
ಶ್ರೀಮಂತ ಮತ್ತು ಬಡ ಹುಡುಗ : ಚಿತ್ರಕಥೆ - 9
Sunday, May 1, 2022
Edit
ನಿನಾದ್ ಕೈರಂಗಳ
5ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದನು. ಅವನಿಗೆ ಅಡಿಕೆ ತೋಟ ಇತ್ತು ಹಾಗೂ ನೂರು ಕುರಿಗಳನ್ನು ಸಾಕುತ್ತಿದ್ದನು. ಅದೇ ಊರಿನಲ್ಲಿ ಇನ್ನೊಬ್ಬ ಹುಡುಗನಿದ್ದನು. ಅವನು ತುಂಬಾ ಬಡವ. ಅವನಿಗೆ ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಅವನು ಶ್ರೀಮಂತನ ಮನೆಗೆ ಹೋಗಿ ಕೆಲಸ ಮಾಡುತ್ತಿದ್ದನು. ಅವನು ಸರಿಯಾಗಿ ಕೆಲಸ ಮಾಡದಿದ್ದರೆ ಅವನಿಗೆ ಶ್ರೀಮಂತ ಪೆಟ್ಟು ಕೊಡುತ್ತಿದ್ದನು.
ಒಂದು ದಿನ ಅವನು ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಅಲ್ಲಿ ಒಂದು ಚಿನ್ನದ ಅಡಿಕೆ ಸಿಕ್ಕಿತು. ಬಡವ ಚಿನ್ನದ ಅಡಿಕೆಯನ್ನು ಹೆಕ್ಕಿಕೊಂಡು ಬಂದನು. ಇದನ್ನು ನೋಡಿದ ಶ್ರೀಮಂತ ಬಡವನ ಕೈಯಿಂದ ಚಿನ್ನದ ಅಡಿಕೆಯನ್ನು ಕಿತ್ತುಕೊಂಡನು. ಆಗ ಬಡವನಿಗೆ ತುಂಬಾ ಬೇಸರವಾಯಿತು.
ರಾತ್ರಿ ಶ್ರೀಮಂತ ಮಲಗುವಾಗ ಚಿನ್ನದ ಅಡಿಕೆಯನ್ನು ಅವನ ಹತ್ತಿರ ಇಟ್ಟು ಮಲಗಿದನು. ಬಡವ ಹುಡುಗ ತುಂಬಾ ಬೇಸರದಲ್ಲಿ ಒಂದು ದೊಡ್ಡ ಊರಿಗೆ ಬಂದನು. ಅಲ್ಲಿ ಒಂದು ದೊಡ್ಡ ಮರದಡಿಯಲ್ಲಿ ಕುಳಿತನು. ರಾತ್ರಿಯಾದಾಗ ಅಲ್ಲೇ ಮಲಗಿದನು.
ಆದರೆ ಬೆಳಗಾದಾಗ ಮರದಡಿಯಲ್ಲಿ ಮಲಗಿದ ಬಡ ಹುಡುಗ ಶ್ರೀಮಂತನಾಗಿದ್ದನು. ಚಿನ್ನದ ಅಡಿಕೆಯನ್ನು ತನ್ನ ಬಳಿ ಇಟ್ಟು ಮಲಗಿದ ಶ್ರೀಮಂತ ಬಡವನಾಗಿದ್ದನು. ಬಡ ಹುಡುಗನಿಗೆ ದೊಡ್ಡ ಬಂಗಲೆ , ಊಟ , ತಿಂಡಿ , ಚಿನ್ನ , ಎಲ್ಲವೂ ಸಿಕ್ಕಿತು.
ಶ್ರೀಮಂತನಾಗಿದ್ದವನು ತೋಟ , ನೂರು
ಕುರಿಗಳು , ಚಿನ್ನ , ದೊಡ್ಡ ಬಂಗಲೆಯನ್ನು ಕಳೆದುಕೊಂಡನು. ಶ್ರೀಮಂತನಿಗೆ ತುಂಬಾ ಬೇಸರವಾಯಿತು. ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಯಿತು.
ಸ್ವಲ್ಪ ದಿನಗಳ ನಂತರ ಹುಡುಗ , ಶ್ರೀಮಂತನನ್ನು ಹುಡುಕಿಕೊಂಡು ಹೋದನು. ಅವನನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಅವನಿಗೆ ಊಟ ತಿಂಡಿ ಎಲ್ಲಾ ಕೊಟ್ಟು ಪ್ರೀತಿಯಿಂದ ನೋಡಿಕೊಂಡನು.
5ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************