-->
ಮಕ್ಕಳ ಕವನಗಳು : ಶೃಜನ್ ಜೆ. ರೈ.

ಮಕ್ಕಳ ಕವನಗಳು : ಶೃಜನ್ ಜೆ. ರೈ.

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಕವನಗಳು

             ರೈತ
          -----------
ಎಲ್ಲರಿಗೂ ಅನ್ನದಾತ ರೈತ
ಕೇಳಬೇಕು ಅವನ ಮಾತ
ಬೆವರು ಸುರಿಸಿ ದುಡಿಯಬೇಕು
ದುಡಿದು ಊಟ ಮಾಡಬೇಕು
      ಮಾಡುತ್ತಾನೆ ಅವ ಬೇಸಾಯ
      ನಮಗೆಲ್ಲ ಅವನೇ ಅಡಿಪಾಯ |
      ರೈತನು ದೇಶದ ಬೆನ್ನೆಲುಬು ನಿಜವಣ್ಣ  
      ರೈತನ ಬೆಳೆ ನಾಶವಾಗದಿದ್ದರೆ ಸಾಕಣ್ಣ||
ನಮಗೆಲ್ಲ ರೈತರೇ ಸ್ಪೂರ್ತಿ
ಬೆಳಗಲಿ ರೈತರ ಕೀರ್ತಿ|
ನಮಗೇನು ಗೊತ್ತು ರೈತರ ಕಷ್ಟ
ನೀ ಅನ್ನವನ್ನು ಮಾಡಬೇಡ ನಷ್ಟ||.
........................................ ಶೃಜನ್ ಜೆ. ರೈ. 
7 ನೇ ತರಗತಿ. 
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. 
ತೆಂಕಿಲ, ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ನಮ್ಮ ದೇಶ ಭಾರತ
       ----------------------
ನಾನೊಂದು ಬರೆದ ಕವನ 
ಭಾರತ ಮಾತೆಗೆ ನನ್ನಯ ನಮನ|
ನಮ್ಮ ದೇಶ ಭಾರತ 
ಇತಿಹಾಸವ ಸಾರುತ||
     ಗಾಂಧೀಜಿ ಹೋರಾಟ ಮಾಡುತ
     ಸ್ವತಂತ್ರವಾಯಿತು ದೇಶ ಭಾರತ|
     ಸಾಹಸ ಹೋರಾಟದ ಧೀರ ನಾಯಕರು
     ಅವರಿಗೆ ನಾವು ಗೌರವ ನೀಡುವೆವು ||
ಹೋರಾಟ ಮಾಡುತ ವೀರ ಯೋಧರು
ಜೀವ ತ್ಯಾಗ ಮಾಡಿ ಸ್ವಾತಂತ್ರ್ಯ ತಂದರು |
ಬ್ರಿಟಿಷರ ಓಡಿಸಿದ ದೇಶದ ಜನರ ಪರಿಶ್ರಮ
ಈಗ ನಮಗೆ ಸಿಕ್ಕಿದೆ ಸ್ವಾತಂತ್ರ್ಯದ ಸಂಭ್ರಮ||
     ದೇಶದೆಲ್ಲೆಡೆ ಹಾರಲಿ ತ್ರಿವರ್ಣ ಬಾವುಟ|
     ಧ್ವಜದ ನಡುವೆ ಅಶೋಕ ಚಕ್ರ ಕಾಣುತ||
     ಭಾವೈಕ್ಯತೆ ನೆಲೆಸಿ ದೇಶದಿ ಕಾಣಲಿ ಶಾಂತಿ|
     ಒಗ್ಗಟ್ಟು ಮೂಡಿ ಮೆರೆಯಲಿ ದೇಶದ ಕೀರ್ತಿ||.
 ........................................ ಶೃಜನ್ ಜೆ. ರೈ. 
7 ನೇ ತರಗತಿ. 
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. 
ತೆಂಕಿಲ, ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article