-->
ಪವನ್ ಕೆ ಬರೆದಿರುವ ಕವನಗಳು

ಪವನ್ ಕೆ ಬರೆದಿರುವ ಕವನಗಳು

ಪವನ್ . ಕೆ 
10ನೇ ತರಗತಿ
ನಿಸರ್ಗ ಕೋಡ್ತಿಲು
ಐವರ್ನಾಡು. ಸುಳ್ಯ. ದಕ್ಷಿಣ ಕನ್ನಡ ಜಿಲ್ಲೆ

ಮಕ್ಕಳ ಜಗಲಿಯಲ್ಲಿ  ಪವನ್ ಕೆ ಬರೆದಿರುವ 
ಕವನಗಳು


              ಹದಿಹರೆಯದ ಮಾತು 
             -----------------------
ಸಂಜೆಯ ಸೊಬಗಿನ ಸುಂದರ ಕಡಲಲಿ;
ನೊರೆಯದು ಅಪ್ಪಳಿಸುತ್ತಿದೆ ಅಲೆಯಲಿ,
ನಾ ನಡೆದೆ ಕಡಲಾಚೆಯ ನೋಡಲು;
ಹೊಳೆವ ನೊರೆ ಗುಳ್ಳೆಯ ಕಾಣುವ ನೆಪದಲಿ..!! 
    ಕಡಲಿನ ನಡುವಿನ ಬಂಡೆಯಲಿ ಕುಳಿತು;
    ಮುಳುಗಿದೆ ನಾ ಯಾತನೆಯಲಿ,
    ಮರುಕ್ಷಣದಲ್ಲೇ ನಡೆದೆ;
    ಹುಡುಕುತ್ತಾ ನೆನೆದವರ ಕಾಣುವ ಸರಸದಲಿ..!!
ತಿಳಿ ನೀರನ್ನು ನೋಡುತ ಹೊರಟೆನು;
ಪ್ರೀತಿಯ ಬೆಳಕನು ಹುಡುಕುವ ಹಠದಲಿ,
ತೀರಾ ಹತ್ತಿರ ನಡೆದದ್ದು ವಿಧಿಯ ಭ್ರಮೆಯಲಿ..!!
    ಹುಡುಕುವ ವೇಳೆ ಬರಿ ಶೂನ್ಯತೆ ;
    ತುಂಬಿತು ಪ್ರತಿ ಪುಟದ ಅದ್ಯಯದಲಿ,
    ಅರಿತೆನು ಹದಿಹರೆಯದ ಮನ ಎಂದು 
    ಪುಟ್ಟ ಹೃದಯದಲಿ..!!
...............................................ಪವನ್ . ಕೆ 
10ನೇ ತರಗತಿ
ನಿಸರ್ಗ ಕೋಡ್ತಿಲು
ಐವರ್ನಾಡು. ಸುಳ್ಯ. ದಕ್ಷಿಣ ಕನ್ನಡ ಜಿಲ್ಲೆ
*****************************************

