಿನ್ನಲ್ಲಿ ನಾ ಕ್ಷಮೆಯಾಚಿಸುತ್ತೇನೆ.
ದೇಹಕ್ಕೆ ಆದ ನೋವನ್ನು ಸಹಿಸಿಕೊಳ್ಳಬಹುದು ಆದರೆ ಮನಸ್ಸಿಗೆ ಆದ ನೋವನ್ನು ಸಹಿಸಿಕೊಳ್ಳುವುದು ಕಷ್ಟ , ಎಂದು ನನಗೆ ನೀ ತಿಳಿಹೇಳಿದೆ. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವುದನ್ನು ನೀ ನನಗೆ ಕಲಿಸಿದೆ. ನಿನ್ನೆಲ್ಲಾ ತ್ಯಾಗದ ಬಲಿದಾನಕ್ಕೆ ನಾ ಚಿರಋಣಿ ಅಮ್ಮ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ ತಾ /ಜಿ /ಹಾವೇರಿ
********************************************
ಅಮ್ಮನ ಆಕಾಂಕ್ಷೆಯಂತೆ ಭರತನಾಟ್ಯಕ್ಕೆ ಸೇರಿ ಹೆಜ್ಜೆ ಕಲಿತು ಮೊದಲ ಹೆಜ್ಜೆ ಇಟ್ಟಾಗ ಅಮ್ಮನ ಮುಖದಲ್ಲಿ ಮೂಡಿದ ನಗು ಮರೆಯಲಸಾಧ್ಯ. .................................ದಿವ್ಯ ತನಿಷ್ಕ ಅಮೀನ್
2ನೇ ತರಗತಿ
ಲೇಡಿಹಿಲ್ ಇಂಗ್ಲಿಷ್ ಹೈಯರ್ ಪ್ರೈಮರಿ
ಸ್ಕೂಲ್, ಉರ್ವ, ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
**********************************************
ತಾಯಂದಿರ ದಿನದ ಹಾರ್ಧಿಕ ಶುಭಾಶಯಗಳು ಅಮ್ಮ ....... ನಾನು ವಂದನಾ. ಪಿ..... ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ. ತಾಯಿಗಿಂತ ದೊಡ್ಡ ದೇವರಿಲ್ಲ..... ಅಮ್ಮ ಎಂದರೆ ದೇವರ ಮತ್ತೊಂದು ಸುಂದರವಾದ ಸ್ವರೂಪ. ತಾಯಿ ಮಗುವಿನ ಮೊದಲ ಗುರು. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಇದೆ.... ತಾಯಿಯೂ ನಮ್ಮನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಾಳೆ. ತಾಯಿಯೂ ಮಗುವಿನ ನಗುವಲ್ಲಿ ನಗುತ್ತಾಳೆ. ಮಗು ಅತ್ತಾಗ ಅಳುತ್ತಾಳೆ. ನನ್ನ ತಾಯಿ ಎಂದರೆ ನನಗೆ ತುಂಬಾ ಇಷ್ಟ. ನಾನು ಆವಳನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ. ನನ್ನ ತಾಯಿ ತುಂಬಾ ಸಂತೋಷ ಪಟ್ಟ ಕ್ಷಣವೆಂದರೆ.. ನಾನು ಆವಳನ್ನು ಖುಷಿ ಪಡಿಸಿದ ಕ್ಷಣವೆಂದರೆ... ನನಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದಾಗ ಅವಳು ತುಂಬಾ ಖುಷಿ ಪಡುತ್ತಾಳೆ. ನನಗೆ ಬಹುಮಾನಗಳು ದೊರೆತಾಗ ಅವಳು ಖುಷಿ ಪಡುತ್ತಾಳೆ. ಅವಳ ಹುಟ್ಟುಹಬ್ಬದ ದಿನ ನಾನು ಅವಳಿಗೆ ಉಡುಗೊರೆ ನೀಡಿದಾಗ ಖುಷಿ ಪಡುತ್ತಾಳೆ. ನಾನು ಹಿರಿಯರನ್ನು ಗೌರವಿಸುವ ಕ್ಷಣ ಅವಳು ಖುಷಿ ಪಡುತ್ತಾಳೆ. ನನ್ನ ಉತ್ತಮ ನಡೆ-ನುಡಿಗಳನ್ನು ನೋಡಿ ಖುಷಿ ಪಡುತ್ತಾಳೆ.
10 ನೇ ತರಗತಿ
ವಿಠ್ಠಲ ಕಾಲೇಜು, ಪ್ರೌಢಶಾಲಾ ವಿಭಾಗ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************
ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ನಾನು ರೋಜಾ....... ನನ್ನ ಅಮ್ಮನೆ ನನ್ನ ಪ್ರಪಂಚ . ನನ್ನ ತಾಯಿ ನನಗೆ ಎಲ್ಲಾ ವಿಷಯದಲ್ಲೂ ಸಹಾಯ ಮಾಡುತ್ತಾಳೆ. ನಾನು ಅವಳ ಬಳಿ ಕೇಳದೆ ಇದ್ದರೂ ಸಹ ಅವಳೇ ನನಗೆ ಬೇಕಾದಂತಹ ವಸ್ತುಗಳನ್ನ ತಂದು ಕೊಡುತ್ತಾಳೆ. ತಂದೆಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾಳೆ. ಅವಳೆ ನಮಗೆ ತಂದೆ ಹಾಗೂ ತಾಯಿ ಆಗಿರುತ್ತಾಳೆ. ಅವಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಓದಿನಲ್ಲಿ ಸಹಾಯ ಮಾಡಿದ್ದಾಳೆ. ಅವಳೇ ನನ್ನ ಮೊದಲ ಗುರು. ಅವಳು ನಡೆದ ದಾರಿಯಲ್ಲೆ ನಾನು ನಡೆಯಬೇಕೆಂಬುದೇ ನನ್ನ ಆಸೆ. ನಾನು ಯಾವುದಾದ್ರೂ ಕೆಲಸ ಮಾಡಿದಾಗ ಅದನ್ನು ನೋಡಿ ಖುಷಿ ಪಡುತ್ತಾಳೆ. ಆ ಕೆಲಸವನ್ನು ಮಾಡಲು ನಮ್ಮಲ್ಲಿ ಹುರಿದುಂಬುತ್ತಾಳೆ. ಅವಳನ್ನ ತಾಯಿಯಾಗಿ ಪಡೆಯಲು ನಾನು ಪುಣ್ಯ ಮಾಡಿರುವೆ
Bcom 1 year
ಸಿ ಜಿ ಬೆಲ್ಲದ ಪ್ರಥಮ ದರ್ಜೆ ಕಾಲೇಜು ಅಕ್ಕಿ ಆಲೂರು , ಇನಾಮ ನೀರಲಗಿ
ತಾಲ್ಲೂಕು - ಹಾನಗಲ್ , ಜಿಲ್ಲೆ - ಹಾವೇರಿ
**********************************************