ಮಕ್ಕಳ ಕವನಗಳು : ಹೃತಿಕ್
Sunday, May 8, 2022
Edit
ಮಕ್ಕಳ ಜಗಲಿಯಲ್ಲಿ
ಮಕ್ಕಳ ಕವನಗಳು
ಇನ್ನೂ ಬಾಕಿ ಇದೆ
-----------------
ಕವಿಯಿತು ಕಗ್ಗತ್ತಲು
ಪ್ರಶಾಂತವಾಯಿತು ಧರೆ
ಮೇಘಗಳೊಡೆದು ಹನಿ ಹನಿ ಮಳೆ
ಸುರಿಯುವುದು
ಇನ್ನೂ ಬಾಕಿ ಇದೆ
ಮಳೆ ಹನಿಗಳು ಧರೆಗೆ ಬಿದ್ದು
ಧರೆಯನ್ನು ನೆನೆಸುವುದು
ಇನ್ನೂ ಬಾಕಿ ಇದೆ
ಹನಿ ಹನಿಗಳು ಹೊಳೆ ಹೊಳೆಯುತ್ತಾ
ಧರೆಗೆ ಬಿದ್ದು ಮುತ್ತಾಗುವುದು
ಇನ್ನೂ ಬಾಕಿ ಇದೆ
ತಂಪಾದ ಹನಿಗಳಿಂದ
ಗಿಡ ಮರಗಳು
ಸಂತಸದಿ ನಲಿಯುವುದು
ಇನ್ನೂ ಬಾಕಿ ಇದೆ
ಮಳೆಯ ನಿರೀಕ್ಷೆಯಲ್ಲಿರುವ
ಭೂಮಿ ತಣಿಯುವುದು
ಇನ್ನೂ ಬಾಕಿ ಇದೆ..
10ನೇ ತರಗತಿ
ಶ್ರೀದೇವಿ ವಿದ್ಯಾ ಕೇಂದ್ರ ದೇವಿನಗರ , ಪುಣಚ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************