          
         ಬರಡು ಜೀವನ
         -----------------------
ನಿತ್ಯವು ಅಲೆಮಾರಿಯಾಗಿ ತಿರುಗಾಡುವರು,
ಜೀವನವೆಂಬ ರಥವ ಸಾಗಿಸುವರು!
ಬಾಳಿನ ಬೆಳಕನು ಹುಡುಕುತ ಇವರು,
ವಲಸೆ ಜೀವನ ಮಾಡುತಿಹರು!
    ಯೋಗ್ಯಕರದ ಮೂಲಗಳಿಲ್ಲದೆ ,
    ಬಾಳಲಿ ನೊಂದುತ ಯೋಚಿಸುವರು!
    ಸುಖದ ಜೀವನ ಪಡೆಯಲೆಂದು,
    ದಿನವಿಡೀ ಶ್ರಮವ ಪಡುತಿಹರು!
ಒಂದು ಹೊತ್ತಿನ ಗಂಜಿಗಾಗಿ,
ಊರೂರು ಅಲೆದು ತರುವರು!
ಶ್ರಮದ ಫಲವಾಗಿ ಸಿಕ್ಕ ಗಂಜಿಯ,
ಹಸಿದ ಮಗುವಿಗೆ ನೀಡುವರು!
    ಮುಂದಿನ ಪಯಣ ಹೇಗೆನ್ನುತಾ,
    ತುಸು ಹೊತ್ತಲಿ ಮಂಕಾಗಿ ಕೂರುವರು!
    ಮನದಿ ಮೂಡಿದ ಬಯಕೆಯ ನೆನೆದು,
    ದುಡಿಮೆಯ ಕಡೆಗೆ ಹೊರಡುವರು.!!
...............................................ಪವನ್ . ಕೆ 
10ನೇ ತರಗತಿ
ನಿಸರ್ಗ ಕೋಡ್ತಿಲು
ಐವರ್ನಾಡು. ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ
*****************************************           ವೈರಸ್.....!
       --------------------
ಜಗದಿಡೀ ಹಬ್ಬಿತು ವೈರಸ್,
ಮಾಡಿದರೆಲ್ಲರೂ ಕ್ಯಾರ್ಲೆಸ್ ,
ರೋಗಕ್ಕೆ ತುತ್ತಾಗಿ ಸೀರೆಸ್ ..! 
    ಶುರುಮಾಡಿತು ವೈರಸ್ ಕಾರುಬಾರು ,
    ಉಂಟಾಯಿತು ಎಲ್ಲರಿಗೂ ಆತುರ, 
    ತಂದಿತು ಮನದಲ್ಲಿ ಬೇಸರ...
ಅದುವೇ ಚೀನಾದ ಕೊರೋನಾ.!
ಏರು-ಪೇರಾಯಿತು ಜೀವನ..,
ಬಡಿತದಲ್ಲಾಯಿತು ಅಸಮತೋಲನ...
    ಬಗೆಬಗೆಯ ಸುಮಧುರ ಗಾನ.! 
    ಇವುಗಳಿಗೆ ಕೊರೋನವೇ ಕಾರಣ,
    ಜಗದಿಡೀ ಕೋಟಿ ಕೋಟಿ ಮರಣ...!
...............................................ಪವನ್ . ಕೆ 
10ನೇ ತರಗತಿ
ನಿಸರ್ಗ ಕೋಡ್ತಿಲು
ಐವರ್ನಾಡು. ಸುಳ್ಯ. ದಕ್ಷಿಣ ಕನ್ನಡ ಜಿಲ್ಲೆ
*****************************************             ಗೆಳೆತನ...!
      ----------------------
ಆಹಾ.. ಎಷ್ಟು ಒಳ್ಳೆಯ ಸ್ನೇಹತನ,
ಅದುವೇ ಕೃಷ್ಣಾ ಸುಧಾಮರ ಗೆಳೆತನ,
ಗೆಳೆತನದಿ ಇಲ್ಲ ಎಂದೂ ಬಡತನ,
ಆಗದಿರಲಿ ಎಂದೂ ಪತನ...
  ಒಂಟಿ ಸಲಗದ ನೆನಪಿನ ನನ್ನಯ ಪಯಣ,
  ಗೆಳೆತನದಿ ಹುಟ್ಟಿತು ವಿವಿಧ ಚ‌ರಣ,
  ಬದಲಾಯಿತು ಜೀವನದ ಹಾದಿಯ ಗುಣಲಕ್ಷಣ,
  ಬಿಗಿಯಾಗಿ ಬೆಸೆದಿರುವ ಗೆಳೆತನವೇ ಕಾರಣ..
ಬಾಳಿತು ಗೆಳತನದಿ ತನ್ಮಯ ಜೀವನ,
ಹಚ್ಚುತಾ ಎಂದೆಂದಿಗೂ ಚಂದನದ ಲೇಪನ,
ಬೆರಗು ಮೂಡಿಸಿತು ಗೆಳತನದಿ ಹಲವು ಚೇತನ,
ಈ ಸಾರ್ಥಕವಾದ ಬದುಕಿನ ಪಾವನಕ್ಕೆ ಎದೆಯಾಳದ ನಮನ..‌.
     ಚಿಕ್ಕ ಪುಟದಿ ಬೆರೆತಿಹ ಕಣ,
     ಮನತುಂಬಿತು ಜೀವನದಿ ನಾನಾ ಗುಣ,
     ಜೀವನದ ಹಾದಿಯುದ್ದಕ್ಕೂ 
     ತೀರಿಸಲಾಗದ‌‌ ಋಣ,
     ತುಂಬಿದೆ ಗೆಳತನದ ಈ ಕ್ಷಣ..‌.
ಗೆಳೆತನದಿ ಮರೆತೇ ಬೇಸರದ ದಿನ,
ಧೈರ್ಯದಿಂದ ಮುನ್ನುಗಲು ಛಲ ಪಡಿಸಿತು ಮನ,
ಪಿಸುಗುಟ್ಟಿದರು ಎಂತಹ ಬಾಂಧವ್ಯ ಎಂದು ಜನ,
ಬರೆದಿರುವೆ ಗೆಳತನದಿ ಕೂಡಿದ ಗಾನ....
...............................................ಪವನ್ . ಕೆ 
10ನೇ ತರಗತಿ
ನಿಸರ್ಗ ಕೋಡ್ತಿಲು
ಐವರ್ನಾಡು. ಸುಳ್ಯ. ದಕ್ಷಿಣ ಕನ್ನಡ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article