
ಮಕ್ಕಳ ಕವನಗಳು : ರಿಧಾ ಡೋರಳ್ಳಿ
Monday, May 2, 2022
Edit
ರಿಧಾ ಡೋರಳ್ಳಿ
3 ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ
ಇವರು ಬರೆದಿರುವ 3 ಕವನಗಳು ಇಲ್ಲಿವೆ
ನಮ್ಮ ಸನಾ
(ತಂಗಿಯ ಕುರಿತು ಕವನ)
---------------------------
ಇವಳೇ ನಮ್ಮ ಸನಾ
ತುಂಬಾ ತುಂಬಾ ಒಣಾ
ಖಾರವೆನು ತಿನ್ನೋದೆ ಇಲ್ಲ
ಎಷ್ಟೇ ಹೇಳಿದ್ರು
ಇವಳೇ ನಮ್ಮ ಸನಾ
ಟೊಣಾ ಟೊಣಾ ಟೊಣಾ
ಶಾಲೆಗೆ ಹೋಗುವಳು
ಹೋಂವರ್ಕ ಮಾಡುವಳು
ಇವಳೇ ನಮ್ಮ ಸನಾ
ಟೊಣಾ ಟೊಣಾ ಟೊಣಾ
............................................ ರಿಧಾ ಡೋರಳ್ಳಿ
3 ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************
ಜೈ ಹನುಮಂತ
--------------------------
ಜೈ ಹನುಮಂತ ನೀ ಗುಣವಂತ
ನೋಡುವೆ ಯಾರನ್ನು
ರಾಮನ ಪ್ರಾಣ, ರಾಮನ ಭಕ್ತ
ಹುಡುಕುವೆ ಯಾರನ್ನು //ಪ//
ನಾ ನಿನ್ನನು ಪೂಜಿಸುವೆ
ನಿನ್ನ ಹಾಡನು ನಾ ಹಾಡುವೆ
ದಯೆ ಪಾಲಿಸು ನಮಗೆ
ಕರುಣೆ ತೋರು ನೀ ನಮಗೆ/ಪ/
ಎದೆಯಲಿ ಇರುವರು. . . .
ಆ.. ಮಹಾ ದೇವರು. . . .
ಅವರಿಗೆ ನೀನೆ ಪ್ರಾಣ,
ಅವರಿಗೆ ನೀನೆ ಗೆಲುವು
ಜೈಶ್ರೀರಾಮ, ಜೈಹನುಮಂತ /ಪ/
ಗಿಡದಿಂದ ಗಿಡವ ಹಾರುವೆ
ಯಾರಿಗೂ ಹೆದರಲಾರದೆ
ನೀ ಬಾಳುವೆ
ವರವ ಪಾಲಿಸೋ ನೀ
ಕರುಣೆ ಪಾಲಿಸು //ಪ//
ವಾಯು ಪುತ್ರನು ನೀ
ಅಂಜನಿ ಮಾತೆಯ ಮಗನು ನೀ
ಸೂರ್ಯನೊಂದಿಗೆ ಆಡಲು ಹೋಗಿ
ಸೌರಮಂಡಲವ ನಡುಗಿಸಿದೆ
ಬಲವಾನ, ಶಕ್ತಿದಾತನೇ ನೀನು
ಜೈ ಶ್ರೀರಾಮ, ಜೈ ಜೈ ಮಾರುತಿ //ಪ//
............................................ ರಿಧಾ ಡೋರಳ್ಳಿ
3 ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ
********************************************
ಭೂತಾಯಿ
----------------
ಪೂಜಿಸುವೆ ನಾ ಪೂಜಿಸುವೆ
ಭೂ ತಾಯಿಯನು ನಾ
ಪೂಜಿಸುವೆ. . . .
ಗಾಳಿಯು ನೀನೆ. . .
ಉಸಿರು ನೀನೆ. . . .
ನಮ್ಮನು ಬೆಳೆಸಿದ
ಮಹಾತಾಯಿಯು ನೀನೆ. /ಪ/
ಹಣ್ಣು ನೀನೆ. . .
ಹೂವು ನೀನೆ. .
ನಮಗೆ ಜನ್ಮ ನೀಡಿದ
ಮಹಾಮಾತೆಯು ನೀನೆ. . .
ಸೌರಮಂಡಲದಲಿ
ಇರುವೆ ನೀನು. . . .
ಜೀವಿಗಳನು ಹೊಂದಿರುವೆ ನೀನು. . . .
ಪೂಜಿಸುವೆ ನಾ ಪೂಜಿಸುವೆ
ಭೂತಾಯಿಯನು ನಾ
ಪೂಜಿಸುವೆ.
ಮಣ್ಣನು ನೀ ಕೊಡುವೆ
ಹೊನ್ನನು ನೀ ಕೊಡುವೆ
ಉಸಿರಾಡುವ ಗಾಳಿಯ
ನೀ ಕೊಡುವೆ. . . .
ಮಾರ್ಗವು ನೀನೆ. . . .
ಸ್ವರ್ಗವು ನೀನೆ. . .
ದಾರಿಯ ತೋರುವ
ಗುರುವು ನೀನೆ...... /ಪ/
ನಿನ್ನನು ನಾನು ಉಳಿಸುವೆನು
ಮರಗಿಡಗಳನು ಬೆಳೆಸುವೆನು
ಸ್ವಚ್ಛ ಗಾಳಿಯನು ಪಡೆಯುವೆನು
ಕಲುಷಿತದಿಂದ ನಿನ್ನನು
ಮುಕ್ತ ಮಾಡುವೆನು
ಪೂಜಿಸುವೆ ನಾ ಪೂಜಿಸುವೆ
ಭೂ-ತಾಯಿಯನು ನಾ ಪೂಜಿಸುವೆ.
3 ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ
ಹುಬ್ಬಳ್ಳಿ , ಧಾರವಾಡ ಜಿಲ್ಲೆ