
ಮಕ್ಕಳ ಕವನ : ರಕ್ಷಿತಾ
Sunday, May 8, 2022
Edit
ಮಕ್ಕಳ ಜಗಲಿಯಲ್ಲಿ
ರಕ್ಷಿತಾ ಬರೆದಿರುವ
ಮಕ್ಕಳ ಕವನ
ಭೂಮಿ ತಾಯಿ
-----------------
ಜನ್ಮ ಕೊಟ್ಟ ತಾಯಿ ಬೇರೆಯಲ್ಲ
ಭೂತಾಯಿ ಬೇರೆಯಲ್ಲ
ಇದ ತಿಳಿದು ಬಾಳಿದರೆ
ಒಬ್ಬಂಟಿತನ ನಿನಗಿಲ್ಲ
ಗಿಡ-ಮರಗಳ ಕಡಿದು
ಕಟ್ಟುವೆ ನೀ ಕಟ್ಟಡವ
ಹೇ ಮನುಜ ಅರಿತಿಲ್ಲವೇ
ಪರಿಸರದ ಸಹಜ ಸೌಂದರ್ಯವ...!!
ಭೂಮಿತಾಯಿ ಮಾಡುವಳು
ನಿನಗೆ ಸಹಕಾರ
ಆಗು ನೀ ಭೂಮಿಯಲ್ಲಿ ಸಾಹುಕಾರ
ಭೂಮಿಯ ಚಂದದ ಶೃಂಗಾರ
ಉಳಿಸು ನೀ ಭುವಿಯ ಬಂಗಾರ
ಹೇ ಮನುಜ ಅರಿತಿಲ್ಲವೇ
ಪರಿಸರದ ಸಹಜ ಸೌಂದರ್ಯವ...!!
ಹಚ್ಚಹಸಿರ ಸೀರೆಯನುಟ್ಟ ತಾಯಿ
ನೀ ಕೊಟ್ಟ ಕಷ್ಟಗಳ ಸಹಿಸುವಳೇ ಭುವಿ
ಉಳಿಸು-ಬೆಳೆಸು ನೀ ಪ್ರಕೃತಿಯ
ಹೇ ಮನುಜ ಅರಿವಿಲ್ಲವೇ
ಪರಿಸರದ ಸಹಜ ಸೌಂದರ್ಯವ..!!
9ನೇ ತರಗತಿ
ಸರಕಾರಿ ಫೌಢಶಾಲೆ ಮಾಣಿಲ ಮುರುವ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************