ಮಳೆಗಾಲ (ಕವನ) : ಗ್ರೀಷ್ಮಾ
Monday, May 2, 2022
Edit
ಗ್ರೀಷ್ಮಾ
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಳೆಗಾಲ (ಕವನ)
------------------
ಬೇಸಿಗೆ ಕಾಲ ಕಳೆಯಲು
ಪ್ರಾಣಿ ಪಕ್ಷಿಗಳು ಆಹಾರ ಸಂಗ್ರಹಿಸಲು
ಇರುವೆಗಳು ಗೂಡಿಗೆ ಮರಳಲು
ಮಳೆಗಾಲವು ಆರಂಭವಾಗಲು
ಮೋಡ ಕವಿದು ತಂಪಾದ ಗಾಳಿ ಬೀಸಿತು
ಮೋಡಗಳೆರಡು ಒಂದಾಯಿತು
ಗುಡುಗು ಮಿಂಚು ಆರಂಭವಾಯಿತು
ಹನಿ - ಹನಿಯಾಗಿ ಮಳೆ ಸುರಿಯಿತು
ಮಣ್ಣಿನ ಕಂಪು ಸೂಸಿತು ಇಳೆ
ಭೂಮಿಯ ತುಂಬಾ ಹಚ್ಚ - ಹಸುರಿನ ಕಳೆ
ಧಾರಾಕಾರವಾಗಿ ಸುರಿಯಿತು ಮಳೆ
ರಭಸದಿ ತುಂಬಿ ಹರಿದವು ಹೊಳೆ
ಮಳೆಗಾಲದಿ ಚಿಗುರಿತು ಗಿಡಮರಗಳು
ಪ್ರಕೃತಿಯಲ್ಲಿ ಅರಳಿತು ವಿಧ - ವಿಧ ಹೂಗಳು
ಖುಷಿಯಲ್ಲಿ ಹಾರಾಡಿತು ಬಣ್ಣದ ಚಿಟ್ಟೆಗಳು
ಸಂತಸದಿ ನಲಿದಾಡಿತು ಪ್ರಾಣಿ ಪಕ್ಷಿಗಳು
8ನೇ ತರಗತಿ
ಸ.ಪ್ರೌ. ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************