ಮಕ್ಕಳ ಕವನಗಳು : ಶ್ರೇಯಾ
Sunday, May 8, 2022
Edit
ಮಕ್ಕಳ ಕವನಗಳು
ಆಹಾರ ಪದ್ಧತಿ
--------------------
ಅಂದಿನ ಊಟ ಬಾಳೆ ಎಲೆಯಲಿ
ಇಂದಿನ ಊಟ ಪ್ಲಾಸ್ಟಿಕ್ ತಟ್ಟೆಯಲಿ
ಆಗ ತಿನ್ನಲು ಪೂರಿ
ಈಗ ತಿನ್ನಲು ಪಾನೀಪೂರಿ
ಅಂದು ತಿನ್ನುತ್ತಿದ್ದರು ಹೆಲ್ತ್ ಪುಡ್
ಇಂದು ತಿನ್ನುತ್ತಿದ್ದಾರೆ ಪಾಸ್ಟ್ ಪುಡ್
ಆಗ ತಿನ್ನಲು ರಾಗಿ
ಈಗ ತಿನ್ನಲು ಮ್ಯಾಗಿ
ಅಂದು ಕುಡಿಯಲು ಸಿಹಿ ಹಾಲ
ಇಂದು ಕುಡಿಯಲು ಕೋಕೋ ಕೋಲ
ಮೊದಲು ತಿನ್ನಲು ಆಸೆ
ಈಗ ಬಂದಿದೆ ದುರಾಸೆ
ಆಗ ಇತ್ತು ಆರೋಗ್ಯ
ಈಗ ಆಗಿದೆ ಅನಾರೋಗ್ಯ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************